ಮೂಲಭೂತ ಹಕ್ಕುಗಳು

ಮೂಲಭೂತ ಹಕ್ಕುಗಳು

ಮೂಲಭೂತ ಹಕ್ಕುಗಳು ಸಂವಿಧಾನದ 3ನೇ ಭಾಗದಲ್ಲಿ & 12-35ವಿಧಿಗಳು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿರುತ್ತವೆ, ಅಮೇರಿಕಾದಿಂದ ಎರವಲು ಪಡೆಯಲಾಗಿದೆ,
ಮೂಲತಃ 7 ಹಕ್ಕುಗಳು, ಪ್ರಸ್ತುತ 6 ಮೂಲಭೂತ ಹಕ್ಕುಗಳು
44ನೇಯ ಸಂವಿಧಾನದ ತಿದ್ದುಪಡೆಯಲ್ಲಿ (1978 ಮೂರರ್ಜಿ ದೇಸಾಯಿ ಪ್ರಧಾನಿ)
31ನೇಯ ವಿದೀಯ ಆಸ್ತಿಯ ಹಕ್ಕನ್ನು ರದ್ದುಮಾಡಿ. ಅದನ್ನು 300 ಎವಿಧಿಯ ಪ್ರಕಾರ ಕಾನೂನು ವಿಷಯವನ್ನಾಗಿ
ಮಾಡಲಾಯಿತು.
ಸಾಮಾನ್ಯ ಕಾನೂನುಗಳಿಗೂ & ಮೂಲಭೂತ ಹಕ್ಕುಗಳ ವ್ಯತ್ಯಾಸ
ಸಮಾನತೆಯ ಹಕ್ಕು (ವಿಧಿ 14-18), ಸ್ವಾತಂತ್ರ್ಯದ ಹಕ್ಕು( 19-22 ),  ಶೋಷಣೆಯ ವಿರುದ್ಧ ಹಕ್ಕು (23-24), ಧಾರ್ಮಿಕ ಸ್ವಾತಂತ್ರ್ಯದ (25-28),
ಸಾಂಸ್ಕ್ರತಿಕ & ಶೈಕ್ಷಣಿಕ ಹಕ್ಕು (29-30), ಸಂವಿಧಾನಾತ್ಮಕ ಪರಿಹಾರ ಹಕ್ಕು (32-35).

ಸಮಾನತೆಯ ಹಕ್ಕು (ವಿಧಿ 14-18) :-
• 14ನೇ ವಿಧಿ ಪ್ರಕಾರ ಎಲ್ಲರು ಕಾನೂನಿನ ದೃಷ್ಟಿಯಲ್ಲಿ ಸಮಾನರು
• 15ನೇ ವಿಧಿ ಪ್ರಕಾರ ಧರ್ಮ, ಜಾತಿ, ಕುಲ, ಲಿಂಗ ಹುಟ್ಟಿದ ಸ್ಥಳದ ಆದಾರದ ಮೇಲೆ ಪಕ್ಷಪಾತ ಮಾಡುವಂತಿಲ್ಲ.
ಸಾರ್ವಜನಿಕ ಹೋಟೆ¯ಗಳು, ಸಾರ್ವಜನಿಕ ಮನರಂಜನಾ ಸ್ಥಳಗಳು, ಕೆರೆ, ಬಾವಿ, ರಸ್ತೆ, ಸಾರ್ವಜನಿಕ ವಿಶ್ರಾಂತಿ ಸ್ಥಳಗಳನ್ನು
ಉಪಯೋಗಿಸುವ ಸಮಾನ ಅವಕಾಶವಿದೆ.
• 16ನೇ ವಿಧಿ ಪ್ರಕಾರ ಸರ್ಕಾರಿ ನೌಕರಿಗೆ ಸೇರಲು ಎಲ್ಲರಿಗೂ ಸಮಾನ ಅವಕಾಶವಿದೆ.
• 17ನೇ ವಿಧಿ ಪ್ರಕಾರ ಅಸ್ಪøಶತೆಯನ್ನು ನಿಷೇಧಿಸಿದೆ.
• 18ನೇ ವಿಧಿ ಪ್ರಕಾರ ಮಿಲಿಟರಿ & ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಬಿರುದುಗಳನ್ನು ಹೋರತುಪಡಿಸಿ ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಗೆ ಯಾವುದೇ ಬಿರುದು ನೀಡುವದನ್ನು ನಿಷೇಧಿಸುತ್ತದೆ.

ಸ್ವಾತಂತ್ರ್ಯದ ಹಕ್ಕು (ವಿಧಿ 19 – 22)
19ನೇ ವಿಧಿಯು 6 ಸ್ವಾತಂತ್ರ್ಯಗಳನ್ನು ನೀಡಿದೆ. ಎಲ್ಲ ನಾಗರಿಕರಿಗೂ,
1. ವಾಕ್ ಸ್ವಾತಂತ್ರ್ಯ & ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವತಂತ್ರ್ಯ.
2. ಶಾಂತಿಯುತವಾಗಿ & ಶಸ್ತ್ರರಹಿತವಾಗಿ ಸಭೆ ಸೇರುವ ಸ್ವಾತಂತ್ರ್ಯ.
3. ಸಂಘ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ.
4. ದೇಶಾದ್ಯಂತ ಸಂಚರಿಸುವ ಸ್ವಾತಂತ್ರ್ಯ
5. ದೇಶದ ಯಾವುದೇ ಭಾಗದಲ್ಲಿ ವಾಸಿಸುವ
6. ಯಾವುದೇ ವೃತ್ತಿಯನ್ನು, ವ್ಯಾಪಾರ, ಉದ್ಯೋಗವನ್ನು ಕೈಗೊಳ್ಳುವ ಸ್ವಾತಂತ್ರ್ಯ

• 20ನೇ ವಿಧಿ, ಒಂದೇ ಅಪರಾಧಕ್ಕೆ ಎರಡು ಬಾರಿ ಶಿಕ್ಷೆ ವಿಧಿಸುವಂತಿಲ್ಲ.
• 21ನೇ ವಿಧಿ, ವ್ಯಕ್ತಿಯ ಜೀವ ಅಥವಾ ಸ್ವಾತಂತ್ರ್ಯವನ್ನು ಕಾನೂನುಬಾಹಿರವಾಗಿ ಕಸಿದುಕೊಳ್ಳುವಂತಿಲ್ಲ.
• 22ನೇ ವಿಧಿ, ನಿರಂಕುಶವಾಗಿ ದಸ್ತಗಿರಿಮಾಡಿ ಬಂದನದಲ್ಲಿ ಇಡುವಂತಿಲ್ಲ.
• 86ನೇಯ ಸಂವಿಧಾನದ ತಿದ್ದುಪಡಿಯ ಕಾಯ್ದೆ -2002ರಲ್ಲಿ ಸಂವಿಧಾನಕ್ಕೆ 21 ಎ ವಿಧಿಯನ್ನು ಸೇರಿಸಲಾಯಿತು, ಇದು 6 ರಿಂದ 14ವರ್ಷದ ಮಕ್ಕಳಿಗೆ ಉಚಿತ & ಕಡ್ಡಾಯ ಶಿಕ್ಷಣ ಬಗ್ಗೆ ಹೇಳಿದೆ, {Note 93ನೇಯ ಸಂವಿಧಾನ ತಿದ್ದುಪಡಿಯ ಮಸೂದೆ -2001, N D A ಸರ್ಕಾರ }.
ಶೋಷಣೆಯ ವಿರುದ್ಧ ಹಕ್ಕು (ವಿಧಿ 23-24):-
• 23ನೇ ವಿಧಿಯು ಸ್ತೀಯರನ್ನು ಅನೈತಿಕ ಕೆಲಸಗಳಿಗೆ ಉಪಯೋಗಿಸುವದು, ಒತ್ತಾಯದ ದುಡುಮೆ, ಹೆಣ್ಣುಮಕ್ಕಳ ಮಾರಾಟ, ನಿಷೇಧಿಸಿದೆ.
• 24ನೇ ವಿಧಿಯು, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಕಾರ್ಖಾನೆಗಳಲ್ಲಿ ನಿಷೇಧಿಸಲಾಗಿದೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ( ವಿಧಿ 25-28 ):  ಸಾಂಸ್ಕøತಿಕ & ಶೈಕ್ಷಣಿಕ ಹಕ್ಕು ( ವಿಧಿ 29 -30 )
• ದೇಶದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡಲು ಇದನ್ನು ಬಳಸಲಾಗಿದೆ.
• 29ನೇ ವಿಧಿ, ಅಲ್ಪಸಂಖ್ಯಾತರು ತಮ್ಮದೇ ಆದ ವಿಶಿಷ್ಟ ಭಾಷೆ, ಲಿಪಿ, ಸಂಸ್ಕøತಿಯನ್ನು ಕಾಪಾಡಿಕೊಳ್ಳುವುದನ್ನು ಹೇಳಿದೆ & ಸರ್ಕಾರದಿಂದ ನಡೆಸಲ್ಪಡುವ ಅಥವಾ ಅದರ ಸಹಾಯ ಧನದಿಂದ ನಡೆಯುತ್ತಿರುವ ವಿದ್ಯಾಸಂಸ್ಥೆಗಳು ಜಾತಿ, ಕುಲ, ಧರ್ಮ, ಅಥವಾ ಭಾಷೆಯ ಆಧಾರದ ಮೇಲೆ ಪ್ರವೇಶವನ್ನು ನಿರಾಕರಿಸಬಾರದು.
• 30ನೇ ವಿಧಿಯು, ಅಲ್ಪಸಂಖ್ಯಾತರು ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಹೊಂದಬಹುದು & ಅದರ ಆಡಳಿತವನ್ನು ನಡೆಸಬಹುದು.
• ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು & ಸುಪ್ರಿಂಕೋರ್ಟ್ ತೀರ್ಪು –

T M A Pai foundation Vs state of Karnataka (2002)Islamic Academy of Education & others Vs state of Karnataka (2003).A.Inamdar Vs state of Maharashtra (2005).

ಸಂವಿಧಾನಾತ್ಮಕ ಪರಿಹಾರ ಹಕ್ಕು :  ಸುಪ್ರಿಂಕೋರ್ಟ್ ರಿಟ್‍ನ ಕಾರ್ಯವ್ಯಾಪ್ತಿಗೂ & ಹೈಕೋರ್ಟ್ ರಿಟ್‍ನ ಕಾರ್ಯವ್ಯಾಪ್ತಿಗೂ ಇರುವ ವ್ಯತ್ಯಾಸ –ಮೂಲಭೂತ ಹಕ್ಕುಗಳಿಗೆ ಸಂಬಂಧಪಟ್ಟಂತ ಮೊಕ್ಕದ್ದಮೆಗಳು

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments