ಪರೀಕ್ಷೆಗಳಿಗಾಗಿ ಚುನಾವಣೆ ಮತ್ತು ಚುನಾವಣಾ ಆಯೋಗದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳು

ಪರೀಕ್ಷೆಗಳಿಗಾಗಿ ಚುನಾವಣೆ ಮತ್ತು ಚುನಾವಣಾ ಆಯೋಗದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳು

ಭಾರತವು ಒಂದು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. 2001 ರ ಜನಗಣತಿಯ ಪ್ರಕಾರ 102.87 ಕೋಟಿ ಜನಸಂರ್ಖಯೆ ಹೊಂದಿದ್ದು ಇದರಲ್ಲಿ 10,863 ಚ.ಕಿ.ಮೀ ವಿಸ್ತ್ರೀರ್ಣ ಹೊಂದಿದ್ದು 6,05,224 ಹಳ್ಳಿಗಳು ಮತ್ತು 3,949 ನಗರಗಳನ್ನೊಳಗೊಂಡು ಇದರಲ್ಲಿ ಶೇ.80 ರಷ್ಟು ಜನ ಗ್ರಾಮಂತರ ಪ್ರದೇಶದಲ್ಲಿದದು ಇದರಲ್ಲಿ 83 ಭಾಗ ಹಿಂದೂಗಳು 11 ಭಾಗ ಮುಸ್ಲಿಂಮರಿದ್ದು 6 ಭಾಗ ಇತರ ಜನಾಂಗಗಳಿವೆ. ಇಂತಹ ಭವ್ಯ ಭಾರತದ ರಾಜಕೀಯ ಇತಿಹಾಸವನ್ನು ಕಾಣುವುದಾದರೆ,

ಭಾರತವು 1600 ರಿಂದ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದು, 1947 ರಲ್ಲಿ ಸ್ವತಂತ್ರಗೊಳಿಸಿತು. ಅದಕ್ಕಿಂತ ಪೂರ್ವದಲ್ಲಿ ಅಂದರೆ 1946 ರಲ್ಲಿ ಸಂವಿಧಾನ ರಚನಾ ಸಭೆಯನ್ನು ರಚಿಸಿ ಅದರಲ್ಲಿ ಯಾವ ರೀತಿಯ ರಾಜಕೀಯ ವ್ಯವಸ್ಥೆಯನ್ನು ಹೊಂದಬೇಕು ಎಂಬುದರ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಅಂತಿಮವಾಗಿ ನಾವುಗಳು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇದಕ್ಕೆ ಕಾರಣ 1947ರಲ್ಲಿ ಸ್ವಾತಂತ್ರ್ಯಗಳಿಸಿದ ಸಂದರ್ಭದಲ್ಲಿ ದೇಶದಲ್ಲಿ ಬಡತನ, ಹಸಿವು, ನಿರುದ್ಯೋಗ, ವಸತಿ ನಿರಾಶ್ರಿತರು ವಲಸೆ ಹೀಗೆ ಅನೇಕ ಸವಾಲುಗಳು ದೇಶ ಎದುರಿಸುತ್ತಿರುವ ಸಂದರ್ಭದಲ್ಲಿ ಹೊಸ ರಾಜಕೀಯ ವ್ಯವಸ್ಥೇಯನ್ನು ಅಳವಡಿಸುವುದು ತುಂಬಾ ಕಷ್ಟಕರವಾಗಿತ್ತು. ಆದರೆ ಬಹಳ ಕಾಲ ನಮ್ಮನ್ನ ಆಳಿದ ಬ್ರಿಟಿಷರ ಸಂಸದೀಯ ಪದ್ದತಿ ನಮಗೆ ಒಂದು ರೀತಿ ಪರಿಚಯಾತ್ಮಕ ಮತ್ತು ರಾಜಕೀಯ ಪಾಠದಂತಿತ್ತು. ಅಲ್ಲದೇ 1935ರ ಕಾಯ್ದೆಯು ಸಹಾ ಸಂಸದೀಯ ಪದ್ದತಿಯನ್ನು ಪ್ರತಿಪಧಿಸಿತು. ಇದರ ಪರಿಣಾಮವಾಗಿ 1947ರಲ್ಲಿ ಭಾರತ ಸ್ವತಂತ್ರ್ಯಗೊಳಿಸಿದ ನಂತರ 1950 ಜನವರಿ 26 ರಿಂದ ನಮ್ಮ ರಾಜ್ಯಾಂಗವನ್ನು ಹೊಂದಿದ ನಂತರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಇಂದಿನವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.

ಇಂತಹ ಭಾರತದ ಪ್ರಜಾಸತ್ತ ಈ ಭೂಮಿಯ ಮೇಲೆ ಒಂದು ಬೃಹತ್ ಪ್ರಜಾತಾಂತ್ರಿಕತೆ ಎಂಬುದು ನಿರ್ವಿವಾದಿತ ಅಂಶವಾಗಿದ್ದು ಪ್ರಜಸತ್ತತ್ಮಾಕ ರಾಷ್ಟ್ರಗಳಲ್ಲೇ ನಮ್ಮದು ಅತ್ಯಂತ ಸ್ಥಿರವಾದ ಪ್ರಜಾತಂತ್ರಿಕತೆ ಎಂಧು ಸಹಾ ಪರಿಗಣಿಸಲಾಗಿದೆ. ಲಕ್ಷ್ಮೀ ಚಂಧ್ರನ್ ಹಸನ್ ಉಜ್ಜಮನ್ ಪ್ರಕರಣದಲ್ಲಿ ಸರ್ವೊಚ್ಚ ನ್ಯಾಯಾಲಯದ ಮಾತುಗಳಲ್ಲೇ ಹೇಳುವುದಾದರೆ, “ಭಾರತದ ಪ್ರಜಾತಾಂತ್ರಿಕತೆಯು ನೀರ ಚಿಲುಮೆ ಎಂಬುದು ಸಮಕಾಲೀನ ಇತಿಹಾಸದ ವಾಸ್ತವಂಶ. ಈ ಸರ್ವೊಚ್ಚ ನ್ಯಾಯಾಲಯದ ಹೇಳಿಕೆಯನ್ನು ನಾವು ಪುಷ್ಠಿಕರಿಸಲು ಕಾರಣ ಪ್ರಾರಂಭದಲ್ಲಿ ವಿವರಿಸುವಂತೆ ಭಾರತ ಸ್ವತಂತ್ರ್ಯಗಳಿಸಿಕೊಂಡು ತಮ್ಮದೇ ಆದ ಸಂವಿಧಾನವನ್ನು ಹೊಂದಿದರೂ ಸಹಾ ಪಾಕಿಸ್ತಾನದಂತಹ ರಾಷ್ಟ್ರಗಳು ಸ್ವತಂತ್ರ್ಯಗಳಿಸಿಕೊಂಡು 60 ವರ್ಷಗಳ ಅವಧಿಯಲ್ಲಿ 30 ವರ್ಷಕ್ಕೂ ಅಧೀಕ ಕಾಲ ಸೇನಾ ನಾಯಕರು ಆಡಳಿತ ಮತ್ತು ರಾಜಕೀಯ ಅಸ್ಥಿರತೆಯೊಂದಿಗೆ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಭಾರತವು ಇಂದಿನವರೆಗೂ ಸಹಾ (ತುರ್ತು ಪರಿಸ್ಥಿತಿಯನ್ನು ಹೊರತು ಪಡಿಸಿ) ಇಂತಹ ಕಹಿ ಘಟನೆಗಳಿಗೆ ಸಿಲುಕಿರುವುದಿಲ್ಲ. ಇದಕ್ಕೆ ಕಾರಣ ಭಾರತದ ಪ್ರಜಾಸತಾತ್ಮಕ ಮೌಲ್ಯಗಳು & ಸಂವಿಧಾನದಲ್ಲಿನ ಸದೃಡತೆ ಎನ್ನಬಹುದು. ಆದ್ದರಿಂದಲೇ ಡಾ|| ಬಿ.ಆರ್. ಅಂಬೇಡ್ಕರ್ ರವರು ಭಾರತದ ಪ್ರಜಾಪ್ರಭುತ್ವದ ಭವಿಷ್ಯವನ್ನು ಈ ರೀತಿ ಹೇಳಿದ್ದಾರೆ. “ನಮ್ಮ ಪ್ರಜಾಪ್ರಭುತ್ವ ಜೀವಾಂತವಾಗಿದಲ್ಲಿ ಅದರ ಫಲವನ್ನು ಭಾರತೀಯರಾದ ನಾವು ಅನುಭವಿಸುವುದು ನಿಶ್ಚಿತ ಒಂದು ಪಕ್ಷ ಆ ಪ್ರಜಾಪ್ರಭುತ್ವವು ಮರಣ ಹೊಂದಿದಲ್ಲ ಅದುವೇ ವಿನಾಶ. ಈ ಬಗ್ಗೆ ಸಂಶಯಬೇಡ” ಎನ್ನುವ ಮೂಲಕ ಜನತೆಯ ಮೇಲಿರುವ ಹೊಣೆ ಏನು ಎಂಬುದನ್ನು ತಿಳಿಸಿದ್ದಾರೆ. ಆ ಹೊಣೆ ಏನೆಂದರೆ ಪ್ರಜಾಪ್ರಭುತ್ವದ ಚಲನೆಗೆ ಕಾರಣವಾಗಿರುವರು ಜನಪ್ರತಿನಿಧಿಗಳ ಆಯ್ಕೆ ಈ ಜನಪ್ರತಿನಿಧೀಗಳ ಆಯ್ಕೆಯು ಬಹುಕಠಿಣ ವಿಧಾನವಾಗಿರುವುದನ್ನು ಈ ವರೆಗೆ ಭಾರತದ ಸಂಸತ್ತಿಗೆ ನಡೆದ 15 ಚುನಾವಣೆಗಳಲ್ಲಿ ಕಾಣಬಹುದಾಗಿದೆ. ಆ ಚುನಾವಣೆಗಳು ನಡೆದ ವರ್ಷಗಳೆಂದರೆ 1952, 1957, 1962, 1967,1971 ,1977, 1980, 1984, 1989, 1991, 1996, 1998, 1999, 2004, 2005 ಈ 15 ಚುನಾವಣೆಗಳಲ್ಲಿ 5 ಚುನಾವಣೆಗಳನ್ನು ಬಿಟ್ಟು ಉಳಿಕೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸರಕಾರ ರಚಿಸಿದೆ. ಇಂತಹ ಸರಕಾರ ರಚನೆಗೆ ಅವಶ್ಯಕವಾಗಿ ಬೇಕಾಗಿರುವುದು ಸ್ವತಂತ್ರ್ಯವಾದ ತನ್ನದೆ ಆದ ಸ್ವಾಯತ್ತತೆ ಹೊಂದಿರುವ ರಾಜಕೀಯ ಹಿಡಿತದಿಂಧ ಮುಕ್ತವಾಗಿರುವ ಚುನವಣಾ ಆಯೋಗವಾಗಿದೆ. ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಮೈಗೂಡಿಸಿಕೊಂಡು ಭಾರತದ ಸಂವಿಧಾನಾತ್ಮಕ ಸಂಸ್ಥೆಯಾಗಿ ರೂಪಗೊಂಡಿರುವ ಸಂಸ್ಥೆ ಎಂದರೆ ಭಾರತೀಯ ಚುನಾವಣಾ ಆಯೋಗವಾಗಿದೆ.

ಈ ಭಾರತೀಯ ಚುನಾವಣಾ ಆಯೋಗದ ನೇತೃತ್ವದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ 1951-52 ರಲ್ಲಿ ನಡೆಯಿತು. ಆ ಸಂಧರ್ಭದಲ್ಲಿ 17 ಕೋಟಿ ಮತದಾರರು ಮತ ಚಲಾಯಿಸುವ ಮುಖಾಂತರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗುಂಡಿದ್ದರೂ ಈ ರೀತಿ ಈ ವರೆಗೂ ಅನೇಕ ಚುಣಾವಣೆಗಳನ್ನು ನಡೆಸಿಕೊಂಡು ಬಂದಿರುವ ಈ ಚುನಾವಣಾ ಆಯೋಗವನ್ನು “ಭಾರತೀಯ ಸಂಸದೀಯ ವ್ಯವಸ್ಥೆಯ ಕಾವಲು ನಾಯಿ ಎಂತಲೇ ಕರೆಯುತ್ತಾರೆ”.

ಭಾರತೀಯ ಚುನಾವಣಾ ಆಯೋಗ :

ಪ್ರಾರಂಭದಲ್ಲಿ ತಿಳಿಸಿರುವಂತೆ ನಮ್ಮ ಸಂವಿಧಾನ ರಚನಾಕಅರ್ತರೂ ರಾಷ್ಟ್ರದಲ್ಲಿ ಮುಕ್ತ & ನಿಷ್ಪಕ್ಷಪಾತವಾದ ಚುನಾವಣೆಗಳನ್ನು ನಡೆಸುವ ದೃಷ್ಟಿಯಿಂದ ಸಂವಿಧಾನದ 324ನೇ ವಿಧಿಯಿಂದ 329ನೇ ವಿಧಿಗಳ ಪ್ರಕಾರ ಚುನಾವಣಾ ಆಯೋಗದ ರಚನೆಗೆ ಅವಕಾಶ ಆಯೋಗದ ರಚನೆಗೆ ಅವಕಾಶ ನೀಡಲಾಗಿದ್ದು, ಇದರ ಅನ್ವಯ ಜನವರಿ 25, 1950 ರಂದು ಸ್ವಯುತ್ತಾ & ಅರೆ ನ್ಯಾಯಾಂಗೀಯ ಅಧಿಕಾರವನ್ನು ಹೊಂದಿರುವ ಸಂವಿಧಾನತ್ಮಕ ಸಂಸ್ಥೆಯನ್ನಾಗಿ ರೂಪಿಸಿದರು.(ಂuಣoಟಿomous & quos ರಿuಜiಛಿiಚಿಟ ಛಿoಟಿsಣiಣuಣioಟಿಚಿಟ boಜಥಿ) ಇದನ್ನು ಭಾರತ ಸಂವಿಧಾನದ 4ನೇ ಸ್ತಂಭ ಎಂದು ಕರೆಯಲಾಗಿದೆ(ಉಳಿಕೆ 3 ಅಂಗಗಳೆಂದರೆ ಸುಪ್ರೀಂ ಕೋರ್ಟ ಯು.ಪಿ.ಎಸ್.ಸಿ & ಕಂಟ್ರೋಲರ್ ಹಾಗೂ ಅಡಿಟರ್ ಜನರಲ್‍ಗಳಾಗಿದ್ದರೆ).
1950 ರಿಂದ 1989 ರ ವರೆಗೆ ಈ ಆಯೋಗವು ಏಕ ಸದಸ್ಯರನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿತ್ತು. ಅಕ್ಟೋಬರ್ 16, 1989 ರಿಂಧ ರಾಷ್ಟ್ರಪತಿ ಯವರು ಇಬ್ಬರೂ ಚುನಾವಣಾ ಕಮೀಷನರ್‍ಗಳನ್ನು ನೇಮಕ ಮಾಡಿದ್ದರು. ಅವರೆಂದರೆ ಎಸ್.ಎಸ್. ಥನೋವಾ ಮತ್ತು ವಿ.ಎಸ್. ಸೀಗೆಲ್‍ರವರುಗಳಾಗಿದ್ದು, ಜನವರಿ 11, 1990 ರಂದು ರಾಷ್ಟ್ರಾಧ್ಯಾಕ್ಷರು ಹೊಸದಾಗಿ ನೇಮಕವಾಘಿದ್ದ ಆ ಇಬರು ಆಯುಕ್ತರುಅಗಳನ್ನು ರದ್ದುಪಡಿಸಿದರು. ಪಿ.ವಿ. ನರಸಿಂಹರಾವ್ ಸರಕಾರವು ಅಕ್ಟೋಬರ್ 01-1993 ರಂದು ತ್ರಿಸದಸ್ಯ ಚುನಾವಣಾ ಆಯೋಗವನ್ನ ರಚಿಸಿತು. ಅಂದಿನಿಂದ ಇಂದಿನವರೆಗೆ ಚುನಾವಣಾ ಆಯೋಗವು ಒಬ್ಬ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರನ್ನು.

ನೇಮಕ: ಚುನಾವಣಾ ಆಯೋಗದ ಮುಖ್ಯ ಕಮಿಷನರ್ ಮತ್ತು ಇತರ ಸದಸ್ಯರಗಳನ್ನು ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ. ಈ ನೇಮಕಾತಿ ಮಾಡುವಾಗ ಕ್ಯಾಬಿನೆಟ್ ಸಲಹೆಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ.ಅಧಿಕಾರವಧಿ: ಆ ಆಯೋಗದ ಸದಸ್ಯರ ಅವಧಿ 6 ವರ್ಷಗಳು ಆದರೆ ಅವಧಿಕ್ಕಿಂತ ಮೊದಲು 65 ವರ್ಷಗಳು ತುಂಬಿದ್ದರೆ ಹುದ್ದೆಯಿಂದ ನಿವೃತ್ತಿಯಾಗಬೇಕಾಗುತ್ತದೆ.ಸೇವಾನಿಯಮಗಳು: ಚುನಾವಣಾ ಆಯೋಗದ ಸದಸ್ಯರ ಹಾಗೂ ಪ್ರಾದೇಶಿಕ ಆಯುಕ್ತರ ಸೇವಾ ನಿಯಮಗಳ್ನನು ಸಂಸತ್ ನಿರ್ಧರಿಸುತ್ತದೆ. ಇಂತಹ ಸೇವಾ ನಿಯಮಗಳನ್ನು ಆಯೋಗದ ಸದಸ್ಯರಿಗೆ ಅನಾನುಕೂಲವಾಘುವಂತೆ ಬದಲಾಯಿಸುವಂತಿಲ್ಲ.

ಆಯೋಗದ ಹಣಕಾಸಿನ ಮೂಲ: ಆಯೋಗದ ಕಾರ್ಯಕಾರಿ ಇಲಾಖೆಗೆಂದು ಸ್ವತಂತ್ರ ಬಜೆಟ್‍ನ್ನು ಒದಗಿಸಲಾಗುತ್ತದೆ. ಆಯೋಗ ಮತ್ತು ಕೇಂಧ್ರ ಸರಕಾರದ ಹಣಕಾಸು ಸಚಿವಾಲಾಯದ ನಡುವೆ ಚರ್ಚೆ ನಡೆದು ಆಯವ್ಯಯವನ್ನ ಅಂತಿಮಗೊಳಿಸುತ್ತಾರೆ. ಈ ಆಯೋಗಕ್ಕೆ ಮುಖ್ಯ ಚರ್ಚೆ ಬರುವುದು ಚುನಾವಣೆಗಳನ್ನು ನಡೆಸುವಾಗ (ಸಂಸತ್ತಿನ ಚುನಾವಣೆ ಖರ್ಚೆನ್ನು ಕೇಂದ್ರಸರಕಾರ ಭರಿಸಿದರೆ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಸಿದರೆ ರಾಜ್ಯ ಸರಕರ ಚುನಾವಣೇ ಖರ್ಚನ್ನು ಭರಿಸುತ್ತದೆ).

ಆಯೋಗದ ಸದಸ್ಯರ ವೇತನ & ಭತ್ಯೆಗಳು:

ಇವರಿಗೆ ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಮಾನವನ್ನು ನೀಡಲಾಗಿದ್ದು, ಆದ್ದರಿಂದ ಆಯೋಗದ ಸದಸ್ಯರಿಗೆ ಸರ್ವೊಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ದೊರೆಯುವ ವೇತನ & ಪೀಂಚಣಿ ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ. ಈ ಹಣವನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತದೆ.
ಪದಚ್ಯುತಿ: ಈ ಆಯೋಗದ ಸದಸ್ಯರನ್ನು ಪದಚ್ಯುತಿಗೊಳಿಸಲು ತನ್ನದೇ ಆದ ಮತ್ತು ಕಠಿಣವಾದ ವಿಧಿವಿಧಾನಗಳನ್ನು ಅನುಸರಿಸಲಾಗುತ್ತದೆ.
• ಮೂಖ್ಯ ಚುನಾವಣಾ ಆಯುಕ್ತರನ್ನು ಸಂವಿಧಾನದ 354ನೇ ವಿಧಿಯ 5ನೇ ಉಪವಿಧಿಯ ಪ್ರಕಾರ ಸುಪ್ರೀಂ ಕೋರ್ಟನ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸಲು ಅನುಸರಿಸುವ ವಿಧಾನದ ಮೂಲಕ ಪದಚ್ಯುತಿಗೊಳಿಸಿದರೆ,
• ಇತರ ಚುನಾವನಾಧಿಕಾರಿಗಳು ಹಾಗ ಪ್ರಾದೇಶಿಕ ಚುನಾವನಾಧಿಕಾರಿಗಳನ್ನು ಮುಖ್ಯ ಚುನಾವನಾಧಿಕಾರಿಗಳ ಶಿಪಾರಸ್ಸಿನೊಡನೆ ವಜಾಮಾಡಲು ಅವಕಾಶವಿದೆ.
ಆದರೆ ಇದುವರೆಗೂ ಯಾರನ್ನು ಸಹಾ ಪದಚ್ಯುತಿಗೊಳಿಸಿಲ್ಲ ಆದರೆ ಕೇಂಧ್ರದಲ್ಲಿ ಅಧಿಕಾರದಲ್ಲಿದ್ದ ನರಸಿಂಹರಾರ್‍ರವರ ಸರಕಾರವು ಟಿ.ಎನ್.ಶೇಷನ್‍ರವರನ್ನ ಪದಚ್ಯುತಿಗೊಳಿಸುವತ್ತ ಯೋಜಿಸುತ್ತಾರೂ ಕ್ರಮ ಕೈಗೊಳ್ಳಲಿಲ್ಲ.
ಚುನಾವಣಾ ಆಯೋಗದ ಸ್ವಾತಂತ್ರ್ಯತೆ: ಚುನವಣಾ ಆಯೋಗವು ಸ್ವತಂತ್ರವಾಗಿ ಹಾಗೂ ನಿರ್ಭಯವಾಘಿ ಕಾರ್ಯನಿರ್ವಹಿಸಲು ಅವಕಾಶವಿದ್ದಾಗ ಮಾತ್ರ ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಾಧ್ಯ ಎಂಬುದ ದೃಷ್ಠಿಯಿಂದ ಸಂವಿಧಾನ ರಚನಾಕರ್ತರುಗಳು ಚುನಾವಣಾ ಆಯೋಗವನ್ನು ಸ್ವತಂತ್ರ ನಿಯಂತ್ರಣ ಆಯೋಗವನ್ನಾಗಿ ರಚಿಸಿರುವವರು. ಇದಕ್ಕಾಗಿ ಕೆಲವು ನಿಯಮಗಳನ್ನು ಅಳವಡಿಸಲಾಗಿದೆ, ಅವುಗಳೆಂದರೆ,
• ಸಂವಿಧಾನದ 324ನೇ ವಿಧಿಯು 5ನೇ ಉಪವಿಧಿಯ ಪ್ರಕಾರ ಚುನಾವಣಾ ಆಯುಕ್ತರಿಗೆ ಸೇವಾ ಭದ್ರತೆಯನ್ನು ಒದಗಿಸುತ್ತದೆ. ನೇಮಕ ಮಡಿದ ನಂತರ ತನಗೆ ಅನಾನುಕೂಲವಾಘುವಂತೆ ಸೇವಾ ನಿಯಮಗಳನ್ನು ಸರ್ಕಾರ ಬದಲಾಯಿಸುವಂತಿಲ್ಲ
• ಮೂಖ್ಯ ಚುನಾವಣಾ ಅಧಿಕಾರಿಯನ್ನು ಪದಚ್ಯುತಿಗೊಳಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನ ಪದಚ್ಯುತಿಗೊಳಿಸುವ ವಿಧಾನವನ್ನ ಅನುಸರಿಸಬೇಕು.
• ಮುಖ್ಯ ಚುನಾವಣಾ ಆಯುಕ್ತರ ಶಿಪಾರಸ್ಸಿಗೆ ಅನುಗುಣವಾಗಿ ಮಾತ್ರ ಇತರ ಚುನಾವಣಾ ಆಯುಕ್ತರು ಹಾಗೂ ಪ್ರಾದೇಶಿಕ ಆಯುಕ್ತರುಗಳನ್ನು ಸೇವೆಯಿಂದ ತೆಗೆದು ಹಾಕಬಹುದು.
• ಆಯೋಗದ ಸದಸ್ಯರಿಗೆ ಭಾರತದ ಸಂಚಿತ ನಿಧೀಯಿಂದ ವೇತನ ಪಿಂಚಣಿ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.
• ಚುನಾವಣಾ ಆಯೋಗದ ಸದಸ್ಯರಿಗೆ ಸುಪ್ರೀಂ ಕೋರ್ಟ ನ್ಯಾಯಾಧಿಶರ ಸ್ಥಾನಮಾನವನ್ನ ಹೊಂದಿದ್ದಾರೆ.
• ಚುನಾವಣೆಗಳನ್ನು ನಡೆಸಲು ಅವಶ್ಯವಿರುವಂತಹ ಎಲ್ಲಾ ಸಿಬ್ಬಂದಿವರ್ಗವನ್ನ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಒದಗಿಸಬೇಕಾಗುತ್ತದೆ.
ಈ ರೀತಿ ನಿಬಂಧನೆಗಳು ಇರುವುದರಿಂದ ಕೆಂದ್ರ ಸರಕಾರವು ಇತರೆ ಉದ್ಯೋಗಿಗಳ ಮೇಲೆ ಕ್ರಮಕೈಗೊಳ್ಳುವಂತೆ ಆಯೋಗದ ಸದಸ್ಯರ ಮೇಲೆ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಹಾಗೂ ಅದಕ್ಕೆ ಶಾಸಕಾಂಗದ ಒಪ್ಪಿಗೆ ಇರಲೇಬೇಕಾಗಿರುವುದರಿಂದ ಆಯೋಗವು ಸ್ವತಂತ್ರವಾಗಿ ನಿರ್ಭಯದಿಂದ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಮುಖ್ಯ ಸಂಗತಿಗಳು:

ಕೇಂಧ್ರ ಹಾಗೂ ರಾಜ್ಯಶಾಸಕಾಂಗಗಳ ಚುನಾವಣೆಯನ್ನು ಯಾರು ನಡೆಸುತ್ತಾರೆ.
ಭಾರತದಲ್ಲಿ ಒಂದೇ ಚುನಾವಣಾ ಆಯೋಗವಿದ್ದು ಸಂವಿಧಾನದ 324(1) ಹಾಗೂ 1950 & 1951 ರ ಪ್ರಜಾಪ್ರತಿನಿಧಿ ಕಾಯ್ದೆಗಳ ಅನ್ವಯ ಈ ಚುನಾವನಾ ಆಯೋಗವು ಪಾರ್ಲಿಮೆಂಟ್ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯವಿಧಾನ ಮಂಡಲಗಳ ಚುನಾವಣೆ ನಡೆಸುತ್ತದೆ.
ಕಾರ್ಪರೇಷನ್ ಮುನಿಸಿಪಾಲಿಟಿಗಳು & ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆರು ನಡೆಸುತ್ತಾರೆ.
ವಿಧಿ 243ಏ ಮತ್ತು 243 ZA ಪ್ರಕಾರ (73 & 74ನೇ ತಿದ್ದುಪಡಿಯನ್ವಯ) ಪ್ರತಿ ರಾಜ್ಯದಲ್ಲಿ ರಾಜ್ಯ ಚುನಾವಣಾ ಆಯೋಗವನ್ನು ರಚಿಸಲಾಗಿದ್ದು ಕೇಂಧ್ರಾಡಳಿತ ಪ್ರದೇಶಗಳು ಸೇರಿ, ಇವುಗಳು ಕಾರ್ಪರೇಷನ್ ಮುನಿಸಿಪಾಲಿಟಿಗಳು & ಸ್ಥಳೀಯ ಸಂಸ್ಥೆಗಳಾದ ಗ್ರಾಮ, ತಾಲ್ಲೂಕು & ಜಿಲ್ಲಾ ಪಂಚಾಯಿತಿಗಳ ಚುನಾವಣೆ ನಡೆಸುತ್ತವೆ.
ಕರ್ನಾಟಕದಲ್ಲಿ ರಾಜ್ಯ ಚುನಾವಣಾ ಆಯೋಗವನ್ನ ಯಾವಾಗ ರಚಿಸಲಾಯಿತು ಈಗಿನ ಆಯುಕ್ತರು ಯಾರು?
20-05-1993 ರಲ್ಲಿ ರಚಿಸಲಾಯಿತು. ಈಗಿನ ಆಯುಕ್ತರು ಸಿ.ಆರ್. ಚಿಕ್ಕಮಠ
ರಾಜ್ಯ ಚುನಾವಣಾ ಆಯುಕ್ತರನ್ನ ಯಾರು ನೇಮಿಸುತ್ತಾರೆ.
1950 ರ ಪ್ರಜಾಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 13ಎಎ ಪ್ರಕಾರ ಜಿಲ್ಲೆಯಲ್ಲಿನ ಜಿಲ್ಲಾಧಿಕಾರಿಗಳು ಚುನಾವಣಾ ಮುಖ್ಯಸ್ಥಾರಾಗಿ ಜೊತೆಗೆ ತಾಲೂಕಿನ ತಹಶೀಲ್ದರರು ಇವರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.
ಪ್ರಥಮವಾಗಿ ಎಲೆಕ್ಟ್ರನಿಕ್ ಮತಯಂತ್ರಗಳನ್ನ ಯಾವಾಗ ಬಳಸಲಾಯಿತು.
1982 ರಲ್ಲಿ ಕೇರಳದ ಪೆರೂರ್ ಮತಕ್ಷೇತ್ರದ ಉಪಚುನಾವಣೆಯಲ್ಲಿ ಬಳಸಲಾಯಿತು. ನಮತರ 1998 ರಲ್ಲಿ ಮಧ್ಯ ಪ್ರದೇಶದ 16 ಅಸೆಂಬ್ಲೀ ಕ್ಷೇತ್ರಗಳಲ್ಲಿ ಬಳಸಲಾಯಿತು. ಅಂತಿಮವಾಗಿ 2004 ರ ಸಾರ್ವತ್ರಿಕ ಚುನಾವಣೆಯಲ್ಲಿ ಇವುಗಳ ಸಂಪೂರ್ಣ ಬಳಕೆಗೆ ಜಾರಿ ತರಲಾಯಿತು.
ಚುನಾವಣಾ ಆಯೋಗದ ಅಧಿಕಾರ & ಕಾರ್ಯಗಳು
• ಮತದಾರರ ಪಟ್ಟಿಗಳ ಸಿದ್ದತೆ ಹಾಗೂ ಪರೀಶೀಲನೆ
• ಸಂಸತ್ ರಾಜ್ಯಶಾಸಕಾಂಗ, ರಾಷ್ಟ್ರಧ್ಯಕ್ಷರು ಹಾಗೂ ಉಪರಾಷ್ಟ್ರಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು.
• ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು & ಚಿಹ್ನೆಗಳನ್ನು ನೀಡುವುದು.
• ಚುನಾವಣಾ ವಿವಾದಗಳನ್ನು ಬಗೆಹರಿಸಲು ಅಧಿಕಾರಿಗಳನ್ನ ನೇಮಿಸುವುದು
• ಚುನಾವಣಾ ವೇಳೆ ನೀತಿ ಸಂಹಿತೆ ಜಾರಿಗೊಳಿಸುವುದು.
• ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ಸಲಹೆ ನೀಡುವುದು.
• ಚುನಾವಣಾ ಅಕ್ರಮಗಳನ್ನು ತಡೆಯುವುದು
• ಚುನಾವಣೆಗೆ ಸಂಬಂಧಿಸಿದಂತೆ ಸಿಬ್ಬಂಧಿಯನ್ನು ಒದಗಿಸುವಂತೆ ರಾಷ್ಟ್ರಧ್ಯಕ್ಷರ & ರಾಜ್ಯಪಾಲರನ್ನ ಕೇಳಿಕೊಳ್ಳುವುದು.
• ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು
• ರಾಷ್ಟ್ರೀಯ & ಪ್ರಾದೇಶಿಕ ಪಕ್ಷಗಳ ಸ್ಥಾನಮಾನ ನೀಡುವುದು
• ಅನಿರೀಕ್ಷಿತ ಸಮಯದಲ್ಲಿ ಚುನಾವಣೆ ಮುಂದುಡುವುದು
• ಪ್ರಾದೇಶಿಕ ಆಯುಕ್ತರ ಹುದ್ದೆಗಳಿಗೆ ಹೆಸರುಗಳನ್ನ ಸೂಚಿಸುವುದು.
ರೀತಿಯಾಗಿ ಇನ್ನೂ ಅನೇಕ ಕಾರ್ಯಗಳನ್ನ ನೇರೆವೇರಿಸುತ್ತಾರೆ.

ಚುನಾವಣಾ ಪ್ರಕ್ರಿಯೆಯ ಹಂತಗಳು:

1. ನಾಮಪತ್ರ ಸಲ್ಲಿಕೆ
2. ನಾಮಪತ್ರಗಳ ಪರಿಶೀಲನೆ
3. ಸ್ಪರ್ಧೆಯಲ್ಲಿ ಉಳಿದುಕೊಂಡು ಅಭ್ಯರ್ಥಿಗಳ ಹೆಸರಉಗಳ ಪ್ರಕಟ
4. ಚುನಾಅವಣಾ ಪ್ರಚಾರಕ್ಕೆ ಸಮಯ ನಿಗದಿ ಪಡಿಸುವುದು
5. ಮತದಾನ
6. ಮತ ಎಣಿಕೆ & ಫಲಿತಾಂಶಗಳ ಪ್ರಕಟ
ಈ ರೀತಿ ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ದ ವ್ಯವಸ್ಥೆಯ ಮುಂದುವರಿಕೆಗೆ ಪ್ರಮಾಣಿಕವಾಗಿ ಪ್ರಯತ್ನಿಸುತ್ರಿರುವುದು ಸ್ವಾಗತರ್ಹವಾಗಿದೆ. ಇದರ ಪ್ರಭಾವ ಎಷ್ಠಿದೆ ಎಂದರೆ ಚುನಾವಣಾ ಆಯೋಗ ಚಾಟಿಗೆ ರಾಜಕೀಯ ವ್ಯಕ್ತಿಗಳು ಇಂದು ತತ್ತರಿಸಿ ಹೋಗುತ್ತಿದ್ದಾರೆ. ಅದರಲ್ಲೂ ಚುನಾವಣಾ ಆಯೋಗಕ್ಕೆ ಮುಖ್ಯ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡ ಎಂಬುದನ್ನು ಅರಿವು ಮಾಡಿಕೊಟ್ಟರೂ ಅವರು ಜಾರಿಗೆ ತಂದ ಮತದಾರರ ಗುರುತಿನ ಚೀಟಿ ಚುನಾವಣಾ ಅಕ್ರಮಗಳ ನಿಯಂತ್ರಣ ಚುನಾವಣೆಗೆ ಸಾಅರ್ವಜನಿಕ ಆಸ್ತಿಗಳನ್ನು ದುರ್ಬಳಕೆಯಾಗದಂತೆ ತಡೆಹಿಡಿದಿದ್ದು ಚುನಾವಣಾ ವೆಚ್ಚದ ಮೇಲೆ ನಿಯಂತ್ರಣ ಹೇರಿದ್ದು ಈ ರೀತಿ ಇನ್ನೂ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ದೇಶದಾದ್ಯಂತ ಪ್ರಖ್ಯಾತರಾದ ಸಂದರ್ಭದಲ್ಲಿ ಶೇಷನ್‍ರವರ ಕಾರ್ಯ ವೈಖರಿ ಮೇಲೆ ನಿಯಂತ್ರಣ ಹೇರಲು ಸರಕಾರ 1993 ರಲ್ಲಿ ಪಿ.ವಿ ನರಸಿಂಹರಾವ್ ಸರಕಾರವು ಸುಗ್ರೀವಾಜ್ಞ ಮೂಲಕ ಚುನಾವಣಾ ಆಯೋಗವನ್ನ ಬಹುಸದಸ್ಯರ ಆಯೋಗವನ್ನಾಗಿ ಪರಿವರ್ತಿಸಿ ಒಬ್ಬ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಉಪಚುನಾವಣಾಯುಕ್ತರನ್ನಾಗಿ ಮಾಡಿ ತೀರ್ಮಾನಗಳನ್ನ ಬಹುಮತದ ಆಧಾರದ ಮೇಲೆ ತೆಗೆದುಕೊಳ್ಳುವಂತೆ ಮಾಡಿತು. ಒಟ್ಟಾರೆ ಇಂತ ಆಯೋಗವು ಭಾಅರತದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅನಿವಾರ್ಯವಾಗಿದೆ ಎಂದು ಹೇಳಬಹುದು. ಆದ್ದರಿಂದ ಭಾರತೀಯ ಚುನಾವಣಾ ಆಯೋಗವನ್ನ ಭಾರತದ ಸಂಸದೀಯ ಪದ್ದತಿಯ ಕಾವಲು ನಾಯಿ ಎಂದು ಕರೆಯಬಹುದಾಗಿದೆ.

ಭಾರತದ ಚುನಾವಣಾ ಆಯುಕ್ತರ ಪಟ್ಟಿ :

1. ಸುಕುಮಾರ್ ಸೇನ್ ಮಾರ್ಚ 1950 ರಿಂದ ಡಿಸೆಂಬರ್ 1958
2. ಕೆ.ವಿ.ಕೆ.ಸುಂದರಂ ಡಿಸೆಂಬರ್ 1958 ರಿಂದ ಸೆಪ್ಟೆಂಬರ್ 1967
3. ಎಸ್.ಪಿ.ಸೇವಾವರ್ಮ ಅಕ್ಟೋಬರ್ 1967 ರಿಂದ ಸೆಪ್ಟೆಂಬರ್ 1972
4. ಡಾ.ನರೇಂದ್ರ ಸಿಂಗ್ ಅಕ್ಟೋಬರ್ 1972 ರಿಂದ ಫೆಬ್ರವರಿ 1973
5. ಟಿ.ಸ್ವಾಮಿನಾಥನ್ ಫೆಬ್ರವರಿ 1973 ರಿಂದ ಜೂನ್ 1977
6. ಎಸ್.ಎಲ್.ಶಕರ್ ಜೂನ್ 1977 ರಿಂದ ಜೂನ್ 1982
7. ಆರ.ಕೆ. ತ್ರಿವೇದಿ ಜೂನ್ 1982 ರಿಂದ ಡಿಸೆಂಬರ್ 1985
8. ಆರ್.ವಿ.ಎಸ್. ಪೆರೆಶಾಸ್ತ್ರಿ ಜನವರಿ ರಿಂದ 1986 ನವೆಂಬರ್ 1990
9. ವಿ.ಎಸ್. ರಮಾದೇವಿ ನವೆಂಬರ್  ರಿಂದ1990 ಡಿಸೆಂಬರ್ 1990
10. ಟಿ.ಎನ್. ಶೇಷನ್ ಡಿಸೆಂಬರ್ ರಿಂದ 1990 ಡಿಸೆಂಬರ್ 1990
11. ಡಾ.ಎಂ.ಎಸ್.ಗಿಲ್ ಡಿಸೆಂಬರ್ ರಿಂದ 1996 ಜೂನ್ 2001
12. ಜೆ.ಎಂ.ಲಿಂಗ್ಲೋ ಜೂನ್ 2001 ರಿಂದ ಫೆಬ್ರವರಿ 2004
13. ಟಿ.ಎಸ್. ಕೃಷ್ಣಮೂರ್ತಿ ಫೆಬ್ರವರಿ ರಿಂದ 2004 ಮೇ. 2005
14. ಬಿ.ಬಿ ಟಂಡನ್ ಮೇ 2005 ರಿಂದ ಜೂನ್ 2006
15. ನವೀನ್ ಚಾವ್ಲಾ ಮೇ 2009 ರಿಂದ ಜುಲೈ 2010
16. ಎಸ್.ವೈ. ಖುರೇಷಿ  ಜುಲೈ 2010 ರಿಂದ  ಜೂನ್ 2012
17.  ವಿ. ಎಸ್ ಸಂಪತ್ : 11 ಜೂನ್ 2012 ರಿಂದ 15 ಜನೇವರಿ 2015
18. ಹೆಚ್. ಎಸ್. ಬ್ರಹ್ಮ : 16 ಜನೇವರಿ 2015 ರಿಂದ 18 ಏಪ್ರಿಲ್ 2015
19. ನಸೀಮ್ ಜೈದಿ : 19 ಏಪ್ರಿಲ್ 2015 ರಿಂದ 5 ಜುಲೈ 2017
20. ಅಚಲ್ ಕುಮಾರ್ ಜ್ಯೋತಿ: 6 ಜುಲೈ 2017 ರಿಂದ22 ಜನೇವರಿ 2018
21. ಓಂ ಪ್ರಕಾಶ್ ರಾವತ್ : 23 ಜನೇವರಿ ರಿಂದ 2018 ಈವರೆಗೆ

ಚುನಾವಣಾ ವ್ಯವಸ್ಥೆ ಸುಧಾರಣೆಗಾಗಿ ನೇಮಕಗೊಂಡ ಸಮಿತಿಗಳು :
1. 1957 ರ ವಿ.ಎಂ. ತಾರ್ಕುಂಡೆ ಸಮಿತಿ
2. 1990 ರಅ ದಿನೇಶ ಗೋಸ್ವಾಮಿ ಸಮಿತಿ
3. 1998 ರ ಇಂದ್ರಜಿತ್ ಗುಪ್ತಾ ಸಮಿತಿ
2002 ಜುಲೈ ನಲ್ಲಿ ಸುಪ್ರಿಂಕೋರ್ಟ ನಿರ್ದೇಶನದ ಮೇರೆಗೆ ಸರ್ವಪಕ್ಷಗಳು ಸಭೆ ನಡೆಸಿ ಕೆಲವು ತೀರ್ಮಾನಕ್ಕೆ ಬಂದಿತು
1. ರಾಜಕೀಯ ಅಪರಾಧಿಕರಣ ತಡೆಯುವುದು
2. ಹಣದ & ಶಕ್ತಿ ಬಳಕೆ ಕಡಿಮೆ ಮಾಡುವುದು
3. ಮತದಾರರಲ್ಲಿ ಪ್ರಜ್ಞೆ ಮೂಡಿಸುವುದು
4. ಚುನಾವಣಾ ಯಂತ್ರ ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳುವುದು.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments