ಸಂವಿಧಾನದ 123ನೇ ತಿದ್ದುಪಡಿ

ಸಂವಿಧಾನದ 123ನೇ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ. :
~~~~~~~~~~~~~~~~~~~~~~~~~~~~~~~~~
# ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನ ಮಾನ ನೀಡುವ ಸಂವಿಧಾನದ 123ನೇ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ.

# ಮಸೂದೆಯ ಪರವಾಗಿ ಸದನದಲ್ಲಿ 360 ಸಂಸದರು ಮತ ಚಲಾಯಿಸಿದರೆ, ಇಬ್ಬರು ವಿರುದ್ಧವಾಗಿ ಮತ ಚಲಾಯಿಸಿದರು.

ಸಂವಿಧಾನದ 123ನೇ ತಿದ್ದುಪಡಿ ಮಸೂದೆ- 2017ರ ಪ್ರಮುಖ
ಉದ್ದೇಶವೆಂದರೆ:
~~~~~~~~~~~~~~~~~~~~~~~~~~~~~~~
# ಇದು ಸಂವಿಧಾನದ 338 ಬಿ ವಿಧಿಯನ್ನು ಹೊಸದಾಗಿ ಸೇರಿಸಲಿದೆ.

# ಇದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ರಚನೆಗೆ ಅವಕಾಶ ನೀಡುತ್ತದೆ.

# ಜತೆಗೆ ಆಯೋಗದ ಸಂಯೋಜನೆ, ಕಾರ್ತಸೂಚಿ, ಕಾರ್ಯಗಳು ಹಾಗೂ ವಿವಿಧ ಅಧಿಕಾರಿಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

# ಅಂತೆಯೇ 342 ಎ ಉಪವಿಧಿಯನ್ನೂ ಸಂವಿಧಾನಕ್ಕೆ ಸೇರಿಸಲಾಗುತ್ತಿದ್ದು, ಇದು ರಾಷ್ಟ್ರಪತಿಗಳು ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯ ಅಧಿಸೂಚನೆ ಹೊರಡಿಸಲು ಅಧಿಕಾರ ನೀಡುತ್ತದೆ.

# ರಾಜ್ಯಗಳ ವಿಚಾರದಲ್ಲಿ ರಾಷ್ಟ್ರಪತಿಗಳು ಈ ಪಟ್ಟಿಯ ಅಧಿಸೂಚನೆ ಹೊರಡಿಸುವ ಮುನ್ನ ಆಯಾ ರಾಜ್ಯದ ರಾಜ್ಯಪಾಲರ ಸಲಹೆಯನ್ನು ಪಡೆಯುತ್ತಾರೆ.

# ಇದೇ ವಿಧಿಯಲ್ಲಿ ಹೊಸದಾಗಿ ಮತ್ತೊಂದು ಅವಕಾಶ ಕಲ್ಪಿಸಲಾಗಿದ್ದು, ಕೇಂದ್ರ ಸರ್ಕಾರ ಕೇಂದ್ರ ಪಟ್ಟಿಗೆ ಹೊಸದಾಗಿ ಯಾವುದೇ ಜಾತಿಯನ್ನು ಸೇರಿಸುವ ಅಥವಾ ಕಿತ್ತುಹಾಕುವ ಸಂಬಂಧ ಕಾಯ್ದೆಗಳನ್ನು ರೂಪಿಸಲು ಅಧಿಕಾರ ಇರುತ್ತದೆ

ಹಿನ್ನೆಲೆ
---------
# ಭಾರತ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗವನ್ನು 1987ರಲ್ಲಿ ವಿಶೇಷ ನಿರ್ಣಯದ ಮೂಲಕ ಆರಂಭಿಸಿದೆ.

# ಈ ಆಯೋಗಕ್ಕೆ ಸಂವಿಧಾನದ 65ನೇ ತಿದ್ದುಪಡಿ ಮಸೂದೆಯನ್ನು 1990ರಲ್ಲಿ ಅನುಮೋದಿಸುವುದರೊಂದಿಗೆ ಸಂವಿಧಾನಾತ್ಮಕ ಸ್ಥಾನಮಾನ ಲಭಿಸಿದೆ.

# ಈ ಕಾಯ್ದೆಗೆ ಅನುಗುಣವಾಗಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವನ್ನು 1992ರಲ್ಲಿ ರಚಿಸಲಾಗಿದೆ.

# 2003ರಲ್ಲಿ 89ನೇ ತಿದ್ದುಪಡಿ ಕಾಯ್ದೆಯ ಮೂಲಕ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವನ್ನು ಎರಡು ವಿಭಿನ್ನ ಆಯೋಗಗಳಾಗಿ ವಿಭಜಿಸಲಾಗಿದೆ.

# ಒಂದು ಎನ್‍ಸಿಎಸ್‍ಸಿ ಹಾಗೂ ಇನ್ನೊಂದು ಎನ್‍ಸಿಎಸ್ಟಿ. ಇದಕ್ಕಾಗಿ ಸಂವಿಧಾನಕ್ಕೆ 338-ಎ ವಿಧಿ ಸೇರಿಸಲಾಗಿದೆ.

# ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಹಿಂದುಳಿದ ವರ್ಗಗಳ ದೂರು ಹಾಗೂ ಅಹವಾಲುಗಳನ್ನು ಸ್ವೀಕರಿಸುವ ಅಧಿಕಾರವನ್ಣೂ ನೀಡಲಾಗಿದೆ.

# ಆದಾಗ್ಯೂ 1992ರಲ್ಲಿ ಸುಪ್ರೀಂಕೋರ್ಟ್ ಇಂದ್ರಾ ಸ್ವಹಾನಿ ಪ್ರಕರಣದಲ್ಲಿ, ಕಾಯಂ ಸಂಸ್ಥೆಗಳನ್ನು ಹುಟ್ಟುಹಾಕುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

# ಎಲ್ಲ ಸೌಲಭ್ಯಗಳು ಮತ್ತು ಹಕ್ಕುಗಳ ರಕ್ಷಣೆಗಾಗಿ ವಿವಿಧ ಹಿಂದುಳಿದ ವರ್ಗಗಳ ಸೇರ್ಪಡೆ ಮತ್ತು ಬೇರ್ಪಡೆ ಅಧಿಕಾರವನ್ನೂ ಆಯೋಗಕ್ಕೆ ನೀಡಲಾಗಿದೆ.

# ಇದಕ್ಕೆ ಅನುವು ಮಾಡಿಕೊಡುವ ಸಲುವಾಗಿ ಸಂಸತ್ತು 1993ರಲ್ಲಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ ಕಾಯ್ದೆಯನ್ನು ಅನುಮೋದಿಸಿದೆ.

# ಇದರ ಅನ್ವಯ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ಶಾಸನಾತ್ಮಕ ಸಂಸ್ಥೆಯಾಗಿ ರೂಪಿಸಿದೆ. ಪ್ರಸ್ತುತ ಈ ಸಂಸ್ಥೆಯು ಹಿಂದುಳಿದ ವರ್ಗಗಳ ಸೇರ್ಪಡೆ ಮತ್ತು ಬೇರ್ಪಡೆ ಜವಾಬ್ದಾರಿಯನ್ನು ಹೊಂದಿದೆ.

# ಈ ವರ್ಗಗಳ ಹಿತಾಸಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂರಕ್ಷಿಸುವ ಸಲುವಾಗಿ, ಎನ್‍ಸಿಬಿಸಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವುದು ಅಗತ್ಯವಾಗಿತ್ತು.

# ಇದೀಗ ಮಸೂದೆಯು ರಾಜ್ಯಸಭೆಯಲ್ಲಿ ಅನುಮೋದನೆಯಾಗಬೇಕಿದೆ. ಬಳಿಕ ಇದು ಕಾಯ್ದೆಯಾಗಿ ಪರಿವರ್ತನೆಯಾಗುತ್ತದೆ.

# ಈ ಮಸೂದೆ ಕಾಯ್ದೆಯಾಗಿ ಪರಿವರ್ತನೆಯಾದ ಬಳಿಲ 1993ರ ರಾಷ್ಟ್ರೀಯ ಹಿಂದುಳಿ ವರ್ಗಗಳ ಆಯೋಗದ ಕಾಯ್ದೆಯು ಇದೀಗ ಅಪ್ರಸ್ತುತವಾಗಲಿದೆ. ಈ ಹಳೆ ಕಾಯ್ದೆಯನ್ನು ರದ್ದು ಮಾಡುವ ಸಂಬಂಧ ಕೂಡಾ ಲೋಕಸಭೆ ಪ್ರತ್ಯೇಕ ಮಸೂದೆಗೆ ಆಂಗೀಕಾರ ನೀಡಿದೆ.
@ಸಾಗರ್

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments