ಭಾರತದ ಪ್ರಧಾನ ಮಂತ್ರಿಗಳು

ಭಾರತದ ಪ್ರಧಾನ ಮಂತ್ರಿಗಳು ಲೋಕಸಭೆಯಲ್ಲಿ ಬಹುಮತ ಹೊಂದಿರುವ ರಾಜಕೀಯ ಪಕ್ಷದಿಂದ ಅಥವಾ ಪಕ್ಷಗಳ ಮೈತ್ರಿತ್ವದಿಂದ ಆರಿಸಲ್ಪಟ್ಟ ನಾಯಕರು ಪ್ರಧಾನ ಮಂತ್ರಿಗಳಾಗುವರು. ಅವರು ಭಾರತ ಸರ್ಕಾರದ ಕಾರ್ಯಾಂಗದ ಮುಖ್ಯಸ್ಥರು ಮತ್ತು ಶಾಸಕಾಂಗದ ಸದಸ್ಯರಾಗಿರುತ್ತಾರೆ.

ಭಾರತದ ಪ್ರಸಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ.(ಮೇ ೨೬ ೨೦೧೪-ಇಡೀ ದೇಶದ ಮತ ಎಣಿಕೆ ಮೇ ೧೬ ರಂದು ಒಂದೇ ದಿನ ನಡೆದು ಬಿಜೆಪಿ ೨೮೨ (೨೮೩?) ಸ್ಥಾನಗಳಿಸಿ ಪಕ್ಷ ಅಧಿಕಾರಕ್ಕೆ ಬಂದಿತು)

ಸಾಂವಿಧಾನಿಕವಾಗಿ, ಭಾರತದ ಅಧ್ಯಕ್ಷರ ಪದವಿ ಪ್ರಧಾನ ಮಂತ್ರಿಯ ಪದವಿಗಿಂತ ಮೇಲಿನದ್ದು. ಆದರೆ ಸರ್ಕಾರದ ಚಟುವಟಿಕೆಗಳಲ್ಲಿ ಎಲ್ಲರಿಗಿಂತ ಹೆಚ್ಚು ಪ್ರಭಾವ ಹೊಂದಿರುವ ಪದವಿ ಪ್ರಧಾನ ಮಂತ್ರಿಗಳದ್ದು.

ಈ ವರೆಗೆ ಒಟ್ಟು ೧೨ ವ್ಯಕ್ತಿಗಳು ಭಾರತ ಪ್ರಧಾನ ಮಂತ್ರಿ ಸ್ಥಾನಕ್ಕೆ ಚುನಾಯಿಸಲ್ಪಟ್ಟಿದ್ದಾರೆ. ಇವರಲ್ಲಿ ಜವಾಹರಲಾಲ್ ನೆಹರು ಒಟ್ಟು ನಾಲ್ಕು ಅವಧಿಗಳಲ್ಲಿ ಪ್ರಧಾನ ಮಂತ್ರಿ ಗಳಾಗಿದ್ದರು. ಇಂದಿರಾ ಗಾಂಧಿ ಮೂರು ಅವಧಿಗಳ ಕಾಲ ಈ ಸ್ಥಾನದಲ್ಲಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಎರಡು ಅವಧಿಗಳಲ್ಲಿ ಈ ಸ್ಥಾನ ವಹಿಸಿದ್ದಾರೆ. ಗುಲ್ಜಾರಿ ಲಾಲ್ ನಂದಾ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಕೆಲಸ ನಿರ್ವಹಿಸಿದ್ದರು. ಡಾ.ಮನಮೋಹನ್ ಸಿಂಗ್ ಮೇ ೨೨, ೨೦೦೪ ಮೇ ೨೬, ೨೦೧೧ ಕಾಂಗ್ರೆಸ್ ಪಕ್ಷ(ಐ)ವರೆಗೆ ೨ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದರು.

ಭಾರತದ ಪ್ರಧಾನಿಯ ಅಧಿಕೃತ ನಿವಾಸ ನಂ.೭, ರೇಸ್ ಕೋರ್ಸ್ ರಸ್ತೆ, ನವದೆಹಲಿ.

ಪಟ್ಟಿ
01ಜವಾಹರಲಾಲ್ ನೆಹರುಆಗಸ್ಟ್ ೧೫, ೧೯೪೭ಮೇ ೨೭, ೧೯೬೪ಕಾಂಗ್ರೆಸ್ ಪಕ್ಷ
*ಗುಲ್ಜಾರಿ ಲಾಲ್ ನಂದಾಮೇ ೨೭, ೧೯೬೪ಜೂನ್ ೯, ೧೯೬೪ಕಾಂಗ್ರೆಸ್ ಪಕ್ಷ
02ಲಾಲ್ ಬಹಾದುರ್ ಶಾಸ್ತ್ರಿಜೂನ್ ೯, ೧೯೬೪ಜನವರಿ ೧೧, ೧೯೬೬ಕಾಂಗ್ರೆಸ್ ಪಕ್ಷ
*ಗುಲ್ಜಾರಿ ಲಾಲ್ ನಂದಾಜನವರಿ ೧೧, ೧೯೬೬ಜನವರಿ ೨೪, ೧೯೬೬ಕಾಂಗ್ರೆಸ್ ಪಕ್ಷ
03ಇಂದಿರಾ ಗಾಂಧಿಜನವರಿ ೨೪, ೧೯೬೬ಮಾರ್ಚ್ ೨೪, ೧೯೭೭ಕಾಂಗ್ರೆಸ್ ಪಕ್ಷ
04ಮೊರಾರ್ಜಿ ದೇಸಾಯಿಮಾರ್ಚ್ ೨೪, ೧೯೭೭ಜುಲೈ ೨೮, ೧೯೭೯ಜನತಾ ಪಕ್ಷ
05ಚೌಧುರಿ ಚರಣ್ ಸಿಂಗ್ಜುಲೈ ೨೮, ೧೯೭೯ಜನವರಿ ೧೪, ೧೯೮೦ಜನತಾ ಪಕ್ಷ
**ಇಂದಿರಾ ಗಾಂಧಿಜನವರಿ ೧೪, ೧೯೮೦ಅಕ್ಟೋಬರ್ ೩೧, ೧೯೮೪ಕಾಂಗ್ರೆಸ್ ಪಕ್ಷ
06ರಾಜೀವ್ ಗಾಂಧಿಅಕ್ಟೋಬರ್ ೩೧, ೧೯೮೪ಡಿಸೆಂಬರ್ ೨, ೧೯೮೯ಕಾಂಗ್ರೆಸ್ ಪಕ್ಷ (ಐ)
07ವಿಶ್ವನಾಥ್ ಪ್ರತಾಪ್ ಸಿಂಗ್ಡಿಸೆಂಬರ್ ೨, ೧೯೮೯ನವಂಬರ್ ೧೦, ೧೯೯೦ಜನತಾ ದಳ
08ಚಂದ್ರಶೇಖರ್ನವಂಬರ್ ೧೦, ೧೯೯೦ಜೂನ್ ೨೧, ೧೯೯೧ಜನತಾ ದಳ
09ಪಿ.ವಿ.ನರಸಿಂಹರಾವ್ಜೂನ್ ೨೧, ೧೯೯೧ಮೇ ೧೬, ೧೯೯೬ಕಾಂಗ್ರೆಸ್ ಪಕ್ಷ (ಐ)
10ಅಟಲ್ ಬಿಹಾರಿ ವಾಜಪೇಯಿಮೇ ೧೬, ೧೯೯೬ಜೂನ್ ೧, ೧೯೯೬ಭಾರತೀಯ ಜನತಾ ಪಕ್ಷ
11ಹೆಚ್ ಡಿ ದೇವೇಗೌಡಜೂನ್ ೧, ೧೯೯೬ಏಪ್ರಿಲ್ ೨೧, ೧೯೯೭ಜನತಾ ದಳ
12ಇಂದ್ರ ಕುಮಾರ್ ಗುಜ್ರಾಲ್ಏಪ್ರಿಲ್ ೨೧, ೧೯೯೭ಮಾರ್ಚ್ ೧೯, ೧೯೯೮ಜನತಾ ದಳ
**ಅಟಲ್ ಬಿಹಾರಿ ವಾಜಪೇಯಿಮಾರ್ಚ್ ೧೯, ೧೯೯೮ಮೇ ೨೨, ೨೦೦೪ಭಾರತೀಯ ಜನತಾ ಪಕ್ಷ
13ಡಾ. ಮನಮೋಹನ್ ಸಿಂಗ್ಮೇ ೨೨, ೨೦೦೪ಮೇ ೨೬, ೨೦೧೪ಕಾಂಗ್ರೆಸ್ ಪಕ್ಷ
14ನರೇಂದ್ರ ಮೋದಿಮೇ ೨೬, ೨೦೧೪

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments