ಭಾರತದ ರಾಷ್ಟ್ರಪತಿ

ಭಾರತದ ರಾಷ್ಟ್ರಪತಿ

ರಾಷ್ಟ್ರಪತಿ – 52ನೇ ವಿಧಿಯು ಭಾರತಕ್ಕೆ ರಾಷ್ಟ್ರಪತಿ ಸ್ಥಾನವನ್ನು ಹೇಳಿದೆ. ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ .ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ರಾಷ್ಟ್ರಪತಿ  ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು ವಿಶೇಷ ಅಧಿಕಾರಗಳನ್ನು ಹೊಂದಿದ್ದು ಸರ್ವೋನ್ನತ ಸ್ಥಾನವನ್ನು ಹೊಂದಿದ್ದಾರೆ. ಅವರು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೆ ಸಂವಿಧಾನದ ರಕ್ಷಕರೂ ಆಗಿದ್ದಾರೆ. ಆದರೆ ಈ ಎಲ್ಲಾ ಅಧಿಕಾರಗಳ ಮಿತಿಗಾಗಿ ಅವರು ಯಾವುದೇ ಅಧಿಕಾರ ಚಲಾಯಿಸಲು ಪ್ರಧಾನ ಮಂತ್ರಿಯವರ ಅಥವಾ ಕೇಂದ್ರ ಮಂತ್ರಿಮಂಡಳದ ಸಲಹೆಯ ಮೇಲೆ ಮಾತ್ರಾ ಆಜ್ಞೆ ಮಾಡಬಹುದು.

ಸಂಕ್ಷಿಪ್ತ ಇತಿಹಾಸ : 
ಆ15 ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್ಬ್ಯಾಟನ್). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು. ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿಸತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.

ರಾಷ್ಟ್ರಪತಿಯಾಗಲು ಬೇಕಾದ ಅರ್ಹತೆಗಳು :

1) ಭಾರತದ ಪ್ರಜೆಯಾಗಿರಬೇಕು.
2) 35 ವರ್ಷ ವಯಸ್ಸಾಗಿರಬೇಕು.
3) ಲೋಕಸಭೆಗೆ ಆಆಯ್ಕೆಯಾಗುವ ಅರ್ಹತೆಯನ್ನು ಹೊಂದಿರಬೇಕು.
4) ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ತರಹದ ಲಾಭದಾಯಕ ಹುದ್ದೆಯನ್ನು ಅಲಂಕರಿಸಿರಬಾರದು.

ರಾಷ್ಟ್ರಪತಿ ಆಯ್ಕೆ :   ಪರೋಕ್ಷ ಮತದಾನ ಪದ್ದತಿಯಿಂದ ಚುನಾಯಿಸಲ್ಪಡುತ್ತಾರೆ. ಚುನಾಯಿತ ಸಂಸತ್ ಸದಸ್ಯರು, ಚುನಾಯಿತ ವಿಧಾನಸಭೆ ಸದಸ್ಯರು, ದೆಹಲಿ & ಪಾಂಡಿಚೇರಿಯ ಚುನಾಯಿತ ವಿಧಾನಸಭೆಯ ಸದಸ್ಯರುಗಳಿಂದ ಎಲೆಕ್ಟ್ರಕಲ್ ಕಾಲೇಜ್‍ನಿಂದ ಆಯ್ಕೆಯಾಗುತ್ತಾರೆ. ರಾಷ್ಟ್ರಪತಿಯಾಗಿ ಆಯ್ಕೆ ಬಯಸುವ  ಅಭ್ಯರ್ಥಿಯು ರಿಸರ್ವ್ ಬ್ಯಾಂಕಿನಲ್ಲಿ 15,000/- ರೂ. ಭದ್ತಾ ಠೇವಣಿಯನ್ನು ಇಡಬೇಕು, 50 ಜನ ಅನುಮೋದಕರು, 50 ಜನ ಸೂಚಕರು, ಮರು ಚುನಾವಣೆಗೆ ಅರ್ಹರು.
# ಅಧಿಕಾರವಧಿ 5 ವರ್ಷ, ಅಷ್ಟರಲ್ಲೇ ಮರಣ ಹೊಂದಿದರೆ, ರಾಜಿನಾಮೆಯನ್ನು ಕೊಟ್ಟರೆ, ಮಹಾಭಿಯೋಗವಾದರೆ, ಉಪರಾಷ್ಟರಪತಿಯು 6 ತಿಂಗಳುಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಅಧಿಕಾರದಲ್ಲಿರುತ್ತಾರೆ. (ಕರ್ನಾಟಕದ ಬಿ.ಡಿ.ಜತ್ತಿಯವರು)
#ರಾಷ್ಟ್ರಪತಿಯ ವೇತನ ವೇತನವನ್ನು ಭಾರತದ ಸಂಚಿತ ನಿಧಿಯಿಂದ ಭರಿಸಲಾಗುವುದು. ಪ್ರಸ್ತುತ ರಾಷ್ಟ್ರಪತಿ ಅವರ ಸಂಬಳ 5 ಲಕ್ಷ, ಉಪರಾಷ್ಟ್ರಪತಿ ಅವರ ಸಂಬಳ 4 ಲಕ್ಷ

ರಾಷ್ಟ್ರಪತಿಯ ಅಧಿಕಾರಗಳು  :  1) ಕಾರ್ಯಾಂಗೀಯ ಅಧಿಕಾರಗಳು   2) ಶಾಸನೀಯ ಅಧಿಕಾರಗಳು   3) ನ್ಯಾಯಿಕ ಅಧಿಕಾರಗಳು 4) ಸೈನಿಕ ಅಧಿಕಾರಗಳು  5) ತುರ್ತು ಪರಸ್ಥಿತಿಯ ಅಧಿಕಾರಗಳು

1) ಕಾರ್ಯಾಗೀಯ ಅಧಿಕಾರಗಳು
# ಸಂವಿಧಾನದ 53ನೇ ವಿಧಿ ಪ್ರಕಾರ ಕಾರ್ಯಾಂಗದ ಅಧಿಕಾರವೆಲ್ಲಾ ರಾಷ್ಟ್ರಪತಿಯಲ್ಲಿದ್ದು, ಅದು ಅವರ ಮೂಲಕ ಚಲಾವಣೆಯಾಗಬೇಕು.
# ಕೇಂದ್ರ ಸರ್ಕಾರದ ಎಲ್ಲ ವ್ಯವಹಾರಗಳು ರಾಷ್ಟ್ರಾಧ್ಯಕ್ಷರ ಹೆಸರಿನಲ್ಲಿ ನಡೆಯಬೇಕು.
# ಪ್ರಧಾನಮಂತ್ರಿಯನ್ನು ನೇಮಿಸುವುದು. ಪ್ರಧಾನ ಮಂತ್ರಿಯ ಸಲಹೆ ಮೇರೆಗೆ ಇತರೇ ಸಚಿವರನ್ನು ನೇಮಕ ಮಾಡುವುದು.
# ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡುವುದು.
# ಭಾರತದ ಅಟಾರ್ನಿ ಜನರಲ್‍ರನ್ನು ನೇಮಕ ಮಾಡುವುದು ಮತ್ತು ಅವರ ಅವಧಿ ಮತ್ತು ವೇತನವನ್ನು ನಿರ್ಧರಿಸುವುದು.
# ಭಾರತದ ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ಮುಖ್ಯ ಚುನಾವಣಾ ಅಧಿಕಾರಿ ಮತ್ತು ಇತರೇ ಚುನಾವಣಾ ಅಧಿಕಾರಿ, ಮಹಾಲೆಕ್ಕಪತ್ರ ಪರಿಶಧೋಧಕ, ಅಧ್ಯಕ್ಷರು ಮತ್ತು ಸದಸ್ಯರು, ಹಣಕಾಸು ಆಯೋಗ, ಅಂತರ್ ರಾಜ್ಯಗ ಸಮಿತಿ, ರಾಷ್ಟ್ರೀಯ ಪರಿಶಿಷ್ಟ ಜಾತಿ / ಪಂಗಡ ಮತ್ತು ಮಹಿಳಾ ಆಯೋಗಗಳ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ನೇಮಿಸುವುದು ಮತ್ತು ವಜಾ ಮಾಡುವ ಅಧಿಕಾರ ರಾಷ್ಟಪತಿಯವರಿಗಿದೆ.
# ರಾಜ್ಯ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ವಜಾ ಮಾಡುವ ಅಧಿಕಾರ.
2) ಶಾಸನೀಯ ಅಧಿಕಾರ
3) ನ್ಯಾಯಿಕ ಅಧಿಕಾರಗಳು
# ಸುಪ್ರಿಂ ಕೋರ್ಟಿನ ಮತ್ತು ಹೈ ಕೋರ್ಟಿನ ಮುಖ್ಯ ನಾಯಾಧೀಶರನ್ನು ಮತ್ತು ಇತರೇ ನ್ಯಾಯಾಧಿಶರನ್ನು ನೇಮಕ ಮಾಡುವುದು.
# ನ್ಯಾಯಾಲಯಗಳಿಂದ ಶಿಕ್ಷಿಸಲ್ಪಟ್ಟವರಿಗೆ ಮರಣ ದಂಡನೆಗೆ ಗುರಿಯಾಗಿದ್ದರೆ, ಶಿಕ್ಷೆಗಳೆಲ್ಲವನ್ನೂ ಕ್ಷಮಿಸುವ, ತಡೆಹಿಡಿಯುವ, ಮುಂದೂಡುವ ಅಥವಾ ಕಡಿಮೆ ಮಾಡುವ ಅಧಿಕಾರಗಳನ್ನು ಹೊಂದಿದ್ದಾರೆ.
4) ಸೈನಿಕ ಅಧಿಕಾರ
# ಭಾರತದ ರಕ್ಷಣಾ ಪಡೆಯ ಮಹಾ ದಂಡನಾಯಕರು.
# ಭಾರತೀಯ ಸೇನಾ ಪಡೆಯ ಮುಖ್ಯ ಸೇನಾಪತಿ. ವಾಯಪಡೆಯ ಏರ್ ಮಾರ್ಷಲ್ ಮತ್ತು ನೌಕಾಪಡೆಯ ಅಡ್ಮಿರಲ್‍ರವರನ್ನು ರಾಷ್ಟ್ರಪತಿ ನೇಮಕ ಮಾಡುವರು.
# ಸೈನಿಕ ಅಧಿಕಾರವು ಪಾರ್ಲಿಮೆಂಟ್‍ನಿಂದ ನಿಯಂತ್ರಿಸಲ್ಪಡುತ್ತದೆ. ಕಾನೂನು ಮಾಡುವ ಅಧಿಕಾರ ಕೂಡ ಇದೆ.
5) ತುರ್ತು ಪರಸ್ಥಿತಿಯ ಅಧಿಕಾರಗಳ :
6) ರಾಷ್ಟ್ರಪತಿಯ ವಿವೇಚನೆಯ ಅಧಿಕಾರಗಳು
7) ಡಿಪ್ಲೋಂಮ್ಯಾಟಿಕ್ ಅಧಿಕಾರಗಳು
# ಅಂತರಾಷ್ಟ್ರೀಯ ಒಪ್ಪಂದಗಳು ಮತ್ತು ವ್ಯವಹಾರಗಳು ರಾಷ್ಟ್ರಪತಿಯ ಹೆಸರಿನಲ್ಲೇ ನಡೆಯಬೇಕು.
# ರಾಯಭಾರಿಗಳನ್ನು ಮತ್ತು ಹೈಕಮಿಷನರ್‍ಗಳನ್ನು ಹೊರ ದೇಶಕ್ಕೆ ಕಳುಹಿಸುವುದು ಮತ್ತು ಕರೆಸಿಕೊಳ್ಳುವುದು.

ಈವರೆಗಿನ ರಾಷ್ಟ್ರಪತಿಗಳ ಪಟ್ಟಿ ಮತ್ತಿ ಆಡಳಿತಾವಧಿ

ಡಾ. ರಾಜೇಂದ್ರ ಪ್ರಸಾದ್    : ಜನವರಿ 26, 1950 ಮೇ 13, 1962ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ : ಮೇ 13, 1962 ಮೇ 13, 1967ಡಾ. ಜಾಕಿರ್ ಹುಸೇನ್ : ಮೇ 13, 1967 ಮೇ 3, 1969ವರಾಹಗಿರಿ ವೆಂಕಟ ಗಿರಿ : ಮೇ 3, 1969 ಜುಲೈ 20, 1969ಮಹಮ್ಮದ್ ಹಿದಾಯತುಲ್ಲಾ  : ಜುಲೈ 20, 1969 ಆಗಸ್ಟ್ 24, 1969ವರಾಹಗಿರಿ ವೆಂಕಟ ಗಿರಿ :  ಆಗಸ್ಟ್ 24, 1969 ಆಗಸ್ಟ್ 24, 1974ಫಕ್ರುದ್ದೀನ್ ಅಲಿ ಅಹ್ಮದ್ : ಆಗಸ್ಟ್ 24, 1974 ಫೆಬ್ರವರಿ 11, 1977ಬಿ ಡಿ ಜತ್ತಿ : ಫೆಬ್ರವರಿ 11, 1977 ಜುಲೈ 25, 1977 (ಹಂಗಾಮಿ)ನೀಲಂ ಸಂಜೀವ ರೆಡ್ಡಿ ಜುಲೈ 25, 1977 ಜುಲೈ 25, 1982ಗ್ಯಾನಿ ಜೈಲ್ ಸಿಂಗ್ : ಜುಲೈ 25, 1982 ಜುಲೈ 25, 1987ರಾಮಸ್ವಾಮಿ ವೆಂಕಟರಾಮನ್  :  ಜುಲೈ 25, 1987 ಜುಲೈ 25, 1992ಡಾ. ಶಂಕರ ದಯಾಳ ಶರ್ಮ : ಜುಲೈ 25, 1992 ಜುಲೈ 25, 1997ಡಾ. ಕೆ ಆರ್ ನಾರಾಯಣನ್ : ಜುಲೈ 25, 1997 ಜುಲೈ 25, 2002ಡಾ. ಎ ಪಿ ಜೆ ಅಬ್ದುಲ್ ಕಲಮ್ : ಜುಲೈ 25, 2002 ಜುಲೈ 25, 2007ಪ್ರತಿಭಾ ಪಾಟೀಲ್ : ಜುಲೈ 25, 2007 ಜುಲೈ 25, 2012ಪ್ರಣಬ್ ಮುಖರ್ಜಿ : ಜುಲೈ 25, 2012 25 ಜುಲೈ 2017ರಾಮ್‍ನಾಥ್ ಕೋವಿಂದ್ : ಜುಲೈ 25, 2017 ಪ್ರಸಕ್ತ

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey



Post a Comment

0 Comments