ಸಾಂವಿಧಾನಿಕ ಪರಿಹಾರಾತ್ಮಕ ಹಕ್ಕುಗಳು

ಸಾಂವಿಧಾನಿಕ ಪರಿಹಾರಾತ್ಮಕ ಹಕ್ಕುಗಳು

# ಮೂಲಭೂತ ಹಕ್ಕುಗಳು ಅರ್ಥಪೂರ್ಣವಾಗಬೇಕಾದರೆ ಅವುಗಳ ಉಲ್ಲಂಘನೆಯಾದಾಗ ಹಕ್ಕುಗಳನ್ನು ಮರು ಸ್ಥಾಪಿಸಲು ಮತ್ತು ಜಾರಿಗೊಳಿಸಲು ಪ್ರಬಲವಾದ ಪರಿಹಾರಾತ್ಮಕ ವ್ಯವಸ್ಥೆ ಇರಲೇಬೇಕು.

# ಭಾರತದ ಸಂವಿಧಾನವು ಕೇವಲ ಮೂಲಭೂತ ಹಕ್ಕುಗಳನ್ನು ಮಾತ್ರ ಖಾತರಿಗೊಳಿಸುವುದಿಲ್ಲ. ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದಲ್ಲಿ ಅಂತಹ ಹಕ್ಕುಗಳ ಮರುಸ್ಥಾಪನೆಗೆ (RESTORATION) ಮತ್ತು ಬಾಧಿತರಿಗೆ ಪರಿಹಾರ ನೀಡಲು ಪ್ರಬಲವಾದ ಮಾರ್ಗೋಪಾಯವನ್ನು ಸಹ ಒಳಗೊಂಡಿದೆ.

# ರಾಜ್ಯದ ( STATE) /ಸರ್ಕಾರದ/ಆಡಳಿತ ವ್ಯವಸ್ಥೆಯಿಂದ ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಹಾನಿಯಾದಲ್ಲಿ ಬಾಧಿತರು ನೇರವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಸಂವಿಧಾನದ 32ನೇ ವಿಧಿ ಅವಕಾಶ ಕಲ್ಪಿಸಿದೆ.

# ಗಂಭೀರವೂ ಮತ್ತು ಕಳವಳಕಾರಿಯಾದಂತಹ ಸಂದರ್ಭಗಳಲ್ಲಿ ಅಗತ್ಯವೆನಿಸುವ ತುರ್ತು ಆದೇಶಗಳನ್ನು (WRITS) ಜಾರಿಗೊಳಿಸಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಲು ಸುಪ್ರೀಂ ಕೋರ್ಟ್‌ಗೆ ಸಾಧ್ಯವಿದೆ.

# ಈ ಬಗೆಯಲ್ಲಿ ನೇರವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಬಹುದಾದ ಹಕ್ಕು ಸಹಾ ಒಂದು ಮೂಲಭೂತ ಹಕ್ಕು ಎಂದು ಸಂವಿಧಾನವು ಖಚಿತಪಡಿಸಿದೆ.

# ತುರ್ತು ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಬಹುದು. ಆದರೆ, ಎಲ್ಲ ಮೂಲಭೂತ ಹಕ್ಕುಗಳು ತುರ್ತು ಪರಿಸ್ಥಿತಿಯ ಕಾಲದಲ್ಲಿ ಅಮಾನತ್ತಿನಲ್ಲಿ ಇರುವುದಿಲ್ಲ.

☑️ಸುಪ್ರೀಂ ಕೋರ್ಟ್‌

1.ಹೇಬಿಯಸ್ ಕಾರ್ಪಸ್ (HABEAS CORPUS),

2.ಮ್ಯಾಂಡಮಸ್ (MANDAMUS),

3.ಕೋ ವಾರಂಟೋ (QUO WARRANTO),

4.ಪ್ರಾಹಿಬಿಷನ್ (PROHIBITION),

5.ಸರ್ಶಿಯೊರಾರಿ (CERTIORARI)

ಎಂಬ ಐದು ವಿವಿಧ ಬಗೆಯ ರಿಟ್ ಜಾರಿಗೊಳಿಸಿ ಮೂಲಭೂತ ಹಕ್ಕುಗಳನ್ನು ಮರು ಸ್ಥಾಪನೆಗೊಳಿಸಬಹುದು.

# ಈ ಬಗೆಯನ್ನು ಸಾಂವಿಧಾನಿಕ ಪರಿಹಾರಾತ್ಮಕ ಹಕ್ಕುಗಳು (RIGHT TO CONSTITUTIONAL REMEDIES) ಎನ್ನುತ್ತೇವೆ.

# ಇದೇ ರೀತಿಯ ರಿಟ್‌ಗಳನ್ನು ಹೈಕೋರ್ಟ್‌ ಸಹ ಸಂವಿಧಾನದ  226ನೇ ವಿಧಿ ಅನ್ವಯ ಜಾರಿಗೊಳಿಸಲು ಅವಕಾಶವಿದೆ. ಆದರೆ, 226ನೇ ವಿಧಿ ಕೇವಲ ಸಾಂವಿಧಾನಿಕ ಹಕ್ಕು ಮಾತ್ರವೇ ಆಗಿರುತ್ತದೆ. ಇದು ಮೂಲಭೂತ ಹಕ್ಕು ಆಗಿರುವುದಿಲ್ಲ.

Post a Comment

0 Comments