ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು)

ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ರಿಟ್ ಗಳು (ತಡೆಯಾಜ್ಞೆಗಳು)
(Writs embodied in Constitution) :

✍✍✍✍✍✍✍
'ಸಂವಿಧಾನದ ಹೃದಯ' ವೆಂದು ಕರೆಯಲ್ಪಡುವ ಸಂವಿಧಾನದ 3 ನೇ ಭಾಗದಲ್ಲಿರುವ 32 ನೇ ಪರಿಚ್ಛೇದದ ಅಡಿಯಲ್ಲಿ ರಿಟ್ ಗಳನ್ನು ಸೇರಿಸಲಾಗಿದೆ.

* ♻️♻️ರಿಟ್ (Writs): ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಅದರಲ್ಲಿ ನಿರ್ದಿಷ್ಟ ಪಡಿಸಿರುವ ಒಂದು ಕೃತ್ಯವನ್ನು ಮಾಡಲು ಅಥವಾ ಮಾಡದಿರಲು ಅಥವಾ ಮಾಡುವುದರಿಂದ ವಿಮುಖನಾಗಲು ನಿರ್ದೇಶಿಸಿ ನ್ಯಾಯಾಲಯ ಹೊರಡಿಸುವ ಲಿಖಿತ ಅಪ್ಪಣೆಗಳು ಅಥವಾ ವಿದ್ಯುಕ್ತ ಆದೇಶ (Written Commands) .

* ✳️ಸಂವಿಧಾನದ ಅನುಚ್ಛೇದ 32(2) ಮತ್ತು 226 ರ ಅನ್ವಯ ಕ್ರಮವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಮತ್ತು ಉಚ್ಚ ನ್ಯಾಯಾಲಯ ಗಳಿಗೆ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ರಿಟ್ ಗಳನ್ನು ಹೊರಡಿಸುವ ಅಧಿಕಾರವನ್ನು ಕೊಡುತ್ತದೆ.

ಅದು 32 ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯ ಕೇವಲ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ರಿಟ್ ಹೊರಡಿಸಬಹುದು.

ಆದರೆ ಅನುಚ್ಛೇದ 226ರ ಅಡಿಯಲ್ಲಿ ಉಚ್ಚ ನ್ಯಾಯಾಲಯಗಳು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮಾತ್ರವಲ್ಲದೆ ಬೇರಾವುದೇ ಕಾನೂನು ಸಮ್ಮತ ಹಕ್ಕುಗಳ ಜಾರಿಗೂ ರಿಟ್ ಹೊರಡಿಸಬಹುದು.

*➖➖➖ ರಿಟ್ ಗಳು (ತಡೆಯಾಜ್ಞೆಗಳು)(Writs) :

*⚪️ ಹೇಬಿಯಸ್ ಕಾರ್ಪಸ್ (Habeas Corpus) :
ಯಾವುದೇ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿಟ್ಟಾಗ ಆ ರೀತಿಯ ಬಂಧನಕ್ಕೆ ಕಾರಣವನ್ನು ತಿಳಿಯಲು ಬಂಧಿತ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಬಂಧಿಸಿದ ವ್ಯಕ್ತಿಗೆ ನೀಡುವ ಆದೇಶದ ರೂಪದಲ್ಲಿರುತ್ತದೆ. ಕಾನೂನು ಸಮರ್ಥನೆಯಿಲ್ಲದೇ ಬಂಧಿತನಾಗಿರುವ ವ್ಯಕ್ತಿಯನ್ನು ಮುಕ್ತಗೊಳಿಸುವುದೇ ಇದರ ಉದ್ದೇಶವಾಗಿರುವುದು.

- ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿಗಳನ್ನು ಈ ಕೆಳಗಿನವರು ದಾಖಲಿಸಬಹುದು;

1) ಸ್ವತಃ ಬಾಧಿತ ವ್ಯಕ್ತಿ.
2) ಆತನ ಪರವಾಗಿ ಬೇರೆ ಯಾವುದೇ ವ್ಯಕ್ತಿ

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments