ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ (PS)

ಜಾಗತಿಕ ಸಮಸ್ಯೆಗಳು ಹಾಗೂ ಭಾರತದ ಪಾತ್ರ (PS)

ಮುಖ್ಯಾಂಶಗಳು:
• ಮಾನವ ಹಕ್ಕುಗಳ ದಿನವನ್ನು ಡಿಸೆಂಬರ್ 10 ರಂದು ಆಚರಿಸುತ್ತೇವೆ.
• ಭಾರತವು ನಿರಂತರವಾಗಿ ಸಾರ್ವತ್ರಿಕ ಮಾನವ ಹಕ್ಕುಗಳನ್ನು ಪ್ರತಿಪಾದಿಸುತ್ತಾ ಬಂದಿದೆ.
• ಆಫ್ರಿಕಾದಲ್ಲಿ ವರ್ಣಬೇಧ ನೀತಿಯ ವಿರುದ್ಧ ಹೋರಾಡಿದವರು ನೆಲ್ಸನ್ ಮಂಡೇಲಾ.
• ಮಾನವ ಹಕ್ಕು ಎಂಬುದು ಸ್ವಾತಂತ್ರ್ಯ & ಸಮಾನತೆಯನ್ನು ಒಳಗೊಂಡಿದೆ.
• 1948ರ ಡಿಸೆಂಬರ್ 10ರ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆ ಒಂದು ಪ್ರಮುಖ ಮೈಲಿಗಲ್ಲು ಎಂಬುದಾಗಿ ಭಾವಿಸಲಾಗಿದೆ.
• ದಕ್ಷಿಣ ಆಫ್ರಿಕಾದ ಗಾಂಧಿಯೆಂದು ನೆಲ್ಸನ್ ಮಂಡೆಲಾರನ್ನು ಕರೆಯಲಾಗುತ್ತದೆ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಮಾನವ ಹಕ್ಕುಗಳ ಪ್ರತಿಪಾದನೆಗಾಗಿ ಭಾರತವು ನಡೆಸುತ್ತಿರುವ ಹೋರಾಟಗಳನ್ನು ವಿವರಿಸಿ.
• ಸಾರ್ವತ್ರಿಕ ಮಾನವ ಹಕ್ಕುಗಳನ್ನು ಭಾರತ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ.
• ಭಾರತ ತನ್ನ ಸಂವಿಧಾನದಲ್ಲೂ ಮೂಲಭೂತ ಹಕ್ಕುಗಳನ್ನು ನಮೂದಿಸಿದೆ.
• ವಿಶ್ವಸಂಸ್ಥೆ ಹಾಗೂ ಜಾಗತಿಕ ವೇದಿಕೆಗಳ ಮೂಲಕ ಭಾರತ ಮಾನವ ಹಕ್ಕುಗಳ ಸಂರಕ್ಷಣೆಗೆ ಯತ್ನಿಸುತ್ತಿದೆ..
• ಗುಲಾಮಗಿರಿ ಪದ್ಧತಿ, ಮಾನವರ ಮಾರಾಟ, ಮಕ್ಕಳ ದುಡಿಮೆ, ಮಹಿಳಾ ಶೋಷಣೆ ಇತ್ಯಾದಿಗಳನ್ನು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ
• ಜನಾಂಗ ಹತ್ಯೆ, ಎಲ್ಲಾ ವಿಧದ ಶೋಷಣೆ ಹಾಗೂ ದಬ್ಬಾಳಿಕೆಗೆ ಭಾರತ ವಿರೋಧ ವ್ಯಕ್ತಪಡಿಸುತ್ತದೆ.

2. ದ್ವೀತಿಯ ಮಹಾಯುದ್ಧದ ನಂತರ ಎದುರಾದ ಮುಖ್ಯ ಸಮಸ್ಯೆಗಳು ಯಾವುವು?
   ಮಾನವ ಹಕ್ಕುಗಳ ನಿರಾಕರಣೆ, ಶಸ್ತ್ರಾಸ್ತ್ರಗಳ ಪೈಪೋಟಿ, ಆರ್ಥಿಕ ಅಸಮಾನತೆ, ವರ್ಣಭೇದ ನೀತಿ ಹಾಗೂ ಭಯೋತ್ಪಾದನೆಯಂತಹ ಸಮಸ್ಯೆಗಳು ದ್ವೀತಿಯ ಮಹಾಯುದ್ಧದ ನಂತರ ಎದುರಾದ ಮುಖ್ಯ ಸಮಸ್ಯೆಗಳಾಗಿವೆ.

3. ಶಸ್ತ್ರಾಸ್ತ್ರಗಳ ಪೈಪೋಟಿಯು ಜಗತ್ತಿನ ನಾಶಕ್ಕೆ ನಾಂದಿ ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗುವ ಪರಿಣಾಮಗಳಾವವು? ಅಥವಾ ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳು ಪರಸ್ಪರ ನಿಶ್ಚಿತ ನಾಶದ ವಿರುದ್ಧ ಹೋರಾಡಬೇಕು. ಏಕೆ?
• ಶಸ್ತ್ರಾಸ್ತ್ರ ಪೈಪೋಟಿಯ ಬಗ್ಗೆ ಹೇಳುವದಾದರೆ ಒಂದು ಮಾತಿದೆ. – ‘ಅಣ್ವಸ್ತ್ರ ಯುಗದಲ್ಲಿ
• ನಾವು ಯುದ್ದವನ್ನು ಕೊನೆಗಾಣಿಸಬೇPುÀ , ಇಲ್ಲವಾದರೆ ಯುದ್ಧ ನಮ್ಮನ್ನು ಕೊನೆಗಾಣಿಸುತ್ತದೆ.’
• ಪ್ರಚಲಿತ ಜಗತ್ತಿನಲ್ಲಿ ಶಸ್ತ್ರಾಸ್ತ್ರಗಳ ಪೈಪೋಟಿ ಒಂದು ಭಯಾನಕ ವಿಧ್ಯಮಾನ ಎಂಬುದಾಗಿ ಕಾಣಿಸುತ್ತಿದೆ.
• ಶಸ್ತ್ರಾಸ್ತ್ರಗಳ ಪೈಪೋಟಿಯಿಂದಾಗಿ ಜಗತ್ತಿನಲ್ಲಿ ಯಾವ ಸಮಯದಲ್ಲಿಯಾಗಲೀ ಯುದ್ಧ
• ಆರಂಭವಾಗಿ ಮನುಕುಲ ನಾಶವಾಗುವ ಭೀತಿ ಇದೆ.
• ಶಸ್ತ್ರಾಸ್ತ್ರ ಜಮಾವಣೆ ತಪ್ಪಿಸುವದು ಅವಶ್ಯವಾಗಿದೆ.
• ಪರಸ್ಪರ ‘ನಿಶ್ಚಿತ ನಾಶ’ದ ವಿರುದ್ಧ ಭಾರತವು ಸೇರಿ ಎಲ್ಲಾ ರಾಷ್ಟ್ರಗಳು ಪ್ರಯತ್ನಿಸುವ ಅವಶ್ಯಕತೆಯಿದೆ.

4. ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳ ಲಕ್ಷಣಗಳಾವವು? ಈ ರೀತಿ ಹಿಂದುಳಿಯುವಿಕೆಯ ಕಾರಣಗಳಾವವು?
• ಹಿಂದುಳಿದ ರಾಷ್ಟ್ರಗಳು ಸ್ವಾತಂತ್ರ್ಯವನ್ನು ಪಡೆದರೂ ಸಹ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದೆ ಉಳಿದಿದ್ದವು.
• ಔದ್ಯೋಗಿಕ, ತಂತ್ರಜ್ಞಾನ ಮತ್ತು ವಿಜ್ಞಾನ ರಂಗಗಳಲ್ಲಿಯೂ ಈ ಪ್ರದೇಶಗಳು ಹಿಂದೆ ಇದ್ದುದರಿಂದ
• ಈ ದೇಶಗಳಲ್ಲಿನ ಜೀವನಮಟ್ಟ ಕೆಳಮಟ್ಟದಲ್ಲಿತ್ತು.
• ಶಿಕ್ಷಣ, ಆರೋಗ್ಯ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆಗಳಿರಲಿಲ್ಲ.
ಹಿಂದುಳಿಯುವಿಕೆಯ ಕಾರಣಗಳು
   ಆರ್ಥಿಕವಾಗಿ ರಾಷ್ಟ್ರಗಳ ಹಿಂದುಳಿವಿಕೆಗೆ ಕಾರಣ ಐರೋಪ್ಯ ರಾಷ್ಟ್ರಗಳು ಆಫ್ರಿಕಾ, ಏಷ್ಯಾ & ಲ್ಯಾಟಿನ್ ಅಮೇರಿಕನ್ ರಾಷ್ಟ್ರಗಳಲ್ಲ್ಲಿ ವಸಾಹತುಗಳನ್ನು ಸ್ಥಾಪಿಸಿ ಆ ರಾಷ್ಟ್ರಗಳುÀ ಸಂಪತ್ತನ್ನು ದೋಚಿದ್ದು ಪ್ರಮುಖ ಕಾರಣವಾಗಿದೆ.

5. ಆರ್ಥಿಕ ಅಸಮಾನತೆಯ ನಿವಾರಣೆಗಾಗಿ ಭಾರತವು ಕೈಗೊಂಡಿರುವ ಸುಧಾರಣಾ ಕ್ರಮಗಳಾವವು?
• ಯಾವುದೇ ಷರತ್ತುಗಳಿಲ್ಲದೆ ಮುಂದುವರೆದ ರಾಷ್ಟ್ರಗಳು ಬಡರಾಷ್ಟ್ರಳಿಗೆ ಆರ್ಥಿಕ ನೆರವು ನೀಡಬೇಕೆಂಬ ನೀತಿಯನ್ನು ಭಾರತ ಪ್ರತಿಪಾದಿಸಿತು.
• ಶ್ರೀಮಂತ ರಾಷ್ಟ್ರಗಳ ಬಂಡವಾಳವೂ ಕೂಡ ಬಡರಾಷ್ಟ್ರಗಳಿಗೆ ಹರಿದು ಬರುವಂತೆ ಯತ್ನಿಸಿತು.
• ಭಾರತ ಒಂದು ಪ್ರಗತಿಪರ ರಾಷ್ಟ್ರವಾಗಿ ವಿಶ್ವ ಕುಟುಂಬದ ಎಲ್ಲಾ ರಾಷ್ಟ್ರಗಳ ಮಧ್ಯೆ ಆರ್ಥಿಕ ನ್ಯಾಯ ಹಾಗೂ ಸಮಾ£ತಯನ್ನು ¥್ರÀತಿಪಾದಿಸುತ್ತಿದೆ.

6. ಶಸ್ತ್ರಾಸ್ತ್ರಗಳ ಪೈಪೋಟಿಯ ಬಗ್ಗೆ ಅಮೇರಿಕಾದ ಅಧ್ಯಕ್ಷ ಐಸಾನ್ ಹೋವರ್‍ನ ಉದ್ಗಾರವೇನು?
   ಅಮೇರಿಕದ ಅಧ್ಯಕ್ಷ ಐಸನ್ ಹೋವರ್ ಶಸ್ತ್ರಾಸ್ತ್ರಗಳ ಪೈಪೋಟಿ ಕುರಿತು ಒಮ್ಮೆ ‘ಶಸ್ತ್ರಗಳನ್ನು ಹೊಂದಿದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲು ಮಾಡುವುದಿಲ್ಲ. ಬದಲಾಗಿ ಕಾರ್ಮಿಕರ ಬೆವರನ್ನು, ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಗೊಳಿಸುತ್ತದೆ’ ಎಂದು ಉದ್ಗರಿಸಿದರು.

7. ವರ್ಣಭೇದ ನೀತಿಯು ಮಾನವತ್ವಕ್ಕೆ ವಿರೋಧವಾದುದು ಇದನ್ನು ನಿಮ್ಮ ದೃಷ್ಟಿಕೋನದಲ್ಲಿ ಸಮರ್ಥಿಸಿ.
• ಮಾನವರೆಲ್ಲರೂ ಹುಟ್ಟಿನಿಂದ ಸರಿಸಮಾನರು ಮತ್ತು ಸ್ವತಂತ್ರರು. ಜಾತಿ, ವರ್ಣ, ಲಿಂಗ, ಭಾಷೆ, ಧರ್ಮ, ಆಸ್ತಿ ಅಥವಾ ಹುಟ್ಟಿನಿಂದ ಯಾವ ಭೇದಭಾವನೆಗಳಿಗೆ ಒಳಗಾಗದೆ ಸಮಾನ ಹಕ್ಕು ಹಾಗೂ ಗೌರವಗಳಿಗೆ ಪಾತ್ರರಾಗಿದ್ದಾರೆ.
• ವರ್ಣಬೇಧ ನೀತಿಯು ಅತಿ ಅಮಾನುಷವಾದುದು.
• ಈ ನೀತಿಯು ಅತ್ಯಂತ ಕ್ರೂರ & ದಮನಕಾರಿಯಾಗಿತ್ತು.
• ದಕ್ಷಿಣ ಆಫ್ರಿಕಾದಲ್ಲಿ ಕರಿಯರನ್ನು ಮಾರಾಟ ಮಾಡಲಾಗುತ್ತಿತ್ತು.
• ಅವರಿಗೆ ಯಾವ ಸೌಲಭ್ಯಗಳು ಇರಲಿಲ್ಲ. ಅವರನ್ನು ನಿಕೃಷ್ಟವಾಗಿ ಕಾಣಲಾಗುತ್ತಿತ್ತು.
• ಆದ್ದರಿಂದ ಈ ನೀತಿಗೆ ಪ್ರಪಂಚದಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತು. ಆದರೆ ಈಗ ವರ್ಣಭೇದ ನೀತಿಯು ಮುಗಿದ ಅಧ್ಯಾಯವಾಗಿದೆ.

8. ಭಯೋತ್ಪಾದನೆಯಿಂದ ಉಂಟಾಗುವ ಪರಿಣಾಮಗಳಾವವು?
• ಭಯೋತ್ಪಾದನೆಯು ಸಾರ್ವಜನಿಕವಾಗಿ ವ್ಯಕ್ತಿಗಳಿಗೆ & ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟುಮಾಡುತ್ತದೆ.
• ಸಾಮಾಜಿಕ ಸಂಸ್ಕøತಿಗೆ, ಅದೇ ರೀತಿ ಸರ್ಕಾರಕ್ಕೆ ನಕಾರಾತ್ಮಕ ಪ್ರಭಾವ ಬೀರುತ್ತದೆ.
• ಭಯೋತ್ಪಾದನೆಯಿಂದ ನಿರ್ದಿಷ್ಟ ಭಾಷಾವಾರು, ಧಾರ್ಮಿಕ, ಜನಾಂಗೀಯ ಅಥವಾ ವರ್ಣದವರು ಸಂಕಷ್ಟ ತೊಂದರೆಯನ್ನು ಅನುಭವಿಸುತ್ತಾರೆ.
• ಭಯೋತ್ಪಾದಕರ ಆತ್ಮಾಹುತಿ ದಾಳಿಯಿಂದಾಗಿ ರಸ್ತೆ ಸಾರಿಗೆ, ರೈಲ್ವೆ, ವಿಮಾನ, ಪ್ರಮುಖ ಸರ್ಕಾರಿ ಕಛೇರಿಗಳು, ಕಿಕ್ಕಿರಿದ ಜನಜಂಗುಳಿ ಪ್ರದೇಶ & ಮಾರುಕಟ್ಟೆ ಪ್ರದೇಶಗಳು ನಾಶವಾಗುತ್ತವೆ.

9. ಭಯೋತ್ಪಾದಕತೆಯ ನಿಗ್ರಹಕ್ಕೆ ಭಾರತವು ಕೈಗೊಂಡಿರುವ ಕ್ರಮಗಳಾವವು?
   ನಮ್ಮ ಕೇಂದ್ರ & ರಾಜ್ಯ ಸರಕಾರಗಳು ಭಯೋತ್ಪಾದನೆಯ ನಿಗ್ರಹಕ್ಕೆ ತೀವ್ರ ಪ್ರಯತ್ನ ನಡೆಸುತ್ತಿವೆ. ಹಾಗೂ ತನ್ಮೂಲಕ ಜನತೆಯ ಪ್ರಾಣ ಹಾಗೂ ಆಸ್ತಿಪಾಸ್ತಿಯನ್ನು ಉಳಿಸಲು ಯತ್ನಿಸುತ್ತಿವೆ. ಭಯೋತ್ಪಾದನೆಯನ್ನು ನಿಗ್ರಹಿಸಲು ವಿ±ಇಂμಂ ಪರಿಣಿತಿ ಪಡೆದ ಪಡೆಗಳನ್ನು ರಚಿಸಲಾಗಿದೆ.

10. ಪ್ರಪಂಚದ ಯಾವ ಪ್ರಮುಖ ಘಟನೆಗಳು ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿ ನೀಡಿದವು?
     1776ರ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ, 1789ರ ಪ್ರಾನ್ಸಿನ ಮಹಾಕ್ರಾಂತಿ, 1917ರ  ರಷ್ಯಾ ಕ್ರಾಂತಿ, 20ನೇಯ ಶತಮಾನದ ಭಾರತ ಹಾಗೂ ಇನ್ನಿತರ ರಾಷ್ಟ್ರಗಳÀ ಸ್ವಾತಂತ್ರ್ಯ ಹೋರಾಟ, ಇವೆಲ್ಲಾ ಮಾನವ ಹಕ್ಕುಗಳ ಹೋರಾಟಕ್ಕೆ ಪುಷ್ಟಿ ತಂದುಕೊಟ್ಟವು.

11. ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ತಗ್ಗಿಸುವ ಸಲುವಾಗಿ ಪ್ರಪಂಚದಲ್ಲಿ ಆದ ಪ್ರಮುಖ ಒಪ್ಪಂದಗಳು ಯಾವುವು?
• 1963ರ ಮಿತ ಅಣ್ವಸ್ತ್ರ ಪರೀಕ್ಷಾ ನಿರ್ಬಂಧ ಒಪ್ಪಂದ
• ಬಾಹ್ಯಾಕಾಶ ಒಪ್ಪಂದ
• ಅಣ್ವಸ್ತ್ರಗಳ ಸಂಖ್ಯೆಯನ್ನು ಕುಗ್ಗಿಸುವ ಒಪ್ಪಂದ
• 1975ರ ಜೈವಿಕ ಅಸ್ತ್ರಗಳ ಉತ್ಪಾದನೆ & ದಾಸ್ತಾನು ನಿಷೇದ (ಃWಅ) ಒಪ್ಪಂದ
• ಸಮಗ್ರ ಪರೀಕ್ಷಣ ನಿಷೇದ ಒಪ್ಪಂದ

12. ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಪ್ರಪಂಚದ ಪ್ರಮುಖ ಮಹನೀಯರು ಯಾರು?
   ಮಹಾತ್ಮ ಗಾಂಧಿ, ಅಬ್ರಹಾಂ ಲಿಂಕನ್, ಜಾನ್.ಎಫ್.ಕೆನೆಡಿ, ಮಾರ್ಟಿನ್ ಲೂಥರ್ ಹಾಗೂ ನೆಲ್ಸನ್ ಮಂಡೆಲಾರವರು ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಪ್ರಪಂಚದ
ಪ್ರಮುಖ ಮಹನೀಯರಾಗಿದ್ದಾರೆ.

13. ದಕ್ಷಿಣ ಆಫ್ರಿಕದಲ್ಲಿ ಅನುಸರಿಸಿದ ವರ್ಣಭೇದ ನೀತಿಯ ಬಗ್ಗೆ ಬರೆಯಿರಿ.
• ಬಿಳಿಯರು ಕರಿಯರನ್ನು ಅತ್ಯಂತ ಕ್ರೂರ ಮತು ದೌರ್ಜನ್ಯದಿಂದ ನಡೆಸಿಕೊಳ್ಳತ್ತಿದ್ದನ್ನು ವರ್ಣಭೇದನೀತಿ ಎನ್ನುವರು.
• ದಕ್ಷಿಣ ಆಪ್ರಿಕಾದಲ್ಲಿ ಅತ್ಯಂತ ಕ್ರೂರ ಹಾಗೂ ದಮನಕಾರಿ ವರ್ಣಭೇದ ನೀತಿಯನ್ನು ಅನುಸರಿಸಲಾಗುತ್ತಿತ್ತು.
• ಕರಿಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು.
• ಕಪ್ಪು ಜನರನ್ನು ಗುಲಾಮರಂತೆ ಮಾರಾಟ ಮಾಡಲಾಗುತ್ತಿತ್ತು.
• ನೆಲ್ಸನ್ ಮಂಡೆಲಾರ ನೇತೃತ್ವದಲ್ಲಿ ಕರಿಜನರು ದೀರ್ಘ ಹೋರಾಟ ನಡೆಸಿ ವರ್ಣಭೇದ ನೀತಿಯನ್ನು ಕೊನೆಗಾಣಿಸಿದರು. ಹಾಗಾಗಿ ಇವರನ್ನು ಆಪ್ರಿಕಾದ ಗಾಂಧಿ ಎಂದು ಕರೆಯುತ್ತಾರೆ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments