ಭಾರತದ ವಿದೇಶಾಂಗ ನೀತಿ

ಭಾರತದ ವಿದೇಶಾಂಗ ನೀತಿ (PS)

ಮುಖ್ಯಾಂಶಗಳು:
• ಭಾರತದ ವಿದೇಶಾಂಗ ನೀತಿಯನ್ನು ವಿ±ಇಂμಂವಾಗಿ ನಿರೂಪಿಸಿದವರು ಜವಾಹರಲಾಲ ನೆಹರುರವರು ಆದ್ದರಿಂದ ಇವರನ್ನು ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಎಂದು ಕರೆಯುತ್ತಾರೆ.
• ವಿಶ್ವದ ಯಾವುದೇ ಬಣಕ್ಕೆ ಸೇರದೇ ಇರುವ ನೀತಿಯನ್ನು ಅಲಿಪ್ತ್ ನೀತಿ ಎನ್ನಬಹುದು.
• ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ವಸಾಹತುಶಾಹಿಗೆ ಒಳಪಟ್ಟಿತ್ತು.
• ಭಾರತದ ಸಂವಿಧಾನವು ತನ್ನ 51ನೇ ವಿಧಿಯ ಮೂಲಕ ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರಾಷ್ಟ್ರೀಯ ಕಾನೂನಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿ ಸೂಚಿಸುತ್ತದೆ.
• 1946 ಸೆಪ್ಟಂಬರ್ 7 ರಂದು ಜವಾಹರಲಾಲ ನೆಹರು ಅವರು ನೀಡಿದ ರೇಡಿಯೋ ಭಾಷಣದಲ್ಲಿ ವಿದೇಶಾಂಗ ನೀತಿಯ ರೂಪರೇಷಗಳ ಬಗ್ಗೆ ಅರಿವು ಮೂಡಿಸಿದ್ದರು.
• 1954ರಲ್ಲಿ ಭಾರತದ ಪ್ರದಾನಿ ನೆಹರು & ಚೀನಾದ ಪ್ರದಾನಿ ಚೌ.ಎನ್.ಲಾಯ್ ನಡುವೆ ವಿಶ್ವಶಾಂತಿ ದೃಷ್ಟಿಯಿಂದ ಪಂಚಶೀಲ ಒಪ್ಪಂದ ಏರ್ಪಟ್ಟಿತು.
• ಎರಡನೇ ಮಹಾಯುದ್ಧದ ನಂತರ ಅಮೇರಿಕಾ & ಸೋವಿಯತ್ ರಷ್ಯಾ ಬಣಗಳ ನಡುವೆ ಶೀತಲ ಯುದ್ದ ಆರಂಭವಾಯಿತು.
• ಮಾನವ ಹಕ್ಕುಗಳ ಉಲ್ಲಂಘನೆ ವಿಶ್ವಶಾಂತಿ & ಸಹಬಾಳ್ವೆಗೆ ಮಾರಕವಾಗುತ್ತದೆ.
• ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ನೆಲ್ಸನ್ ಮಂಡೇಲಾರವರು ಹೋರಾಟ ನಡೆಸಿದರು.
• ಭಾರತವು ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು ಜಗತ್ತು ಎರಡು ಬಣಗಳಾಗಿ ವಿಭಜನೆಯಾದ ಸಂದರ್ಭದಲ್ಲಿ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ವಿದೇಶಾಂಗ ನೀತಿ ಎಂದರೇನು?
  ಒಂದು ರಾಷ್ಟ್ರ ಅನ್ಯರಾಷ್ಟ್ರದೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿಯೇ ವಿದೇಶಾಂಗ ನೀತಿ ಎಂದು ಕರೆಯಲಾಗಿದೆ.

2. ಭಾರತದ ವಿದೇಶಾಂಗ ನೀತಿಯ ಉದ್ದೇಶ ಅಥವಾ ಗುರಿಗಳಾವವು?
• ರಾಷ್ಟ್ರದ ಭದ್ರತೆ
• ರಾಷ್ಟ್ರದ ಆರ್ಥಿಕ ಸಂವರ್ಧನೆ.
• ನಮ್ಮ ದೇಶದ ಸಾಂಸ್ಕøತಿಕ ಮೌಲ್ಯಗಳನ್ನು ಬೇರೆ ದೇಶದಲ್ಲಿ ಬಿತ್ತರಿಸುವದು.
• ಮಿತ್ರ ರಾಷ್ಟ್ರಗಳನ್ನು ಹೆಚ್ಚಿಸಿಕೊಂಡು ವಿರೋಧಿ ರಾಷ್ಟ್ರಗಳನ್ನು ನಿರ್ಭಂದಿಸುವುದು ಅಥವಾ ಹತ್ತಿಕ್ಕುವುದು.
• ವಿಶ್ವಶಾಂತಿ ಹಾಗೂ ಸಹಬಾಳ್ವೆಯನ್ನು ಸಾಧಿಸುವುದು.

3. ಸಾರ್ವಭೌಮ ರಾಷ್ಟ್ರವೆಂದರೇನು?
   ಸಾರ್ವಭೌಮ ರಾಷ್ಟ್ರವೆಂದರೆ ಯಾವುದೇ ರಾಷ್ಟ್ರ ಆಂತರಿಕವಾಗಲೀ, ಬಾಹ್ಯವಾಗಿಯಾಗಲಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿರುವದನ್ನು ಸಾರ್ವಭೌಮ ಅಥವಾ ಪರಮಾಧಿಕಾರವುಳ್ಳ ರಾಷ್ಟ್ರ ಎನ್ನಲಾಗಿದೆ.

4. ವಸಾಹತುಶಾಹಿತ್ವವನ್ನು ಭಾರತವು ವಿರೋಧಿಸಲು ಕಾರಣಗಳೇನು?
   ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಆ ದೇಶದ ಸಾರ್ವಭೌಮತ್ವವನ್ನು ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವದಕ್ಕೆ ವಸಾಹತುಶಾಹಿತ್ವ ಎಂದು ಕರೆಯುತ್ತಾರೆ. ವಸಾಹತುಶಾಹಿತ್ವವನ್ನು ವಿರೋಧಿಸಿ ಸ್ವಾತಂತ್ರ್ಯ ಗಳಿಸಿಕೊಂಡ ಭಾರತವು ಸ್ವಾಭಾವಿಕವಾಗಿಯೇ ಪ್ರಪಂಚದ ಯಾವುದೇ ಮೂಲೆಯಲ್ಲಿ ಇರಕೂಡದು ಎಂಬ ತನ್ನ ನಿಲುವನ್ನು
ಪ್ರತಿಪಾದಿಸಿದೆ.

5. ಪಂಚಶೀಲ ತತ್ವಗಳಾವವು?
   ಪಂಚಶೀಲ ತತ್ವಗಳು : ಕ್ರಿ ಶ 1954 ರಲ್ಲಿ ಚೀನಾದ ಪ್ರದಾನಿ ಚೌ ಎನ್‍ಲಾಯ್ ಮತು ಪಂಡಿತ ನೆಹರುರವರು ಮಾಡಿಕೊಂಡ ಒಪ್ಪಂದವು ಪಂಚಶೀಲ ತತ್ವಗಳನ್ನು ಒಳಗೊಂಡಿದೆ.
ಅವುಗಳೆಂದರೆ –
• ಪರಸ್ಪರರ ಪರಮಾಧಿಕಾರ ಮತ್ತು ಪ್ರಾದೇಶಿಕ ಐಕ್ಯತೆಗಳನ್ನು ಗೌರವಿಸುವದು.
• ಪರಸ್ಪರರ ಮೇಲೆ ಆಕ್ರಮಣ ಮಾಡದೇ ಇರುವದು.
• ದೇಶಗಳ ಒಳಾಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಇರುವದು.
• ಸಮಾನತೆ ಮತ್ತು ಪರಸ್ಪರ ಹಿತಸಾಧನೆಗೆ ಶ್ರಮಿಸುವದು.
• ಶಾಂತಿಯುತ ಸಹಜೀವನ.

6. ನಿಶ್ಯಸ್ತ್ರೀಕರಣ ಎಂದರೇನು?
  ನಿಶ್ಯಸ್ತ್ರೀಕರಣ ಎಂದರೆ ಕೆಲವು ನಿರ್ದಿಷ್ಟ ಬಗೆಯ ಅಥವಾ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದೇ ಆಗಿದೆ.

7. ಪ್ರಚಲಿತ ಜಗತ್ತಿಗೆ ನಿಶಸ್ತ್ರೀಕರಣ ಅತೀ ಅಗತ್ಯ ಎಂದು ಭಾರತ ಏಕೆ ಪ್ರತಿಪಾದಿಸುತ್ತಿದೆ? ವಿವರಿಸಿ.
• ನಿಶ್ಯಸ್ತ್ರೀಕರಣವೆಂದರೆ ಎಲ್ಲಾ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದೇ ಆಗಿದೆ.
• ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆ, ಮಾರಾಟ, ಸಂಗ್ರಹಣೆಯಲ್ಲಿ ಬಾರಿ ಪೈಪೋಟಿ ನಡೆದಿದೆ.
• ಶಸ್ತ್ರಾಸ್ತ್ರಗಳ ಪೈಪೋಟಿಯಿಂದ ಮೂರನೇ ಮಹಾಯುದ್ಧ ನಡೆಯಬಹುದೆಂಬ ಆತಂಕ ಹಲವು ರಾಷ್ಟ್ರಗಳಲ್ಲಿ ಉಂಟಾಗಿದೆ.
• ಶಸ್ತ್ರಾಸ್ತ್ರ ಪೈಪೋಟಿಗೆ ಒಳಗಾದ ರಾಷ್ಟ್ರಗಳು ಅಚಾತುರ್ಯದಿಂದಲೋ, ತಪ್ಪು ಗ್ರಹಿಕೆಯಿಂದಲೋ ಬೇಕಂತಲೇ ಒಂದರ ಮೇಲೊಂದು ಯುದ್ಧ ಶಸ್ತ್ರಾಸ್ತ್ರಗಳನ್ನು ಅದರಲ್ಲೂ ಅಣ್ವಸ್ತ್ರಗಳನ್ನು ತಯಾರಿಸಿ ಉಪಯೋಗಿಸುವ ಸಂಭವವಿರುತ್ತದೆ.
• ಭಾರತ ಶಾಂತಿಪ್ರೀಯ ರಾಷ್ಟ್ರವಾಗಿದ್ದು, ಶಾಂತಿ ಸೌಹಾರ್ಧತೆಗೆ ಒತ್ತು ನೀಡಿ ಪ್ರಚಲಿತ ಜಗತ್ತಿಗೆ ನಿಶ್ಯಸ್ತ್ರೀಕರಣ ಅತಿ ಅಗತ್ಯ ಎಂದು ಪ್ರತಿಪಾದಿಸುತ್ತಿದೆ.

8. ಭಾರತದ ವಿದೇಶಾಂಗ ನೀತಿಯನ್ನು ವಿವರಿಸಿ. ಅಥವಾ
ವಿದೇಶಾಂಗ ನೀತಿಯು ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿ ಹೇಗೆ?
• ದಿವಂಗತ ಜವಾಹರಲಾಲ ನೆಹರುವರು ಭಾರತದ ವಿದೇಶಾಂಗ ನೀತಿಯ ಶಿಲ್ಪಿಯಾಗಿದ್ದಾರೆ.
• ಭಾರತದ ವಿದೇಶಾಂಗ ನೀತಿಯಲ್ಲಿ ಅಹಿಂಸಾತತ್ವ, ಆದರ್ಶವಾದ, ಮಾನವೀಯ ಅನುಕಂಪ, ವ್ಯಾವಹಾರಿಕ ಕಾಠಿಣತೆಯನ್ನು ಕಾಣಬಹುದು.
• ಭಾರತದ ವಿದೇಶಾಂಗ ನೀತಿಯು ಶಾಂತಿ ಹಾಗೂ ಸಹಬಾಳ್ವೆ ತತ್ವದ ಮೇಲೆ ಆಧಾರಿತವಾಗಿದೆ.
• ವಿಶ್ವಶಾಂತಿ ಕಾಪಾಡಲೆಂದೇ ಎಲ್ಲಾ ರಾಷ್ಟ್ರಗಳೊಂದಿಗೆ ಸ್ನೇಹ ಹಾಗೂ ಸಹಬಾಳ್ವೆಯೊಂದಿಗೆ ಸಂಬಂಧಗಳನ್ನು ಮುಂದುವಿರಿಸಿಕೊಂಡು ಹೊಗಲು ನಿರ್ಧರಿಸಿತು.
• ಅಲಿಪ್ತ ನೀತಿಯು ಪಂಚಶೀಲ ತತ್ವಗಳನ್ನು ಒಳಗೊಂಡಿದೆ.
ಇದು ಒಟ್ಟಾರೆಯಾಗಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಹೇಳಬಹುದು.

9. ಭಾರತವು ಅಲಿಪ್ತನೀತಿಯನ್ನು ಪ್ರತಿಪಾಧಿಸುತ್ತಿದೆ. ಚರ್ಚಿಸಿ.
• ದ್ವೀತಿಯ ಜಾಗತಿಕ ಮಹಾಯುದ್ಧದ ನಂತರ ಜಗತ್ತು ಅಮೇರಿಕ & ರಷ್ಯಾ ಒಕ್ಕೂಟದ ನೇತೃತ್ವದಲ್ಲಿ ಎರಡು ಶಕ್ತಿ ಬಣಗಳಾಗಿ ವಿಭಾಗವಾಗಿತ್ತು.
• ಭಾರತವು ಯಾವ ಬಣಕ್ಕೆ ಸೇರದೇ ತಾಟಸ್ಥ್ಯ ನೀತಿಯನ್ನು ಅನುಸರಿಸಿತು ಇದೇ ಅಲಿಪ್ತ ನೀತಿ.
• ಅಲಿಪ್ತ ನೀತಿ ಎಂದರೆ ಎರಡು ಶಕ್ತಿಶಾಲಿ ಬಣಗಳ ಆಚೆ ನಿಂತು ಸ್ವತಂತ್ರವಾಗಿ ಅಭಿಪ್ರಾಯ ವ್ಯಕ್ತಪಡಿಸುವದಾಗಿದೆ.
• ನ್ಯಾಯ ಅನ್ಯಾಯ ಎರಡನ್ನೂ ನಿಷ್ಪಕ್ಷಪಾತವಾಗಿ ತೂಗಿ ನೋಡಿ ತಿರ್ಮಾನಿಸುವ ದೃಷ್ಟಿಕೋನವನ್ನು ಭಾರತವು ಪ್ರತಿಪಾದಿಸುತ್ತದೆ.
• ವಿಶ್ವದ ಪ್ರತಿಯೊಂದು ವಿದ್ಯಮಾನವನ್ನು ಅದರ ಗುಣ ದೋಷಗಳ ಆಧಾರದ ಮೇಲೆ ಸ್ವಾಗತಿಸುವ ಅಥವಾ ವಿರೋಧಿಸುವ ಸ್ವತಂತ್ರ ಕಾರ್ಯಶೈಲಿಯನ್ನು ಭಾರತ ರೂಪಿಸಿತು.

10. ವರ್ಣಭೇದ ನೀತಿಯ ಬಗ್ಗೆ ಭಾರತದ ನೀಲುವೇನು? ತಿಳಿಸಿ.
   ವರ್ಣಭೇದ ನೀತಿಯು ಅಮಾನವೀಯ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗಿತ್ತದೆ. ಇಂತಹ ವರ್ಣಭೇದನೀತಿಯು ಜಗತ್ತಿನಲ್ಲಿ ಎಲ್ಲಿಯೂ ಯಾವ ರಾಷ್ಟ್ರವೂ ಅನುಸರಿಸಬಾರದು ಎಂಬ ವಿದೇಶಾಂಗ ನೀತಿಯನ್ನು ಭಾರತ ಹೊಂದಿದೆ.

11. ವರ್ಣಭೇದ ನೀತಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಹೇಳಿಕೆಯನ್ನು ವಿಮರ್ಶಿಸಿ.
    ವರ್ಣಗಳ ಆಧಾರದ ಮೇಲೆ ಒಂದು ಜನಸಮುದಾಯ ಇನ್ನೊಂದು ಜನಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ಅತ್ಯಂತ ಕ್ರೂರ ಅಥವಾ ದೌರ್ಜನ್ಯದಿಂದ ನಡೆಸಿಕೊಳ್ಳುವದನ್ನು ವರ್ಣಭೇದ ನೀತಿ ಎಂದು ಕರೆಯುವರು. ಈ ವರ್ಣಭೇದ ನೀತಿಯು ಅಮಾನವೀಯ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸಿ ವಿಶ್ವಶಾಂತಿ ಮತ್ತು ಸಹಬಾಳ್ವೆಗೆ ಮಾರಕವಾಗುತ್ತದೆ.

12. ದಕ್ಷಿಣ ಆಫ್ರಿಕಾದಲ್ಲಿ ಅನುಸರಿಸಿದ ವರ್ಣಭೇದ ನೀತಿಯ ಬಗ್ಗೆ ವಿವರಿಸಿ.
• ಬಿಳಿಯರು ಕರಿಯರನ್ನು ಅತ್ಯಂತ ಕ್ರೂರ ಮತು ದೌರ್ಜನ್ಯದಿಂದ ನಡೆಸಿಕೊಳ್ಳುತ್ತಿದ್ದುದನ್ನು ವರ್ಣಭೇದ ನೀತಿ ಎನ್ನುವರು.
• ದಕ್ಷಿಣ ಆಪ್ರಿಕಾದಲ್ಲಿ ಅತ್ಯಂತ ಕ್ರೂರ ಹಾಗೂ ದಮನಕಾರಿ ವರ್ಣಭೇದ ನೀತಿಯನ್ನು ಅನುಸರಿಸಲಾಗುತ್ತಿತ್ತು.
• ಕರಿಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು.
• ಕಪ್ಪು ಜನರನ್ನು ಗುಲಾಮರಂತೆ ಮಾರಾಟ ಮಾಡಲಾಗುತ್ತಿತ್ತು.
• ನೆಲ್ಸನ್ ಮಂಡೆಲಾರ ನೇತೃತ್ವದಲ್ಲಿ ಕರಿಜನರು ದೀರ್ಘ ಹೋರಾಟ ನಡೆಸಿ ವರ್ಣಭೇದನೀತಿಯನ್ನು ಕೊನೆಗಾಣಿಸಿದರು. ಹಾಗಾಗಿ ಇವರನ್ನು ಆಪ್ರಿಕಾದ ಗಾಂಧಿ ಎಂದು ಕರೆಯುತ್ತಾರೆ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments