ಕೇಂದ್ರ ಬಜೆಟ್ ಸ್ಪರ್ಧಾತ್ಮಕ ಪರೀಕ್ಷೆ ಗಾಗಿ


ಕೇಂದ್ರ ಬಜೆಟ್ (ಸ್ಪರ್ಧಾತ್ಮಕ ಪರೀಕ್ಷೆ ಗಾಗಿ)

ಮೊದಲು ಸಂಸತ್‍ನಲ್ಲಿ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡುತ್ತಾರೆ । ಬಜೆಟ್ ಬೆಳಿಗ್ಗೆ 11 ಗಂಟೆಗೆ ಮಂಡನೆಯಾಗುತ್ತದೆ । ಹಣಕಾಸು ಸಚಿವರು 2 ಭಾಗಗಳಲ್ಲಿ ಭಜೆಟ್ ಭಾಷಣ ಮಾಡುತ್ತಾರೆ । ಮೊದಲ ಭಾಗ ಸಾಮಾನ್ಯ ಆರ್ಥಿಕ ಸಮಿಕ್ಷೆಯನ್ನು ಹಾಗೂ ಆರ್ಥಿಕ ನೀತಿಯನ್ನು ಒಳಗೊಂಡಿರುತ್ತದೆ । ಎರಡನೇ ಭಾಗ ತೆರಿಗೆ ಪ್ರಸ್ತಾಪಗಳನ್ನು ಒಳಗೊಂಡಿರುತ್ತದೆ. । ಬಜೆಟ್ ಮಂಡನೆಯ ತಕ್ಷಣ ಚರ್ಚೆ ಇರುವುದಿಲ್ಲ । ಕೆಲ ದಿನಗಳ ನಂತರ ಲೋಕಸಭೆಯಲ್ಲಿ ಬಜೆಟ್ ಮೇಲಿನ ಸಮಗ್ರ ಚರ್ಚೆ ನಡೆಯುತ್ತದೆ.। ಚರ್ಚೆಯ ಕೊನೆಗೆ ಹಣಕಾಸು ಸಚಿವರು ಉತ್ತರಿಸುತ್ತಾರೆ ಹಾಗೂ ಚರ್ಚೆಯನ್ನು ಮುಕ್ತಾಯಗೊಳಿಸುತ್ತಾರೆ. । ಸಂಸದೀಯ ಸ್ಥಾಯಿ ಸಮಿತಿಗಳ ವರದಿಯನ್ನು ಸದನದಲ್ಲಿ ಮಂಡಿಸುತ್ತಾರೆ. ಅದನ್ನು ಚರ್ಚಿಸುತ್ತಾರೆ ಅನುದಾನಗಳ ಬೇಡಿಕೆ ಪ್ರಸ್ತಾಪಗಳನ್ನು ಮತಕ್ಕೆ ಹಾಕಲಾಗುತ್ತದೆ. । ಲೋಕಸಭೆ ಸ್ಪೀಕರ್ ಅವರ ಪ್ರಮುಖ ಬೇಡಿಕೆಗಳನ್ನು ಸದಸದಲ್ಲಿ ಮತಕ್ಕೆ ಹಾಕುತ್ತಾರೆ. ಯಾವುದೇ ಬೇಡಿಕೆಯನ್ನು ಅನುಮೊದಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಲೋಕಸಭೆ ಹೊಂದಿರುತ್ತದೆ । ಅನುದಾನದ ಮೊತ್ತವನ್ನು ಕಡಿಮೆ ಮಾಡುವ ಅಧಿಕಾರವನ್ನು ಹೊಂದಿದೆ ।
। ರಾಜ್ಯಸಭೆಯಲ್ಲಿ ಕೇವಲ ಸಾಮಾನ್ಯ ಚರ್ಚೆ ಅಷ್ಟೆ ನಡೆಯುತ್ತದೆ. । ಸರ್ಕಾರ ವಿಧೇಯಕಗಳನ್ನು ಮಂಡಿಸುತ್ತದೆ.।ಇತರ ಬಜೆಟ್ ದಾಖಲೆಗಳು 13 ಕೋಟಿಗೂ ಹೆಚ್ಚು.ಇವುಗಳನ್ನು ಸಿದ್ದಪಡಿಸುವ ಜವಾಬ್ದಾರಿ ಬಜೆಟ್ ವಿಭಾಗದ್ದು । ಪ್ರೆಸ್ ಇನ್ ಪರಮೀಶನ್ ಬ್ಯೂರೋದ ಅಧಿಕಾರಿಗಳು ಇಂಗ್ಲೀಷ್,ಹಿಂದಿ ಮತ್ತು ಉರ್ದುವಿನಲ್ಲಿ ಬಜೆಟ್ ಕುರಿತು ಪ್ರೆಸ್ ನೋಟ್‍ಗಳನ್ನು ಸಿದ್ದಪಡಿಸುತ್ತಾರೆ । ಇಂಟಲಿಜೆನ್ಸ್ ಬ್ಯೂರೋದವರ ಬಜೆಟ್ ಕುರಿತ ಅಧಿಕಾರಿಗಳ ಚಲನವಲನ,ದೂರವಾಣಿ ಕರೆಗಳನ್ನು ಗಮನಿಸುತ್ತಾರೆ.

ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಕೆಲವು ಮಹತ್ವದ ಅಂಶಗಳು:

#. ಬಜೆಟ್ ಎಂಬ ಶಬ್ದವು ಮಧ್ಯ ಫ್ರಾನ್ಸ್ನ bougette ಎಂಬ ಶಬ್ದದಿಂದ ಬಂದಿದೆ. ಇದರ ಅರ್ಥ ‘ಚರ್ಮದ ಬ್ಯಾಗ್’.

#. ರಾಷ್ಟ್ರಪತಿ ನಿಗದಿಪಡಿಸಿದ ದಿನದಂದೇ ಭಾರತದಲ್ಲಿ ಬಜೆಟ್ ಮಂಡಿಸಲಾಗುತ್ತದೆ.

#. ವಿತ್ತ ಸಚಿವರ ಬಜೆಟ್ ಭಾಷಣವು 2 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ.
– ಒಂದನೇ ಭಾಗವು ದೇಶದ ಸಾಮಾನ್ಯ ಆರ್ಥಿಕ ಸಮೀಕ್ಷೆಯನ್ನೂ,
– ಎರಡನೇ ಭಾಗವು ತೆರಿಗೆ ಪ್ರಸ್ತಾಪವನ್ನು ಹೊಂದಿರುತ್ತದೆ.

#. ಬಜೆಟ್ ಪೇಪರ್ಗಳನ್ನು ಮುದ್ರಿಸುವ ನೌಕರರನ್ನು ಬಜೆಟ್ ಮಂಡನೆಗೆ ಒಂದು ವಾರ ಮುಂಚೆಯೇ ಸಂಪೂರ್ಣವಾಗಿ ಯಾರ ಜತೆಗೂ ಸಂಪರ್ಕವಿಲ್ಲದಂತೆ ಪ್ರತ್ಯೇಕವಾಗಿಡಲಾಗುತ್ತದೆ.

#. ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೇ ಕೆಲಸದ ದಿನದಂದು ಬಜೆಟ್ ಮಂಡನೆ ಆಗುತ್ತದೆ.

#. ಕೇಂದ್ರ ಬಜೆಟ್ನ ಘೋಷಣೆಯಲ್ಲಿ ಹಣಕಾಸು ಸಚಿವಾಲಯ, ಯೋಜನಾ ಆಯೋಗ, ಆಡಳಿತಾತ್ಮಕ ಸಚಿವಾಲಯಗಳು ಹಾಗೂ ಮಹಾಲೇಖಪಾಲರು ಪ್ರಮುಖ ಪಾತ್ರ ವಹಿಸುತ್ತಾರೆ

#. ಪ್ರಪ್ರಥಮ ಬಾರಿಗೆ ದೇಶದಲ್ಲಿ ಬಜೆಟ್ ಮಂಡನೆಯಾಗಿದ್ದು 1860ರ ಏಪ್ರಿಲ್ 7ರಂದು.ಈಸ್ಟ್ ಇಂಡಿಯಾ ಕಂಪನಿಯಿಂದ.

#. ಭಾರತದ ಮೊದಲ ಬಜೆಟ್ ಅನ್ನು ಮಂಡಿಸಿದವರು ಜೇಮ್ಸ್ ವಿಲ್ಸನ್.

#. ಸ್ವಾತಂತ್ರ್ಯಾನಂತರ, ಭಾರತದ ಪ್ರಥಮ ಹಣಕಾಸು ಸಚಿವ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು 1947ರ ನವೆಂಬರ್ 26ರಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಿದರು.

#. ಸಂಜೆ 5ಕ್ಕೆ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಆರಂಭಿಸಿದ್ದು ಸರ್ ಬೇಸಿಲ್ ಬ್ಲಾಕೆಟ್.

#. ಆಯವ್ಯಯ ರಚನೆ ವೇಳೆ ರಾತ್ರಿಯಿಡೀ ಕೆಲಸ ಮಾಡಿದ ಅಧಿಕಾರಿಗಳಿಗೆ ಸ್ವಲ್ಪ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕಾಗಿ ಸಂಜೆ ಬಜೆಟ್ ಮಂಡಿಸುವ ಪದ್ಧತಿ ಜಾರಿಗೆ ಬಂತು.

#. ಸ್ವತಂತ್ರ ಭಾರತದ ಮೊದಲ ಬಜೆಟ್ನ ಅವಧಿ ಕೇವಲ ಏಳೂವರೆ ತಿಂಗಳದ್ದಾಗಿತ್ತು. ಅಂದರೆ, ಆಗಸ್ಟ್ 15, 1947ರಿಂದ ಮಾರ್ಚ್ 31, 1948.

#. ‘ಮಧ್ಯಂತರ ಬಜೆಟ್’ ಎಂಬುದನ್ನು ಮೊದಲು ಆರಂಭಿಸಿದವರು ಆರ್.ಕೆ. ಷಣ್ಮುಗಂ ಚೆಟ್ಟಿ (1948-49).

#. ಗಣರಾಜ್ಯ ಭಾರತದ ಮೊದಲ ಬಜೆಟ್ ಮಂಡಿಸಿದ್ದು ಜಾನ್ ಮಥಾಯ್. (1950ರ ಫೆ.28)

#. 1950-51ರ ಬಜೆಟ್ ಮಂಡಿಸುವಾಗಲೇ ಯೋಜನಾ ಆಯೋಗ ಜಾರಿಗೆ ಬಂತು

#. 1955-56ರಿಂದ ಬಜೆಟ್ ಪೇಪರ್ಗಳನ್ನು ಹಿಂದಿಯಲ್ಲೂ ಮುದ್ರಿಸಲು ಆರಂಭಿಸಲಾಯಿತು

#. ಬಜೆಟ್ ಮಂಡಿಸಿದ ಮೊದಲ ಪ್ರಧಾನಿಯೆಂದರೆ ಜವಾಹರ್ಲಾಲ್ ನೆಹರೂ.1958-59ರಲ್ಲಿ ಅವರು ಕೇಂದ್ರವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

#. ಅತ್ಯಧಿಕ ಬಜೆಟ್ಗಳನ್ನು ಮಂಡಿಸಿದ ಏಕೈಕ ಸಚಿವರೆಂದರೆ ಮೊರಾರ್ಜಿ ದೇಸಾಯಿ. ಇವರು ಒಟ್ಟು 10 ಬಜೆಟ್ ಮಂಡಿಸಿದ್ದಾರೆ.

#. 1973-74ರ ಬಜೆಟ್ ಅನ್ನು ‘ಬ್ಲ್ಯಾಕ್ ಬಜೆಟ್’ ಎನ್ನಲಾಗುತ್ತದೆ. ಏಕೆಂದರೆ,ಈ ಅವಧಿಯಲ್ಲಿ ಬಜೆಟ್ ಕೊರತೆ 550 ಕೋಟಿ ಆಗಿತ್ತು

#. ತನ್ನ ಹುಟ್ಟುಹಬ್ಬದ ದಿನದಂದೇ 2 ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಅವೆಂದರೆ, 1964 ಮತ್ತು 1968 ಫೆ. 29.

#. 2000ನೇ ಇಸವಿವರೆಗೆ ಬಜೆಟ್ ಅನ್ನು ಸಂಜೆ 5ಕ್ಕೆ ಮಂಡಿಸಲಾಗುತ್ತಿತ್ತು.

#. 2001ರ ಬಳಿಕ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಯಶವಂತ್ ಸಿನ್ಹಾ ನಾಂದಿ ಹಾಡಿದರು.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments