ಅನ್ಯದೇಶಗಳೊಂದಿಗೆ ಭಾರತದ ಸಂಬಂಧ

ಅನ್ಯದೇಶಗಳೊಂದಿಗೆ ಭಾರತದ ಸಂಬಂಧ (PS)

ಮುಖ್ಯಾಂಶಗಳು:
• ಭಾರತವು ಏಷ್ಯಾ ಖಂಡದಲ್ಲಿದೆ.
• ಬಾಂಗ್ಲಾ ದೇಶವು ನಮ್ಮ ಪೂರ್ವ ಭಾಗದಲ್ಲಿದೆ.
• ಚರಿತ್ರೆಯ ಕಾಲಘಟ್ಟದಲ್ಲಿ ಬೌದ್ಧ ಧರ್ಮ ಭಾರತೀಯ ಭಿಕ್ಷುಗಳಿಂದ ಶ್ರೀಲಂಕಾದಲ್ಲಿ ಪಸರಿಸಲ್ಪಟ್ಟಿತು.
• ಭಾರತದ ಭಿಲೈ ಹಾಗೂ ಭೋಕಾರೋ ಉಕ್ಕಿನ ಕಾರ್ಖಾನೆಗಳಿಗೆ ರಷ್ಯಾ ದೇಶವು ಸಹಕರಿಸಿತು.
• ಅಕ್ಟೋಬರ್ 1949 ರಂದು ಚೀನಾ ಕಮ್ಯುನಿಷ್ಟ ರಾಷ್ಟ್ರವೆಂದು ಘೋಷಿಸಿಕೊಂಡಿತು.
• ಭಾರತದ ದೋರಣೆಯ ವಿರುದ್ದ ಚೈನಾ ಟಿಬೇಟನ್ನು ವಶಪಡಿಸಿಕೊಂಡಿತು.
• 1962 ರಲ್ಲಿ ಚೀನಾವು ಭಾರತದ ಮೇಲೆ ದಾಳಿಮಾಡಿತು.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಭಾರತ - ಶ್ರೀಲಂಕಾ ಬಾಂಧವ್ಯವು ಐತಿಹಾಸಿಕವಾದುದು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಈ ರಾಷ್ಟ್ರಗಳ ಬಾಂಧವ್ಯವನ್ನು ವಿಮರ್ಶಿಸಿ.
• ರಾಮಾಯಣ ಕಾಲದಿಂದಲೂ ಭಾರತ & ಶ್ರೀಲಂಕಾಗಳ ಮಧ್ಯೆ ಉತ್ತಮ ಸಂಬಂಧ ಇದೆ.
• ಚರಿತ್ರೆಯ ಕಾಲಘಟ್ಟದಲ್ಲಿ ಬೌದ್ಧ ಧರ್ಮ ಭಾರತೀಯ ಭಿಕ್ಷುಗಳಿಂದ ಶ್ರೀಲಂಕಾದಲ್ಲಿ ಪಸರಿಸಲ್ಪಟ್ಟಿತ್ತು.
• ರಾಜಕೀಯ & ಆರ್ಥಿಕ ರಂಗದಲ್ಲಿ ಭಾರತ ಶ್ರೀಲಂಕಾದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ.
• ಸಮುದ್ರ ವ್ಯಾಪಾರದ ಬಗೆಗಿನ ಒಪ್ಪಂದ ಮಾಡಿಕೊಳ್ಳಲಾಗಿದೆ.
• ಶ್ರೀಲಂಕಾದ ಮನವಿಯ ªುÉ ೀರೆU É ಭಾರತz À ಶಾಂತಿಪಾಲನ ಪqಂÉ iÀುನ್ನು ಕಳುಹಿಸಲಾಯಿತು.

2. ಅನ್ಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಅವಶ್ಯಕ ಏಕೆ?
• ನಾವೊಂದು ಸ್ವತಂತ್ರ ರಾಷ್ಟ್ರವಾಗಿ ಎಲ್ಲಾ ವಿದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಬೇಕಾಗಿದೆ.
• ಅದರಲ್ಲಿಯೂ ಮುಖ್ಯವಾಗಿ ಏμಂಚಿ ಖಂಡದ ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಒಳ್ಳೆಯ ಬಾಂಧವ್ಯ ಇರಿಸಿಕೊಳ್ಳಬೇಕಾಗಿದೆ.
• ಇದರೊಂದಿಗೆ ರಾಷ್ಟ್ರೀಯ ಹಿತಾಶಕ್ತಿಗಳಾದ ಗಡಿ ಭದ್ರತೆ, ವಿದೇಶ ವ್ಯಾಪಾರ, ಆರ್ಥಿಕ ಲಾಭ, ರಾಷ್ಟ್ರದ ಗೌರವ ಮುಂತಾದವುಗಳನ್ನು ಜೋಪಾನವಾಗಿ ಕಾಯ್ದುಕೊಳ್ಳಬೇಕಾಗಿದೆ.
• ಈ ಎಲ್ಲಾ ಕಾರಣಗಳಿಗಾಗಿ ನಾವು ಅನ್ಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಅವಶ್ಯಕ.

3. ಭಾರತ & ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆಗೆ ಕಾರಣವಾದ ವಿಷಯಗಳು ಯಾವುವು?
   1947ರಲ್ಲಿ ಸ್ವಾತಂತ್ರ್ಯ ದೊರಕಿದಾಗಿನಿಂದಲೂ ಭಾರತ & ಪಾಕಿಸ್ತಾನಗಳ ಮಧ್ಯೆ ಸಂಬಂಧ ಸೌಹಾರ್ಧಯುತವಾಗಿಲ್ಲ. ಭಾರತ & ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆಗೆ ಕಾರಣಗಳೆಂದರೆ,
1. ಕಾಶ್ಮೀರ ಸಮಸ್ಯೆ,
2. ಮಿಲಿಟರಿ ಕೂಟಗಳೊಂದಿಗೆ ಪಾಕಿಸ್ತಾನದ ಸಂಬಂಧಗಳು
3. ಚೀನಾ - ಪಾಕ್ ಮೈತ್ರಿ,
4. ನೀರಿನ ವಿವಾದ
5. ವ್ಯಾಪಾರ ಸಮಸ್ಯೆ,
6. ಎರಡು ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರ ನಿರಂತರ ಸಮಸ್ಯೆ,
7. ಭಯೋತ್ಪಾದನೆ ಮುಂತಾದವು.

4. ಭಾರತ & ಅಮೇರಿಕಾ ದೇಶಗಳು ಪ್ರಜಾತಂತ್ರ ದೇಶಗಳಾಗಿದ್ದು, ಇವುಗಳ ಪರಸ್ಪರ ಸೌಹಾರ್ಧತೆಯು ಹೇಗಿದೆ ಎಂಬುದನ್ನು ವಿವರಿಸಿ.
   ಭಾರತ & ಅಮೇರಿಕಾ ದೇಶಗಳು ಪ್ರಜಾತಂತ್ರ ದೇಶಗಳಾಗಿದ್ದು, ಪ್ರಚಲಿತ ಜಾಗತಿಕ ವಿದ್ಯಮಾನದಲ್ಲಿ ಈ ಎರಡು ರಾಷ್ಟ್ರಗಳ ಪರಸ್ಪರ ಮೈತ್ರಿ ತುಂಬಾ ಪ್ರಾಮುಖ್ಯವಾದುದು. ಏಕೆಂದರೆ -
• ಭಾರತದ ಪಂಚವಾರ್ಷಿಕ ಯೋಜನೆಗೆ ಅಮೇರಿಕಾ ತುಂಬಾ ಸಹಾಯ ನೀಡಿತು.
• 1962ರ ಚೀನಾ ಆಕ್ರಮಣ ಸಂದರ್ಭದಲ್ಲೂ ಅಮೇರಿಕಾದ ಸಹಾಯ ನಮಗೆ ತುಂಬಾ ಶಕ್ತಿ ನೀಡಿತು.
• ಭಯೋತ್ಪಾದನೆ ಹತ್ತಿಕ್ಕುವಲ್ಲಿ ನಮ್ಮೆರಡು gಂμಂಔಛಿUಂಳ ಮಧ್ಯೆ ಸಮಾನ ಹಿತಾಸಕ್ತಿಯಿದೆ.
• ಭಾರತವು ವಿದೇಶಿ ವ್ಯಾಪಾರ, ವಿಜ್ಞಾನ ಮತ್ತು ತಾಂತ್ರಿಕತೆ, ಬಾಹ್ಯಾಕಾಶ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಅಮೇರಿಕಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ.
• ವಿಶ್ವಸಂಸ್ಥೆಯನ್ನು ಬಲಪಡಿಸುವ ಹಾಗೂ ಜಾಗತಿಕ ಶಾಂತಿಯನ್ನು ಉಳಿಸುವ ನಿಟ್ಟಿನಲ್ಲಿ ಎರಡು ರಾಷ್ಟ್ರಗಳು ಸಮಾನ ದೋರಣೆ ಹೊಂದಿವೆ.

5. ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗೆ ನಮ್ಮ ಬಾಂಧವ್ಯ ಹದಗೆಡಲು ಕಾರಣಗಳಾವವು?
• ಭಾರತದ ದೋರಣೆಯ ವಿರುದ್ಧ ಚೀನಾ ಟಿಬೇಟನ್ನು ವಶಪಡಿಸಿಕೊಂಡಿತು.
• 1962ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿತು.
• ಭಾರತ & ಚೀನಾ ದೇಶಗಳ ಮಧ್ಯೆ ಗಡಿ ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ.
• ನಮ್ಮ ರಾಜ್ಯಗಳಲ್ಲೊಂದಾದ ಅರುಣಾಚಲ ಪ್ರದೇಶವನ್ನು ಚೀನಾ ತನ್ನದೆಂದು ವಾದಿಸುತ್ತಿದೆ.
• ಅಣ್ವಸ್ತ್ರಗಳ ತಯಾರಿ, ವಿದೇಶಿ ವ್ಯಾಪಾರದ ಸವಾಲುಗಳು, ಗಡಿಯಲ್ಲಿ ಚೀನಾ ಮಿಲಿಟರಿ ಪಡೆಗಳ ಅತಿಕ್ರಮಣ ಇವೆಲ್ಲಾ ಭಾರತ & ಚೀನಾ ಮಧ್ಯೆ ಸಂಬಂಧ ಹದಗೆಡಲು ಕಾರಣಗಳಾಗಿವೆ.

6. ರಷ್ಯಾದೊಂದಿಗೆ ಭಾರತದ ಸಂಬಂಧವನ್ನು ವಿವರಿಸಿ.
• ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ರಷ್ಯಾ ತನ್ನ ಬೆಂಬಲ ನೀಡಿದೆ. ಉದಾ : 1966ರ ತಾಷ್ಕೆಂಟ್ ಒಪ್ಪಂದ
• 1962ರ ಚೀನಾ ದಾಳಿಯನ್ನು ರಷ್ಯಾ ಖಂಡಿಸಿತು.
• ಕ್ರಿ ಶ 1971 ರಲ್ಲಿ ಭಾರತ – ರಷ್ಯಾ ನಡುವೆ ಪರಸ್ಪರ ಮೈತ್ರಿ, ಶಾಂತಿ ಹಾಗೂ ಸಹಕಾರಗಳ 20 ವರ್ಷದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
• ರಷ್ಯಾದ ಸಹಕಾರದಿಂದ ಬಿಲಾಯ್, ಬೊಕಾರೋಗಳಲ್ಲಿ ಉಕ್ಕಿನ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು.
• ಹರಿದ್ವಾರದಲ್ಲಿ ರಷ್ಯಾ ಸಹಕಾರದಿಂದ ಭಾರಿ ವಿದ್ಯುತ್ ಸ್ಥಾವರದ ಘಟಕ ಸ್ಥಾಪಿಸಲಾಯಿತು.
• ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಬೇಕೆಂದು ರಷ್ಯಾ ಪ್ರತಿಪಾದಿಸುತ್ತಿದೆ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments