ದೇಶದ ಪ್ರಮುಖ ಹುದ್ದೆಗಳ ಪ್ರಮಾಣವಚನ ಮತ್ತು ರಾಜೀನಾಮೆ

ದೇಶದ ಪ್ರಮುಖ ಹುದ್ದೆಗಳ ಪ್ರಮಾಣವಚನ ಮತ್ತು ರಾಜೀನಾಮೆ

# ರಾಷ್ಟ್ರಪತಿ : ರಾಷ್ಟ್ರಪತಿ ಅವರಿಗೆ ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಪ್ರಮಾಣವಚನ ಭೋದಿಸುವರು. ಒಂದು ವೇಳೆ ರಾಷ್ಟ್ರಪತಿ ರಾಜೀನಾಮೆ ನೀಡುವ ಸಂಧರ್ಭ ಬಂದರೆ ಅವರು ಉಪರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾರೆ.

# ಉಪರಾಷ್ಟ್ರಪತಿ : ಉಪರಾಷ್ಟ್ರಪತಿ ಅವರಿಗೆ ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ ಪ್ರಮಾಣವಚನ ಭೋದಿಸುವರು. ಉಪರಾಷ್ಟ್ರಪತಿ ರಾಜೀನಾಮೆ ನೀಡುವ ಸಂಧರ್ಭ ಬಂದರೆ ಅವರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾರೆ.

# ಪ್ರಧಾನಮಂತ್ರಿ : ಪ್ರಧಾನಮಂತ್ರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುವರು. ರಾಜೀನಾಮೆ ನೀಡುವ ಸಂಧರ್ಭ ಬಂದರೆ ಅವರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾರೆ.

# ಲೋಕಸಭಾ ಸ್ಪೀಕರ್ : ಲೋಕಸಭಾ ಸ್ಪೀಕರ್ ಅವರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುವರು. ಲೋಕಸಭಾ ಸ್ಪೀಕರ್ ತಮ್ಮ ರಾಜಿನಾಮೆಯನ್ನು ಲೋಕಸಭೆಯ ಉಪ ಸ್ಪೀಕರ್ ಅವರಿಗೆ ಸಲ್ಲಿಸುವರು.

# ಲೋಕಸಭೆಯ ಉಪ ಸ್ಪೀಕರ್ : ಲೋಕಸಭಾ ಉಪ ಸ್ಪೀಕರ್ ಅವರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುವರು. ಲೋಕಸಭೆಯ ಉಪ ಸ್ಪೀಕರ್ ತಮ್ಮ ರಾಜಿನಾಮೆಯನ್ನು ಲೋಕಸಭೆಯ ಸ್ಪೀಕರ್ ಅವರಿಗೆ ಸಲ್ಲಿಸುವರು.

# ಮುಖ್ಯ ಚುನಾವಣಾ ಆಯುಕ್ತ : ಮುಖ್ಯ ಚುನಾವಣಾ ಆಯುಕ್ತರಿಗೆ ರಾಷ್ಟ್ರಪತಿಗಳು ಪ್ರಮಾಣ ವಚನ ಬೋಧಿಸುತ್ತಾರೆ. ಒಂದು ವೇಳೆ ರಾಜೀನಾಮೆ ನೀಡುವ ಸಂಧರ್ಭ ಬಂದರೆ ಮುಖ್ಯ ಚುನಾವಣಾ ಆಯುಕ್ತರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸುತ್ತಾರೆ.

# ಅಟಾರ್ನಿ ಜನರಲ್ : ಭಾರತದ ಅಟಾರ್ನಿ ಜನರಲ್ ಅವರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುತ್ತಾರೆ. ಅಟಾರ್ನಿ ಜನರಲ್ ರಾಜೀನಾಮೆ ನೀಡಬೇಕಾದರೆ ರಾಷ್ಟ್ರಪತಿಯವರಿಗೆ ನೀಡುತ್ತಾರೆ.

# ಮಹಾಲೇಖಪಾಲರು : ಮಹಾಲೇಖಪಾಲರಿಗೆ ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ ಪ್ರಮಾಣವಚನ ಭೋದಿಸುವವರು. ಇವರು ರಾಜೀನಾಮೆ ನೀಡಬೇಕಾದರೆ ರಾಷ್ಟ್ರಪತಿಯವರಿಗೆ ನೀಡುತ್ತಾರೆ.

# ಸಾಲಿಸಿಟರ್ ಜನರಲ್ : ಸಾಲಿಸಿಟರ್ ಜನರಲ್ ಅವರಿಗೂ ರಾಷ್ಟ್ರಪತಿಯವರೇ ಪ್ರಮಾಣವಚನ ಭೋದಿಸುತ್ತಾರೆ. ಇವರೂ ಕೂಟ ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು.

# ಲೋಕಸೇವಾ ಆಯೋಗದ ಛೇರ್ಮನ್ : ಲೋಕಸೇವಾ ಆಯೋಗದ ಛೇರ್ಮನ್ ಅವರಿಗೆ ರಾಷ್ಟ್ರಪತಿ ಪ್ರಮಾಣವಚ ಭೋದಿಸುವವರು. ಇವರೂ ಸಹ ರಾಷ್ಟ್ರಪತಿಯವರಿಗೆ ರಾಜೀನಾಮೆ ಸಲ್ಲಿಸುವರು.

# ಯೋಜನಾ ಆಯೋಗದ ಛೇರ್ಮನ್ : ಯೋಜನಾ ಆಯೋಗದ ಛೇರ್ಮನ್ ರಿಗೆ ರಾಷ್ಟ್ರಪತಿ ಪ್ರಮಾಣವಚನ ಭೋದಿಸುವವರು. ಇವರೂ ಕೂಡ ರಾಷ್ಟ್ರಪತಿ ಯವರಿಗೇ ರಾಜೀನಾಮೆ ಸಲ್ಲಿಸಬೇಕು.

# ಯೋಜನಾ ಆಯೋಗದ ಸದಸ್ಯರು : ಯೋಜನಾ ಆಯೋಗದ ಸದಸ್ಯರಿಗೆ ಪ್ರಧಾನಮಂತ್ರಿಯವರು ಪ್ರಮಾಣವಚನ ಭೋದಿಸುವವರು.
ಪ್ರಧಾನಮಂತ್ರಿ. ಯೋಜನಾ ಆಯೋಗದ ಸದಸ್ಯರು ಪ್ರಧಾನಮಂತ್ರಿಯವರಿಗೆ ರಾಜೀನಾಮೆ ಸಲ್ಲಿಸುವರು.

# ಆರ್ಬಿಐ ಗವರ್ನರ್ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಗವರ್ನರ್ ಅವರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುವವರು. ಇವರು ರಾಜೀನಾಮೆ ಸಲ್ಲಿಸುವ ಸಂಧರ್ಭ ಬಂದರೆ ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು.

# ಮುಖ್ಯಮಂತ್ರಿ : ಒಂದು ರಾಜ್ಯದ ಮುಖ್ಯಮಂತ್ರಿಯವರಿಗೆ ಆ ರಾಜ್ಯದ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾದ ಸಮಯ ಬಂದರೆ ರಾಜ್ಯಪಾಲರಿಗೇ ತಮ್ಮ ರಾಜೀನಾಮೆ ಸಲ್ಲಿಸುವರು.

# ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ : ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಆ ರಾಜ್ಯದ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಇವರು ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸುವರು.

# ಹೈಕೋರ್ಟ್ ನ ಇತರ ನ್ಯಾಯಾಧೀಶರು : ಹೈಕೋರ್ಟ್ ನ ಇತರ ನ್ಯಾಯಾಧೀಶರಿಗೆ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಹೈಕೋರ್ಟ್’ನ ಇತರ ನ್ಯಾಯಾಧೀಶರು ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸುತ್ತಾರೆ.

# ಅಡ್ವೋಕೇಟ್ ಜನರಲ್ : ಅಡ್ವೋಕೇಟ್ ಜನರಲ್ ಅವರಿಗೆ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಇವರು ತಮ್ಮ ರಾಜಿನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು.

# ಅಕೌಂಟೆಂಟ್ ಜನರಲ್ : ಅಕೌಂಟೆಂಟ್ ಜನರಲ್ ಅವರಿಗೆ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಇವರು ತಮ್ಮ ರಾಜೀನಾಮೆಯನ್ನ ರಾಜ್ಯಪಾಲರಿಗೆ ಸಲ್ಲಿಸಬೇಕು.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments