Sunday, 8 September 2019

ಏನಿದು ಕಲಂ 370? ಮೋದಿ ಸರ್ಕಾರ ಇದನ್ನು ರದ್ದು ಮಾಡಿದ್ದೇಕೆ? ಇದರಿಂದ ಏನೆಲ್ಲಾ ಬದಲಾವಣೆ ಆಗಲಿದೆ ಕಾಶ್ಮೀರದಲ್ಲಿ? ಇಲ್ಲಿದೆ ಉತ್ತರ!!

ಏನಿದು ಕಲಂ 370? ಮೋದಿ ಸರ್ಕಾರ ಇದನ್ನು ರದ್ದು ಮಾಡಿದ್ದೇಕೆ? ಇದರಿಂದ ಏನೆಲ್ಲಾ ಬದಲಾವಣೆ ಆಗಲಿದೆ ಕಾಶ್ಮೀರದಲ್ಲಿ? ಇಲ್ಲಿದೆ ಉತ್ತರ!!
ದೇಶ / ವಿದೇಶ

ಏನಿದು ಕಲಂ 370? ಮೋದಿ ಸರ್ಕಾರ ಇದನ್ನು ರದ್ದು ಮಾಡಿದ್ದೇಕೆ? ಇದರಿಂದ ಏನೆಲ್ಲಾ ಬದಲಾವಣೆ ಆಗಲಿದೆ ಕಾಶ್ಮೀರದಲ್ಲಿ? ಇಲ್ಲಿದೆ ಉತ್ತರ!!
ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ರೂಪಪಡೆದಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರ್ಯವಾಗಿ ಉಳಿಯುವ ಬಯಕೆಯನ್ನು ಹೊಂದಿದ್ದರು.

ಆದರೆ, ಕಣಿವೆ ರಾಜ್ಯದ ಮೇಲೆ  1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೇಳುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾನೆ. ಹೀಗೆ ಹುಟ್ಟುಪಡೆದದ್ದೇ ಕಲಂ 370. ಕಾಲಾನಂತರದಲ್ಲಿ ಕಲಂ 35ಎ ನ್ನು ಸೇರ್ಪಡೆಗೊಳಿಸಲಾಯಿತು.

ಸಂವಿಧಾನದ 370 ನೇ ವಿಧಿಯ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಆರು ವಿಶೇಷ ಸವಲತ್ತುಗಳನ್ನು, ಉಪಕ್ರಮಗಳನ್ನು ಹಾಗೂ ವಿನಾಯಿತಿಗಳನ್ನು ನೀಡಲಾಗಿದೆ.

1.ಜಮ್ಮು ಮತ್ತು ಕಾಶ್ಮೀರ ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು.

2.ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಈ ಖಾತೆಗಳಿಗೆ ಮಾತ್ರ ಭಾರತದ ಕಾನೂನು ಹಾಗೂ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತದೆ.

3.ಭಾರತದ ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನಗೊಳಿಸಬೇಕು ಎಂದರೆ ಜಮ್ಮು-ಕಾಶ್ಮೀರದ ಅನುಮತಿ ಪಡೆಯಬೇಕು

4.ಜಮ್ಮು-ಕಾಶ್ಮೀರ ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು.

5.ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗುವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ ಅಂದಂಗಾಯಿತು.

6.ರಾಷ್ಟ್ರಪತಿ ಏನಾದರು ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರಕಾರದ ಶಿಫಾರಸು ಅಗತ್ಯ.

ಹೀಗೆ ಕಲಂ 370 ರ ಅಡಿಯಲ್ಲಿ ಆರು ಪ್ರಮುಖ ಸವಲತ್ತುಗಳನ್ನು ಸಂವಿಧಾನದ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದೆ. ಇದಲ್ಲದೆ ಕಲಂ 35(ಎ) ಅಡಿಯಲ್ಲಿ.

1.ಭಾರತ ಸರಕಾರದ ಕಾಯ್ದೆ ತಿದ್ದುಪಡಿಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸುವುದಿಲ್ಲ.

2.ಕಾಶ್ಮೀರಿಗಳಿಗೆ ಮೂಲ ಹಾಗೂ ಶಾಶ್ವತ ನಿವಾಸಿಗಳು ಎಂಬ ಗುರುತು.

3.ಈ ಕಾನೂನಿನ ಅನ್ವಯ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಕಣಿವೆ ರಾಜ್ಯದಲ್ಲಿ ಸ್ಥರಾಸ್ತಿ ಚರಾಸ್ತಿಗಳನ್ನು ಹೊಂದುವ ಹಕ್ಕಿಲ್ಲ.

4.ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿಲ್ಲ.

5.ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ. ಹಾಗೂ ಸರಕಾರದ ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ.

6.ರಾಜ್ಯ ಸರಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿಲ್ಲ.

7.ಬೇರೆ ರಾಜ್ಯದವರು ಇಲ್ಲಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ.

ಈ ಎಲ್ಲಾ ಸವಲತ್ತುಗಳು ಕೇವಲ ಕಾಶ್ಮೀರದ ಮೂಲ ಹಾಗೂ ಶಾಶ್ವತ ನಿವಾಸಿಗಳಿಗೆ ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಸಂವಿಧಾನದ ಕಲಂ 370 ಹಾಗೂ 45 (ಎ) ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ತೀರಾ ಹಿಂದುಳಿದಿರುವ ಕಾರಣ ಜಮ್ಮು-ಕಾಶ್ಮೀರಕ್ಕೆ ಸಂವಿಧಾನ ಬದ್ಧವಾಗಿ ಈ ಸವಲತ್ತುಗಳನ್ನು ನೀಡಲಾಗಿದೆ.

ಕಾಶ್ಮೀರ ಮಾತ್ರವಲ್ಲದೆ 371(ಎ) ವಿಧಿಯ ಅಡಿಯಲ್ಲಿ ನಾಗಾಲ್ಯಾಂಡ್, 371(ಜಿ) ವಿಧಿಯ ಅನ್ವಯ ಮಿಝೋರಾಮ್ ರಾಜ್ಯಗಳಿಗೂ ಸಹ ಇದೇ ರೀತಿಯ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಈ ರಾಜ್ಯಗಳಿಗಿರುವ ಇತಿಹಾಸದ ಕಾರಣಕ್ಕಾಗಿಯೇ ಈ ವಿಶೇಷ ಸವಲತ್ತುಗಳನ್ನು ನೀಡಲಾಗಿರುವುದು ಉಲ್ಲೇಖಾರ್ಹ.

ಆದರೆ, ಜಮ್ಮು-ಕಾಶ್ಮೀರದ ಗಡಿ ಭಾಗಗಳಲ್ಲಿ ಜನಸಾಮಾನ್ಯರು ಹಾಗೂ ಗಡಿ ಭದ್ರತಾ ಪಡೆಗಳ ನಡುವಿನ ನಿರಂತರ ಚಕಮಕಿಯ ಕಾರಣದಿಂದಾಗಿಯೇ ಕಲಂ 370 ಹಾಗೂ 35(ಎ) ತಿದ್ದುಪಡಿ ತರಬೇಕು ಎಂಬ ಕೂಗು ಬಲವಾಗಿಯೇ ಕೇಳಿಬರುತ್ತಿತ್ತು. ಈ ಕುರಿತು ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ, ಆದರೆ, ಇದೀಗ ಈ ಕೂಗಿಗೆ ರಾಜಕೀಯ ಬಣ್ಣವೂ ಪ್ರಾಪ್ತಿಯಾಗಿದ್ದು, ಈ ಕಾಯ್ದೆಯನ್ನು ರದ್ದುಪಡಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಕಾರ್ಯರೂಪಕ್ಕೂ ಮುಂದಾಗಿದೆ.

ಆದರೆ, ಕಲಂ 370ನ್ನು ರದ್ದುಗೊಳಿಸಿದರೆ ಕಣಿವೆ ರಾಜ್ಯದಲ್ಲಿ ಗಲಭೆಗಳು ಭುಗಿಲೇಳುವ ಸಾಧ್ಯತೆಗಳೂ ಇದೆ, ಅಲ್ಲದೆ ಸ್ವತಂತ್ರ್ಯ ರಾಷ್ಟ್ರದ ಕೂಗಿಗೆ ಪ್ರತ್ಯೇಕತಾವಾದಿಗಳ ಕಾರ್ಯಾಚರಣೆಗೆ ಮತ್ತಷ್ಟು ಬಲಗೊಳ್ಳಲಿದೆ ಎಂದೂ ಹೇಳಲಾಗುತ್ತಿದೆ. ಈ ನಡುವೆ ಕಣಿವೆ ರಾಜ್ಯದಲ್ಲಿ ಪ್ರಸ್ತುತ ಯುದ್ಧದ ವಾತಾವರಣವೇ ನಿರ್ಮಾಣವಾಗಿದ್ದು, ಈ ಸೂಕ್ಷ್ಮ ವಿಚಾರವನ್ನು ಕೇಂದ್ರ ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದನ್ನು ನಂತರದ ದಿನಗಳು ಸ್ಪಷ್ಟಪಡಿಸಲಿವೆ.

Friday, 15 June 2018

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG)

🔘ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG)

➡️ನಮ್ಮ ದೇಶದ ಸಾರ್ವಜನಿಕ ಹಣಕಾಸು ನಿಯಂತ್ರಣದಲ್ಲಿ  ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಪಾತ್ರ ಅತ್ಯಂತ ಮಹತ್ವಪೂರ್ಣದ್ದಾಗಿದೆ.  2-G ಸೆಕ್ಟ್ರಮ್,  ಕಾಮನ್ ವೆಲ್ತ್ ಗೇಮ್ಸ್ ಮತ್ತು ಕೋಲ್ ಗೇಟ್ ದಂಥ ಪ್ರಮುಖ ಅವ್ಯವಹಾರದ ಹಗರಣಗಳು ಬೆಳಕಿಗೆ ಬಂದಿದ್ದು ಮಹಾಲೆಕ್ಕ ಪರಿಶೋಧಕರಿಂದಲೇ. 

➡️CAG ಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ( PAC - Public Account Committee ) ಯೊಂದಿಗೆ ಜೋಡಿಸಲಾಗಿತ್ತು.  ಇದನ್ನು PAC ಯಿಂದ ಪ್ರತ್ಯೇಕಿಸಿ ಸ್ವತಂತ್ರವಾಗಿಸಿದವರು 2006 ರಿಂದ 2013 ರವರೆಗೆ CAG ಆಗಿದ್ದ ವಿನೋದ್ ರಾಯ್ ರವರು.

🔘ಮುಖ್ಯಾಂಶಗಳು:

➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು  ರಾಷ್ಟ್ರಪತಿಯವರು ನೇಮಿಸುತ್ತಾರೆ.

➡️ಸಂವಿಧಾನದ 148 ನೇ ಅನುಚ್ಛೇದದ ಪ್ರಕಾರ ಭಾರತಕ್ಕೆ ಒಬ್ಬ  ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಇರುತ್ತಾರೆ.

➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಧಿಕಾರವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯ ಮುಂದೆ ಅಥವಾ ರಾಷ್ಟ್ರಪತಿಯು ಆ ಬಗ್ಗೆ ನೇಮಕ ಮಾಡಿದ ಒಬ್ಬ ವ್ಯಕ್ತಿಯ ಮುಂದೆ  ಸಂವಿಧಾನದ 3 ನೇ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ವಚನವನ್ನು ಸ್ವಿಕರಿಸತಕ್ಕದ್ದಾಗಿದೆ.

➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವೇತನ ಮತ್ತು ಸೇವೆಯ ಕರ್ತವ್ಯಗಳು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾಗಿದ್ದು,  ಅವುಗಳನ್ನು ಸಂವಿಧಾನದ 2 ನೇ ಅನುಸೂಚಿಯಲ್ಲಿ ತಿಳಿಸಲಾಗಿದೆ.
➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಅಧಿಕಾರಾವಧಿ 6 ವರ್ಷಗಳು ಅಥವಾ 65 ವರ್ಷ ಪೂರ್ಣಗೊಳ್ಳುವವರೆಗೆ ಸೇವೆ ಸಲ್ಲಿಸತಕ್ಕದ್ದು.  ಇವರ ವೇತನ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ವೇತನಕ್ಕೆ ಸಮನಾಗಿರುತ್ತದೆ ಹಾಗೂ ಇವರ ವೇತನ ಮತ್ತು ಇತರ ಸೇವಾ ನಿಯಮಗಳು ಸಂಸತ್ತಿನ ಕಾಯ್ದೆಯ ಪ್ರಕಾರ ಇರುತ್ತದೆ.

➡️ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ ಅಕೌಂಟನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ವರದಿಯನ್ನು ಒಪ್ಪಿಸುತ್ತಾರೆ.  ರಾಷ್ಟ್ರಪತಿಯವರು ಸಂಸತ್ತಿನ ಮುಂದಿಡುತ್ತಾರೆ.

➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG) ಕೇಂದ್ರ ಮತ್ತು ರಾಜ್ಯಗಳ ಹಾಗೂ ಸಂಸತ್ತಿನ ಕಾಯ್ದೆಯನ್ವಯ  ಸ್ಥಾಪಿತವಾದ ಇತರ ಯಾವುದೇ ಪ್ರಾಧಿಕಾರದ ಅಥವಾ ಮಂಡಳಿಯ,  ಸರ್ಕಾರಿ ಕಂಪನಿಗಳ ಲೆಕ್ಕ ಖಾತೆಯನ್ನು ಸಹ ಆಡಿಟ್ ಮಾಡುತ್ತಾರೆ.
➡️(CAG) ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ಪದವಿಯಿಂದ ತೆಗೆದುಹಾಕಬೇಕಾದರೆ ಸಂಸತ್ತಿನ ತೀರ್ಮಾನದ ಮೇಲೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬಹುದು. ಪ್ರಧಾನಮಂತ್ರಿ ಮತ್ತು ಕೇಂದ್ರ ಕಾರ್ಯಾಂಗಕ್ಕೆ  ಇವರನ್ನು ತೆಗೆಯುವ ಅಧಿಕಾರ ಇರುವುದಿಲ್ಲ. ಮಹಾಭಿಯೋಗದ ಮೂಲಕ ಮಾತ್ರ ತೆಗೆಯಬಹುದು. 

➡️ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನಿವೃ ತ್ತಿ  ಹೊಂದಿದ ಮೇಲೆ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಿರುವ ಯಾವುದೇ ಹುದ್ದೆಗೆ ಅರ್ಹರಾಗಿರುವುದಿಲ್ಲ.

Monday, 11 June 2018

ಜಾಗತಿಕ ಸಂಸ್ಥೆಗಳ ಮುಖ್ಯಾಂಶಗಳು

ಜಾಗತಿಕ ಸಂಸ್ಥೆಗಳ ಮುಖ್ಯಾಂಶಗಳು

 ಮುಖ್ಯಾಂಶಗಳು:

• ವಿಶ್ವಸಂಸ್ಥೆಯು ಪ್ರಾರಂಭವಾದದ್ದು ಅಕ್ಟೋಬರ್ 24, 1945.

• ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.

• ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.

• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅವಧಿ ಒಂಬತ್ತು ವರ್ಷಗಳು.

• ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.

• ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು ಅಂಟೋನಿಯೋ ಗಟರ್ಸ್ (Antonio Guterres ಜನೆವರಿ1, 2017 ರಿಂದ)

• ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.

• ಸಾರ್ಕ ಸ್ಥಾಪನೆಯಾದ ವರ್ಷ 1985.

• ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).

• ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.

• ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.

• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.

• ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಂಸ್ಥೆ : 1948

• ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.

• ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.

• ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.

• ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.

 

ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದ ದೇಶಗಳ ಹೆಸರುಗಳು:

ಇಂಗ್ಲೆಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.

ವಿಶ್ವಸಂಸ್ಥೆಯ ಅಂಗಸಂಸ್ಥೆಗಳು:

1. ಸಾಮಾನ್ಯ ಸಭೆ

2. ಭದ್ರತಾ ಸಮಿತಿ

3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ

4. ಧರ್ಮದರ್ಶಿ ಸಮಿತಿ

5. ಸಚಿವಾಲಯ

6. ಅಂತರಾಷ್ಟ್ರೀಯ ನ್ಯಾಯಾಲಯ

 

ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು:

ಇಂಗ್ಲೆಂಡಅಮೆರಿಕಾರಷ್ಯಾಫ್ರಾನ್ಸ್ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು

 

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ಸೂಚಿಯಲ್ಲಿರುವ ವಿಷಯಗಳು:

ಜನಸಂಖ್ಯಾ ಸ್ಪೋಟ ತಡೆಗಟ್ಟುವದು, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕಾಂಶದ ಕೊರತೆ ಮುಂತಾದ ವಿಷಯಗಳು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿಷಯಗಳಾಗಿವೆ.

ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳು:

• ಎಲ್ಲಾ ಉದ್ಯೋಗಗಳಲ್ಲಿಯೂ ಕಾರ್ಮಿಕರ ಜೀವನ ಮಟ್ಟವನ್ನು ಉತ್ತಮಗೊಳಿಸುವದು.

• ಬಾಲ ಕಾರ್ಮಿಕರ ನೇಮಕ ತಡೆಯುವದು.

• ಸ್ತ್ರೀ ಕಾರ್ಮಿಕರಿಗೆ ಹೆರಿಗೆ, ಪೌಷ್ಟಿಕ ಆಹಾರ, ವಸತಿ, ಮನರಂಜನೆ ಮುಂತಾದ ಸೌಲಭ್ಯಗಳನ್ನು ಒದಗಿಸುವದು.

• ಉದ್ದಿಮೆಗಳ ಆಡಳಿತದಲ್ಲಿ ಕಾರ್ಮಿಕರಿಗೂ ಪಾಲುಗೊಳ್ಳುವ ಅವಕಾಶಗಳನ್ನು ಕಲ್ಪಿಸುವದು.

 

ವಿಶ್ವಸಂಸ್ಥೆಯ ಉದ್ದೇಶಗಳು:

• ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವದು.

• ವಿವಿಧ ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು ಬೆಳೆಸುವದು.

• ಮಾನವನ ಮೂಲಭೂತ ಹಕ್ಕುಗಳನ್ನು ರಕ್ಷಿಸುವದು.

• ಆಂತರಾಷ್ಟ್ರೀಯ ಸಮಸ್ಯೆಗಳನ್ನು ಅಂತರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು.

• ಅಂತರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವದು.

• ಪ್ರಪಂಚದ ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವದು.

 

ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳು:

• ಜನರ ಜೀವನ ಮಟ್ಟ ಸುಧಾರಿಸುವದು, & ಉದ್ಯೋಗಾವಕಾಶ ಒದಗಿಸುವದು.

• ನಿರಾಶ್ರಿತರ, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆಗಳನ್ನು ನಿವಾರಿಸಲು ಕ್ರಮವಹಿಸುವದು.

• ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸುವದು.

• ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಏರ್ಪಡಿಸುವದು.

• ಜನಾಂಗ, ಲಿಂಗ, ಭಾಷೆ, ಧರ್ಮಗಳ ಭೇದ ಭಾವನೆಗಳಿಗೆ ಆಸ್ಪದ ನೀಡದೇ ಎಲ್ಲಾ ಮಾನವರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವದು.

• ಮಾನವ ಸಂಪನ್ಮೂಲ, ಸಂಸ್ಕೃತಿ, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವದು.

 

ಯುನೆಸ್ಕೋದ ಕಾರ್ಯಗಳು:

• ಶಾಂತಿ ಸ್ಥಾಪನೆ.

• ಮಾನವನ ಹಕ್ಕುಗಳನ್ನು ರಕ್ಷಿಸುವದು

• ಶೈಕ್ಷಣಿಕ ಅಭಿವೃದ್ಧಿ ಸಾಧನೆ

• ಮಾನವರ ವಿಕಾಸಕ್ಕೆಂದೇ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆ.

• ಪರಿಸರ ಹಾಗೂ ಮಾನವರ ನಡುವೆ ಸಮತೋಲನ

• ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವದು.

 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಾರ್ಯಗಳು:

• ಪ್ರತಿ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಸಾಮಾನ್ಯ ಸಭೆಯ ಅಧಿವೇಶನವನ್ನು ಕರೆಯುವದು.

• ಪ್ರಮುಖ ವಿಷಯಗಳನ್ನು ಬಹುಮತದ ಸಿದ್ದಾಂತದಂತೆ ಅಥವಾ 2/3 ಮತಗಳ ಬೆಂಬಲದಿಂದ ನಿರ್ಧರಿಸುವದು.

• ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.

• ಪ್ರತಿಯೊಂದು ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು ನಿಗದಿ ಮಾಡುತ್ತದೆ.

 

ಸಾರ್ಕ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶ:

ಆರ್ಥಿಕ ಸಂಬಂಧಗಳ ವೃದ್ಧಿ, ಸಾಮಾಜಿಕ ಪ್ರಗತಿ ಹಾಗೂ ಸಾಂಸ್ಕೃತಿಕ ಬೆಳವಣಿಗೆಯನ್ನು ಪರಸ್ಪರ ಸಹಕಾರದೊಂದಿಗೆ ಸಾಧಿಸುವಿಕೆ ಸಾರ್ಕ ಸಂಸ್ಥೆಯ ಮೂಲ ಉದ್ದೇಶವಾಗಿದೆ.

 

ಆಹಾರ & ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶಗಳು:

• ಪೌಷ್ಟಿಕ ಆಹಾರ ಒದಗಿಸುವುದು.

• ಹಸಿವೆಯಿಂದ ಜಾಗತಿಕ ಜನಸಮುದಾಯವನ್ನು ವಿಮುಕ್ತಿಗೊಳಿಸುವುದು.

• ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದು.

• ಗ್ರಾಮಾಂತರ ಪ್ರದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವುದು.

 

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಗಳು:

• ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುತ್ತದೆ.

• ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ನೂತನ ಸದಸ್ಯರ ಆಯ್ಕೆಯನ್ನು ಶಿಫಾರಸ್ಸ

ು ಮಾಡುವ ಅಥವಾ ತಿರಸ್ಕರಿಸುವ ಆಧಿಕಾರವನ್ನು ಹೊಂದಿದೆ.

• ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯನ್ನು ಸೂಚಿಸುವ ಅಧಿಕಾರವನ್ನು ಹೊಂದಿದೆ.

• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ ಭಾಗವಹಿಸುತ್ತದೆ.

 

ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ರಚನೆ:

• ಈ ಸಮಿತಿಯು 15 ಪ್ರತಿನಿಧಿಗಳಿಂದ ಕೂಡಿದ್ದು, ಅದರಲ್ಲಿ 5 ಖಾಯಂ ಸದಸ್ಯರು ಹಾಗೂ 10 ಹಂಗಾಮಿ ಸದಸ್ಯರನ್ನು ಹೊಂದಿದೆ.

• ಇಂಗ್ಲಂಡ, ಅಮೇರಿಕಾ, ರಷ್ಯಾ, ಪ್ರಾನ್ಸ್, ಚೀನಾ ಖಾಯಂ ಸದಸ್ಯ ರಾಷ್ಟ್ರಗಳು

• ಖಾಯಂ ಸದಸ್ಯರಿಗೆ ‘ವಿಟೋ’ ಅಂದರೆ ನಿಷೇದಾತ್ಮಕ ಮತ ಚಲಾಯಿಸುವ ವಿಶೇಷ ಅಧಿಕಾರ ಇದೆ.

 

ವಿಶ್ವಸಂಸ್ಥೆಯ ಸಾಧನೆಗಳು:

• ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ.

• ವಿಶ್ವದ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ. ಉದಾ : ಸೂಯೇಜ್‍ಕಾಲುವೆ ಬಿಕ್ಕಟ್ಟು ನಿವಾರಣೆ, ಇರಾನ್ ¸ಸಂಘರ್ಷ, ಇಂಡೋನೆಷ್ಯಾ ಸ್ವಾತಂತ್ರ್ಯ ಘೋಷಣೆ.

• ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣ ನಿಟ್ಟಿನಲ್ಲಿ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.

• ವಿಶ್ವದ ಸಾಮಾಜಿಕ & ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮಾಡುತ್ತದೆ.

• ವರ್ಣಭೇದ ನೀತಿಯನ್ನು ಅಳಿಸಿ ಹಾಕುವಲ್ಲಿ, ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವ ಇತ್ಯಾದಿಗಳನ್ನು ಇಲ್ಲವಾಗಿಸುವಲ್ಲಿಯೂ ವಿಶ್ವಸಂಸ್ಥೆಯ ಪಾತ್ರ ಗಮನಾರ್ಹವಾದದು.

 

ಯುನಿಸೆಫ್ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶ:

ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.

ಸಾರ್ಕ ಸಂಸ್ಥೆಯ ಪ್ರಗತಿಗೆ ತೊಡಕಾಗಿರುವ ಅದರ ಸೂತ್ರ:
‘ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು’ ಎಂಬ ಸಾರ್ಕನ ಸೂತ್ರವು ಅದರ ಪ್ರಗತಿಗೆ ಒಂದು ತೊಡಕಾಗಿ ಪರಿಣಮಿಸಿದೆ.

 

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಗಳು:

• ಕಾಲರಾ, ಪ್ಲೇಗ್, ಮಲೇರಿಯಾ, ಸಿಡುಬು ಮುಂತಾದ ರೋಗಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಯತ್ನಿಸುತ್ತದೆ.

• ಏಡ್ಸ್, ಕ್ಯಾನ್ಸರ್‍ನಂತಹ ಭೀಕರ ರೋಗಗಳಿಂದ ಪ್ರಪಂಚವನ್ನು ಮುಕ್ತಿಗೊಳಿಸಲು ಪ್ರಯತ್ನಿಸುತ್ತದೆ.

• ಸಿಡುಬು ರೋಗವನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಈ ಸಂಸ್ಥೆ ಯಶಸ್ಸು ಕಂಡಿದೆ.

• ಜನಸಂಖ್ಯಾ ಸ್ಪೋಟ, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕತೆಯ ಕೊರತೆ ಮುಂತಾದ ವಿಷಯಗಳು ಈ ಸಂಸ್ಥೆಯ ಕಾರ್ಯ ಸೂಚಿಯಲ್ಲಿವೆ.
  

ನೆನಪಿಡಬೇಕಾದ ಸಂವಿಧಾನದ ವಿಧಿಗಳು

🇮🇳🇮🇳 🇮🇳🇮🇳    
# ನೆನಪಿಡಬೇಕಾದ ಸಂವಿಧಾನದ ವಿಧಿಗಳು #

1)  21(ಎ) ಶಿಕ್ಷಣದ ಹಕ್ಕು.

2) 24— ಕಾಖಾರ್ಖಾನೆ ಮುಂತಾದವುಗಳಲ್ಲ ಮಕ್ಕಳ ನಿಯೋಜನೆಗೆ ನಿಷೇಧ.

3) ವಿಧಿ 32— ಸಂವಿಧಾನಾತ್ಮಕ ಪರಿಹಾರದ ಹಕ್ಕು.

4) ವಿಧಿ 45—ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ.

5) ವಿಧಿ51—( ಎ  ) ಮೂಲ ಭೂತ ಕರ್ತವ್ಯಗಳು .

6) ವಿಧಿ 63— ಭಾರತದ ರಾಷ್ಟ್ರಪತಿ ನೇಮಕ.

7) ವಿಧಿ  72—ಕೆಲವು ಪ್ರಕರನದಲ್ಲ ಕ್ಷಮಾದಾನ & ಶಿಕ್ಷೆಯನ್ನು    ಅಮಾನತಿನಲ್ಲಡುವದು, ಮಾಫಿ ಅಥವಾ ಪರಿವರ್ತನೆ ಮಾಡಲು ರಾಷ್ಟ್ರಪತಿಗೆ ಅಧಿಕಾರ.

8) ವಿಧಿ 76— ಭಾರತದ ಅಟಾರ್ನಿ ಜನರಲ್ ನೇಮಕಾತಿ.

9) ವಿಧಿ 108— ಕೇಲವು ಸಂದರ್ಭಗಳಲ್ಲ ಸಂಸತ್ತಿನ ಸದನಗಳ ಜಂಟಿ ಅಧಿವೇಶನ.

10) ವಿಧಿ 112—ಕೇಂದ್ರ ವಾರ್ಷಿಕ ಮುಂಗಡ ಪತ್ರ .

11) ವಿಧಿ 123—ಸಂಸತ್ತಿನ ವಿರಾಮ ಕಾಲದಲ್ಲ ಆಧ್ಯಾದೇಶಗಳನ್ನು ಹೊರಡಿಸಲು ರಾಷ್ಟ್ರಪತಿಗೆ ಅಧಕಾರ.

12) ವಿಧಿ124— ಸರ್ವೋಚ್ಛನ್ಯಾಯಾಲಯದ ರಚನೆ  & ಸ್ಥಾಪನೆ.

13) ವಿಧಿ 153— ರಾಜ್ಯಪಾಲ ನೇಮಕ.

14) ವಿಧಿ 202—ರಾಜ್ಯ ವಾರ್ಷಿಕ ಮುಂಗಡ ಪತ್ರ.

15) ವಿಧಿ 214— ರಾಜ್ಯ ಉಚ್ಛ ನ್ಯಾಯಾಲಯ ಸ್ಥಾಪನೆ.

16) ವಿಧಿ  280— ಕೇಂದ್ರ ಹಣಕಾಸು ಆಯೋಗ.

17) ವಿಧಿ 324— ಚುನಾವಣಾ ಆಯೋಗ.

18) ವಿಧಿ 331— ಲೋಕಸಭೆಯಲ್ಲ ಆಂಗ್ಲೋ-ಇಂಡಿಯನ್ .

19) ವಿಧಿ 333— ರಾಜ್ಯದ ವಿಧಾನಸಭೆ  ಆಂಗ್ಲೋ - ಇಂಡಿಯನ್.

20) ವಿಧಿ 352— ರಾಷ್ಟ್ರೀಯ ತುರ್ತು ಪರಿಸ್ಥಿತಿ.

21)  ವಿಧಿ 356— ರಾಜ್ಯದ ತುರ್ತ ಪರಸ್ಥಿತಿ .

22) ವಿಧಿ 360— ಹಣಕಾಸಿ ತುರ್ತ ಪರಿಸ್ಥಿತಿ .

23) ವಿಧಿ 368— ಸಂವಿಧಾನದ ತಿದ್ದುಪಡಿ.

24) ವಿಧಿ 370— ಜಮ್ಮು  & ಕಾಶ್ಮೀರ ಕ್ಕೆ ವಿಶೇಷ   ಉಪಸಂಧಗಳು

Friday, 8 June 2018

ಸಂವಿಧಾನದ ಪ್ರಶ್ನೆಗಳು

━━━━━━━━━━━━━━━━━━━━
ಸಂವಿಧಾನದ ಪ್ರಶ್ನೆಗಳು
━━━━━━━━━━━━━━━━━

1."ಸಂವಿಧಾನವಿಲ್ಲದ ರಾಜ್ಯವು ರಾಜ್ಯವಲ್ಲ ಆದರೆಅದೊಂದು ಅರಾಜಕತ್ವದ ರಾಜ್ಯ" ಎಂದು ಹೇಳಿದವರುಯಾರು?

    🔥ಎ ವಿ ಡೈಸಿ

2.ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನುಕಾಪಾಡುವುದು, ರಾಷ್ಟ್ರ ರಾಷ್ಟ್ರಗಳ ನಡುವೆನ್ಯಾಯಯುತವಾದ ಮತ್ತು ಗೌರವಯುತವಾದಸಂಬಂಧವನ್ನು ಕಾಯ್ದುಕೊಂಡು ಬರುವುದು. ಎಂಬುದರಬಗ್ಗೆ ತಿಳಿಸುವ ಸಂವಿಧಾನದ ಅನುಚ್ಚೇದ ಯಾವುದು?

    💥ಅನುಚ್ಚೇದ 51   

3. ರಾಷ್ಟ್ರಪತಿ ಸ್ಥಾನ ತೆರವಾದರೆ ಉಪರಾಷ್ಟ್ರಪತಿಹಂಗಾಮಿಯಾಗಿ ಆ ಸ್ಥಾನವನ್ನು ತುಂಬುತ್ತಾರೆ. ಒಂದುವೇಳೆ ಏಕಕಾಲದಲ್ಲಿ      ಇಬ್ಬರೂ ತೆರವಾದರೆ, ರಾಷ್ಟ್ರಪತಿಚುನಾವಣೆ ನಡೆಯುವ ವರೆಗೆ ಆ ಸ್ಥಾನವನ್ನುತುಂಬುವವರು ಯಾರು?

     🔥ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ

4. ಭಾರತದ ಕಂಟ್ರೋಲರ್ ಅಡಿಟರ್ ಜನರಲ್ ಮತ್ತುಮುಖ್ಯ ಚುನಾವಣಾಧಿಕಾರಿಯನ್ನು ಪದಚ್ಯುತಗೊಳಿಸುವಅಧಿಕಾರ ಯಾರಿಗಿದೆ?

    🔥 ಸಂಸತ್ತು

5. ಕೇಂದ್ರ ಕಾರ್ಯಾಂಗವು ಈ ಕೆಳಗಿನ ಯಾರನ್ನುಒಳಗೊಂಡಿರುತ್ತದೆ?

     💥ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿನೇತೃತ್ವದ ಮಂತ್ರಿಮಂಡಲ ಹಾಗೂ ಅಟಾರ್ನಿ ಜನರಲ್‍ರನ್ನುಒಳಗೊಂಡಿರುತ್ತದೆ.

6. ಭಾರತದಲ್ಲಿ ಪಂಚಾಯತ್ ರಾಜ್ ಪದ್ಧತಿಯನ್ನು ಜಾರಿಗೆತರಬೇಕೆಂದು 1957ರಲ್ಲಿ ಶಿಫಾರಸ್ಸು ಮಾಡಿದ ಸಮಿತಿಯಾವುದು?

      🔥ಬಲವಂತರಾಯ್ ಮೆಹತ ಸಮಿತಿ

7. ಯಾವುದೇ ರಾಜಕೀಯ ಪಕ್ಷವನ್ನು ರಾಷ್ಟ್ರೀಯಪಕ್ಷವೆಂದು ಚುನಾವಣಾ ಆಯೋಗವು ಮಾನ್ಯತೆನೀಡಬೇಕಾದರೆ ಆ ಪಕ್ಷವು

   💥   ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಶೇ 4 ರಷ್ಟು ಮತಗಳನ್ನುಪಡೆಯಬೇಕು.

8. ಯಾವ ಸಮಿತಿಯ ಶಿಫಾರಸ್ಸಿಗೆ ಅನುಗುಣವಾಗಿ ಅಖಿಲಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪೂರ್ವಭಾವಿ ಮತ್ತುಮುಖ್ಯ ಪರೀಕ್ಷೆ ಎಂದು ಎರಡು ಹಂತಗಳನ್ನು ಜಾರಿಗೆತರಲಾಗಿದೆ?

    💥  ಕೊಠಾರಿ ಸಮಿತಿ

9. ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ನರಿಗೆ ಪ್ರಾತಿನಿಧ್ಯಒದಗಿಸುವ ಭಾರತೀಯ ಸಂವಿಧಾನದ ಅನುಚ್ಚೇದಯಾವುದು ಮತ್ತು ಅವರಿಗೆ ಮೀಸಲಾದ ಸ್ಥಾನಗಳುಎಷ್ಟು?

    🔥 331 ಮತ್ತು 2

10. ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ, ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕಮಾಡುವಾಗ ರಾಷ್ಟ್ರಪತಿಯವರು ಕೆಳಕಂಡ ಯಾರೊಂದಿಗೆಸಮಾಲೋಚಿಸಬೇಕು?

       💥ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಮತ್ತು ಇತರ ನ್ಯಾಯಾಧೀಶರೊಂದಿಗೆ

11. ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದಅವಕಾಶವನ್ನು ನಿರ್ಣಾಯಕ ಮಾಡುವ ತಿದ್ದುಪಡಿ ಮತ್ತುಅನುಚ್ಚೇದ ಅನುಕ್ರಮವಾಗಿ ಯಾವುವು?

     🔥 61ನೇ ತಿದ್ದುಪಡಿ ಕಾಯಿದೆ ಮತ್ತು 326ನೇ ಅನುಚ್ಚೇದ

12. ಶಕ್ತಿಯುತ ಕೇಂದ್ರ ಸರ್ಕಾರವುಳ್ಳ ಒಕ್ಕೂಟವ್ಯವಸ್ಥೆಯನ್ನು ಭಾರತದ ಸಂವಿಧಾನವು ಯಾವ ದೇಶದಸಂವಿಧಾನದಿಂದ ಎರವಲು ಪಡೆಯಿತು?

        🔥ಕೆನಡಾ

13. 1773ರ ರೆಗ್ಯುಲೇಟಿಂಗ್ ಆ್ಯಕ್ಟ್ ಮೂಲಕ ಮೊದಲಬಾರಿಗೆ ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಈಸ್ಥಳದಲ್ಲಿ ಅಸ್ತಿತ್ವಕ್ಕೆ ತರಲಾಯಿತು.

      🔥ಕೊಲ್ಕತ್ತಾ

14. ಬ್ರಿಟಿಷರ ಆಡಳಿತದಲ್ಲಿ ಭಾರತೀಯರು ಭಾಗವಹಿಸಲುಅವಕಾಶ ಕಲ್ಪಿಸಿದ ಕಾಯ್ದೆ ಯಾವುದು?

       💥1861ರ ಕಾಯ್ದೆ

15. ಭಾರತ ಸಂವಿಧಾನದ 9ನೇ ಭಾಗ ಈ ಕೆಳಗಿನ ಯಾವವಿಷಯವನ್ನು ಒಳಗೊಂಡಿದೆ?

      💥 ಪಂಚಾಯತ್ ಸಂಸ್ಥೆಗಳು                 

16. ಆಸ್ಟ್ರೇಲಿಯಾ ಸಂವಿಧಾನದಿಂದ ಈ ಕೆಳಗಿನ ಯಾವವಿಷಯವನ್ನು ಎರವಲಾಗಿ ಪಡೆಯಲಾಗಿದೆ?

       🔥ಕೇಂದ್ರ, ರಾಜ್ಯ, ಸಮವರ್ತಿ ಪಟ್ಟಿಗಳು

17. ವಿದೇಶಗಳಲ್ಲಿರುವ ಭಾರತೀಯರಿಗೆ ದ್ವಿಪೌರತ್ವಹೊಂದುವ ಅವಕಾಶಕ್ಕೆ ಶಿಫಾರಸ್ಸು ಮಾಡಿದ ಆಯೋಗಯಾವುದು?

      💥ಎಲ್.ಎಂ. ಸಿಂಘ್ವಿ  ಆಯೋಗ

18.ಜಾತಿ, ಧರ್ಮ, ಲಿಂಗ ಮತ್ತು ಜನ್ಮಸ್ಥಳದ ಆಧಾರದಮೇಲೆ ಯಾವುದೇ ವ್ಯಕ್ತಿಗೂ ಪಕ್ಷಪಾತ ಮಾಡಬಾರದೆಂದುತಿಳಿಸುವ ಭಾರತ ಸಂವಿಧಾನದ ಕಲಂ ಯಾವುದು?.

    🔥15 ನೇ ಕಲಂ     

19. ಯಾವುದೇ ವ್ಯಕ್ತಿಯನ್ನು ಬಂಧಿಸಿದ 24 ಗಂಟೆಯೊಳಗಾಗಿ ನ್ಯಾಯಾಧೀಶರ ಮುಂದೆಹಾಜರುಪಡಿಸಬೇಕೆಂದು ತಿಳಿಸುವ ರಿಟ್ ಯಾವುದು?

   💥    ಕೋ ವಾರಂಟೋ

20. ರಾಷ್ಟ್ರದಲ್ಲಿ ಯುದ್ಧ ನಡೆದಾಗ, ಭದ್ರತೆಗೆ ಧಕ್ಕೆ ಇದ್ದಾಗಹಾಗೂ ಆಂತರಿಕ ಗಲಭೆಗಳು ಉಂಟಾದಾಗರಾಷ್ಟ್ರಪತಿಯವರು ಈ ಕೆಳಗಿನ ಯಾವ ವಿಧಿಯನ್ವಯತುರ್ತು ಪರಿಸ್ಥಿತಿಯನ್ನು ಘೋಷಿಸುವರು?

       352 ನೇ ವಿಧಿ

21. ಭಾರತದ ಉಪರಾಷ್ಟ್ರಪತಿಯವರನ್ನು ಈ ಕೆಳಕಂಡವಿಧಾನದ ಮೂಲಕ ಅವರ ಸ್ಥಾನದಿಂದತೆಗೆದುಹಾಕಬಹುದು

    🔥  ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತುಅದಕ್ಕೆ ಲೋಕಸಭೆಯ ನಿರ್ಣಯದ ಮೂಲಕತೆಗೆದುಹಾಕಬಹುದು

22. ಭಾರತದ ಮಹಾಲೆಕ್ಕ ಪರಿಶೋಧಕರನ್ನುನೇಮಿಸುವವರು

       💥ರಾಷ್ಟ್ರಪತಿಗಳು

23. ಸಂವಿಧಾನದ ಭಾಗ III ರಲ್ಲಿರುವ ಮೂಲಭೂತಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗಿಲ್ಲಎಂದು ಯಾವ ಪ್ರಕರಣದಲ್ಲಿ ಭಾರತದ ಸರ್ವೋಚ್ಚನ್ಯಾಯಾಲಯವು ತೀರ್ಪು ನೀಡಿತು?

       🔥ಗೋಲಕ್‍ನಾಥ್ V/S  ಪಂಜಾಬ್ ರಾಜ್ಯ ಪ್ರಕರಣ

24. ಸಂಸತ್ ಮತ್ತು ರಾಜ್ಯ ಶಾಸಕಾಂಗದಲ್ಲಿ ಪಕ್ಷಾಂತರನಿಷೇಧ ಕಾಯಿದೆಯನ್ವಯ ಈ ಕೆಳಗಿನ ಯಾವಸಂದರ್ಭದಲ್ಲಿ ಮಾತ್ರ ಸದಸ್ಯತ್ವ ರದ್ದಾಗುತ್ತದೆ?

       💥ಆಯ್ಕೆಯಾದ ಪಕ್ಷದ ವಿಪ್ ಉಲ್ಲಂಘಿಸಿದಾಗ

25. ಸಂಸತ್ತಿನ ವಿವಿಧ ಸಮಿತಿಗಳನ್ನು ಹಾಗೂ ಅವುಗಳಕಾರ್ಯಗಳನ್ನು ಹೊಂದಿಸಿ

                I                                                               II

1) ವ್ಯವಹಾರಗಳ ಸಲಹಾ                    ಎ) ಸಾರ್ವಜನಿಕಸಮಿತಿ ವಿನಿಯೋಗಗಳನ್ನು ಪರಿಶೀಲಿಸುವುದು

2) ಆಯ್ಕೆ ಸಮಿತಿ                              ಬಿ) ಮುಂಗಡಪತ್ರಗಳ ವೆಚ್ಚಗಳ ಪರಿಶೀಲನೆ

3) ಅಂದಾಜು ಸಮಿತಿ                         ಸಿ) ಪೂರ್ಣಅಧಿವೇಶನಕ್ಕೆ ವೇಳಾಪಟ್ಟಿ ಸಿದ್ಧಪಡಿಸುವುದು

4) ಸಾರ್ವಜನಿಕ ಲೆಕ್ಕಪತ್ರ                   ಡಿ) ಮಸೂದೆಯನ್ನು ಸಮಿತಿ  ಪರಿಶೀಲಿಸಿಸದನದ  ಮುಂದಿಡುವುದು.

     🔥 1->ಸಿ  2->ಡಿ  3->ಬಿ

ಏನಿದು ಕಲಂ 370? ಮೋದಿ ಸರ್ಕಾರ ಇದನ್ನು ರದ್ದು ಮಾಡಿದ್ದೇಕೆ? ಇದರಿಂದ ಏನೆಲ್ಲಾ ಬದಲಾವಣೆ ಆಗಲಿದೆ ಕಾಶ್ಮೀರದಲ್ಲಿ? ಇಲ್ಲಿದೆ ಉತ್ತರ!!

ಏನಿದು ಕಲಂ 370? ಮೋದಿ ಸರ್ಕಾರ ಇದನ್ನು ರದ್ದು ಮಾಡಿದ್ದೇಕೆ? ಇದರಿಂದ ಏನೆಲ್ಲಾ ಬದಲಾವಣೆ ಆಗಲಿದೆ ಕಾಶ್ಮೀರದಲ್ಲಿ? ಇಲ್ಲಿದೆ ಉತ್ತರ!! ದೇಶ / ವಿದೇಶ ಏನಿದು ಕಲಂ 370?...