ಸಂವಿಧಾನದ ಪ್ರಮುಖ ಅನುಚ್ಛೇದಗಳು

ಸಂವಿಧಾನದ ಮುಖ್ಯ ಅನುಚ್ಛೇದಗಳ ಬಗ್ಗೆ ತಿಳಿದುಕೊಳ್ಳಿ

ಅನುಚ್ಛೇದ-14: ಸಮಾನತೆಗೆ ಒತ್ತು ನೀಡುತ್ತದೆ.
ಅನುಚ್ಛೇದ-15: ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ತಾರತಮ್ಯವನ್ನು ನಿಷೇದಿಸುತ್ತದೆ.
ಅನುಚ್ಛೇದ-16: ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಮಾನತೆಯನ್ನು ಕಾಪಾಡಿಕೊಂಡು ಹೋಗಲು ಸೂಚಿಸುತ್ತದೆ.
ಅನುಚ್ಛೇದ-17: ಅಸ್ಪೃಶ್ಯತೆಯ ಆಚರಣೆಯನ್ನು ಸಂಪೂರ್ಣವಾಗಿ ನಿಷೇದಿಸಿದೆ.
ಅನುಚ್ಛೇದ-19: ಎಲ್ಲಾ ನಾಗರಿಕರಿಗೆ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಒದಗಿಸಿದೆ.
ಅನುಚ್ಛೇದ-23: ಬಲಾತ್ಕಾರದಿಂದ ಕೆಲಸಮಾಡಿಸಿಕೊಳ್ಳುವುದನ್ನು ನಿಷೇದಿಸಿದೆ; ಜೀತ ನಿರ್ಮೂಲನೆಗೆ ಇದು ಮೂಲಾಧಾರವಾಗಿದೆ.
ಅನುಚ್ಛೇದ-24: 14 ವರ್ಷಗಳಿಗಿಂತ ಚಿಕ್ಕವರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದನ್ನು ನಿಷೇದಿಸಿದೆ.
ಅನುಚ್ಛೇದ-29,30: ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೆಲವೊಂದು ರಕ್ಷಣೆಗಳನ್ನು ಹಾಗೂ ವಿಶೇಷ ಅವಕಾಶಗಳನ್ನು ಒದಗಿಸಿದೆ.
ಅನುಚ್ಛೇದ-38: ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಇರುವಂಥ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಆಶಯವನ್ನು ಹೊಂದಿದೆ.

ಅನುಚ್ಛೇದ-39: ಪ್ರಾಕೃತಿಕ ಸಂಪತ್ತು ಸ್ಥಳೀಯ ಸಮುದಾಯಗಳಲ್ಲಿ ಹಂಚಿಕೆಯಾಗುವುದನ್ನು ಹೇಳುತ್ತದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರಕಬೇಕೆಂಬ ತತ್ವವೂ ಇದರಲ್ಲಿದೆ. ಈ ಅನುಚ್ಛೇದಕ್ಕೆ 1976 ರಲ್ಲಿ ತರಲಾದ ತಿದ್ದುಪಡಿ ಮೂಲಕ ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವನ್ನು ಒದಗಿಸುವ ತತ್ವವನ್ನು ಇದರಲ್ಲಿ ಅಳವಡಿಸಲಾಗಿದೆ.

ಅನುಚ್ಛೇದ-40: ಪಂಚಾಯತ್ ರಾಜ್ ವ್ಯವಸ್ಥೆಗೆ ಪುಷ್ಟಿಯನ್ನು ನೀಡಲಾಗಿದೆ.
ಅನುಚ್ಛೇದ-41: ನಿರುದ್ಯೋಗಿಗಳಿಗೆ, ವೃದ್ಧರಿಗೆ, ಅಂಗವಿಕಲರಿಗೆ ಮತ್ತು ರೋಗಿಗಳಿಗೆ ವಿಶೇಷ ಸಹಾಯ ನೀಡುವ ಅವಕಾಶಗಳನ್ನು ಖಾತ್ರಿಪಡಿಸಲಾಗಿದೆ.
ಅನುಚ್ಛೇದ-42: ಮಹಿಳೆಯರಿಗೆ ಪ್ರಸೂತಿ ಪರಿಹಾರ ನೀಡಲು ತಿಳಿಸುತ್ತದೆ.
ಅನುಚ್ಛೇದ-43: ಗೃಹ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ನಡೆಸಲು ಅವಕಾಶ ನೀಡುತ್ತದೆ.
ಅನುಚ್ಛೇದ-45: ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸಲು ತಿಳಿಸುತ್ತದೆ.

ಅನುಚ್ಛೇದ-46: ದುರ್ಬಲ ವರ್ಗಗಳ, ವಿಶೇಷವಾಗಿ ಪ.ಜಾತಿಗಳಿಗೆ ಮತ್ತು ಪ.ಪಂಗಡಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಿತಾಸಕ್ತಿ ರಕ್ಷಣೆಗೆ ಅವಕಾಶ ಕೊಡುತ್ತದೆ. ಅನುಚ್ಛೇದ-47: ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸೂಚಿಸುತ್ತದೆ.

ಅನುಚ್ಛೇದ-326: ಸಾರ್ವತ್ರಿಕ ಮತ್ತು ವಯಸ್ಕ ಮತಧಾನದ ಹಕ್ಕನ್ನು ನೀಡಲಾಗಿದೆ.
ಅನುಚ್ಛೇದ-330,332: ಲೋಕಸಭೆಯಲ್ಲಿ ಮತ್ತು ವಿಧಾನಸಭೆಯಲ್ಲಿ ಪ.ಜಾತಿಗಳಿಗೆ ಮತ್ತು ಪ.ಪಂಗಡಗಳಿಗೆ ಸ್ಥಾನಗಳನ್ನು ಮೀಸಲಿಡಲಾಗಿದೆ.
ಅನುಚ್ಛೇದ-335: ಸರ್ಕಾರಿ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ಪ.ಜಾತಿ ಮತ್ತು ಪ.ಪಂಗಡಗಳವರು ಕ್ಲೇಮು ಹೊಂದುವುದನ್ನು ಖಾತ್ರಿಪಡಿಸಲಾಗಿದೆ.

ಅನುಚ್ಛೇದ-338: ಪ.ಜಾತಿ ಮತ್ತು ಪ.ಪಂಗಡಗಳಿಗೆ ಸಂಬಂಧಿಸಿದಂತೆ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಹಾಗೂ ಈ ಬಗ್ಗೆ ಕಾಲಕಾಲಕ್ಕೆ ವರದಿಯನ್ನು ಸರ್ಕಾರಕ್ಕೆ ನೀಡಲು ಅನುಕೂಲವಗುವಂತೆ ವಿಶೇಷ ಅಧಿಕಾರಿಯನ್ನು ಮತ್ತು ಆಯೋಗವನ್ನು ರಚನೆ ಮಾಡಬಹುದಾಗಿದೆ.
ಅನುಚ್ಛೇದ-340: ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ತನಿಖೆ ಮಾಡಲು ಆಯೋಗಗಳನ್ನು ನೇಮಕ ಮಾಡಬಹುದಾಗಿದೆ.
ಅನುಚ್ಛೇದ-341,342­: ಪ.ಜಾತಿ ಮತ್ತು ಪ.ಪಂಗಡಗಳನ್ನು ಗುರುತಿಸಲು ಅವಕಾಶ ಕಲ್ಪಿಸುತ್ತದೆ.

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments