ಭಾರತದ ಸಂಸತ್ತು ಭಾರತದ ಗಣರಾಜ್ಯದ ಒಕ್ಕೂಟ ಸರ್ಕಾರದ ಎರಡು ಶಾಸನಸಭೆಗಳುಳ್ಳ (ಉಭಯ ಸದನಿಕ) ಸರ್ವೋಚ್ಚ ವಿಧಾಯಕ ಘಟಕವಾಗಿದೆ. ಭಾರತದ ರಾಷ್ಟ್ರಪತಿಯವರ ಕಚೇರಿ, "ರಾಜ್ಯಸಭಾ" ಎಂದು ಕರೆಯಲ್ಪಡುವ ರಾಜ್ಯಗಳ ಪರಿಷತ್ತು ಆಗಿರುವ ಒಂದು ಮೇಲ್ಮನೆ, ಮತ್ತು "ಲೋಕಸಭಾ" ಎಂದು ಕರೆಯಲ್ಪಡುವ ಪ್ರಜಾಪ್ರತಿನಿಧಿಗಳ ಸಭೆಯಾಗಿರುವ ಒಂದು ಕೆಳಮನೆಯನ್ನು ಇದು ಒಳಗೊಂಡಿದೆ. ನವದೆಹಲಿಯಲ್ಲಿನ ಸಂಸದ್ ಭವನದಲ್ಲಿರುವ (ಇದನ್ನು ಸಾಮಾನ್ಯವಾಗಿ ಸಂಸದ್ ಮಾರ್ಗ ಎಂದು ಕರೆಯಲಾಗುತ್ತದೆ) ಪ್ರತ್ಯೇಕ ಶಾಸನಸಭೆಗಳಲ್ಲಿ ಎರಡೂ ಸದನಗಳು ಸಭೆ ಸೇರುತ್ತವೆ. ಎರಡು ಸದನಗಳ ಪೈಕಿ ಯಾವುದಾದರೂ ಒಂದಕ್ಕೆ ಸೇರಿದ ಸದಸ್ಯರನ್ನು ಸಂಸತ್ ಸದಸ್ಯ ಅಥವಾ MP ಎಂಬುದಾಗಿ ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. ಲೋಕಸಭೆಯ MPಗಳು ನೇರ ಚುನಾವಣೆಯಿಂದ ಚುನಾಯಿಸಲ್ಪಡುತ್ತಾರೆ ಮತ್ತು ರಾಜ್ಯಸಭೆಯ MPಗಳು ದಾಮಾಷಾ ಪ್ರಾತಿನಿಧ್ಯ ಪದ್ಧತಿಯ ಚುನಾವಣೆಗೆ ಅನುಸಾರವಾಗಿ ರಾಜ್ಯ ಶಾಸನಸಭೆಗಳ ಸದಸ್ಯರಿಂದ ಚುನಾಯಿಸಲ್ಪಡುತ್ತಾರೆ. 802 MPಗಳನ್ನು ಸಂಸತ್ತು ಒಳಗೊಂಡಿದ್ದು, ಇವರು ಪ್ರಪಂಚದಲ್ಲಿನ ಅತಿದೊಡ್ಡ ಪ್ರಜಾಸತ್ತೀಯ ಮತದಾರ ಸಮುದಾಯಕ್ಕೆ ಮತ್ತು ರಾಷ್ಟ್ರದ-ಉದ್ದಗಲಕ್ಕೂ ಇರುವ ಪ್ರಪಂಚದಲ್ಲಿನ ಅತಿದೊಡ್ಡ ಪ್ರಜಾಸತ್ತೀಯ ಮತದಾರ ಸಮುದಾಯಕ್ಕೆ (2009ರಲ್ಲಿದ್ದುದು 714 ದಶಲಕ್ಷ ಅರ್ಹ ಮತದಾರರು) ಸೇವೆ ಸಲ್ಲಿಸುತ್ತಾರೆ.
ಪ್ರಜಾಪ್ರತಿನಿಧಿಗಳ ಸಭೆಯ 552 ಸದಸ್ಯರ ಪೈಕಿ 530 ಸದಸ್ಯರು ರಾಜ್ಯಗಳಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಾರೆ, ಮತ್ತು ಸಂಸತ್ತಿನಿಂದ ಅವಕಾಶ ನೀಡಲ್ಪಟ್ಟ ರೀತಿಯಲ್ಲಿ ಕಾನೂನಿನ ಅನುಸಾರದ ಅಥವಾ ಉಪ-ನಿಬಂಧನೆಯ ಅನುಸಾರದ ವಿಧಾನದಲ್ಲಿ ಆರಿಸಲ್ಪಡುವ 30 ಸದಸ್ಯರು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯು ನಡೆಸಲ್ಪಡುವವರೆಗಿನ 5 ವರ್ಷ ಅವಧಿಯವರೆಗೆ ಈ ಸದಸ್ಯರು ಸೇವೆ ಸಲ್ಲಿಸುತ್ತಾರೆ. 2 ಸದಸ್ಯರು ರಾಷ್ಟ್ರಪತಿಯಿಂದ ಆರಿಸಲ್ಪಡುತ್ತಾರೆ. ಸದನದ ಸ್ಥಾನಗಳು ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಗಳ ನಡುವೆ ಹಂಚಲ್ಪಡುತ್ತವೆ; ಅಂದರೆ, ಆ ಸಂಖ್ಯೆ ಮತ್ತು ರಾಜ್ಯದ ಜನಸಂಖ್ಯೆಯ ನಡುವಿನ ಅನುಪಾತವು, ಇದುವರೆಗೆ ಕಾರ್ಯಸಾಧ್ಯವಾಗಿರುವಂತೆ, ಎಲ್ಲಾ ರಾಜ್ಯಗಳಿಗೂ ಒಂದೇ ಆಗಿರುತ್ತದೆ.
ರಾಜ್ಯಗಳ ಪರಿಷತ್ತಿನ 250 ಸದಸ್ಯರು ಕಾಲವ್ಯತ್ಯಯಗೊಳಿಸಲ್ಪಟ್ಟ ಆರು-ವರ್ಷದ ಒಂದು ಅವಧಿಗೆ ಸೇವೆ ಸಲ್ಲಿಸುತ್ತಾರೆ. ಈ ಸದಸ್ಯರ ಪೈಕಿ 12 ಮಂದಿಯನ್ನು ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ. ಅಷ್ಟೇ ಅಲ್ಲ, ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಮಾಜಸೇವೆಯಂಥ ವಿಷಯಗಳಿಗೆ ಸಂಬಂಧಿಸಿದಂತೆ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವವನ್ನು ಹೊಂದಿರುವ ವ್ಯಕ್ತಿಗಳು ಹೀಗೆ ನಾಮಕರಣಗೊಂಡ ವ್ಯಕ್ತಿಗಳಲ್ಲಿ ಸೇರಿರುತ್ತಾರೆ. ಉಳಿದ 238 ಸದಸ್ಯರು ರಾಜ್ಯಗಳ ಪ್ರತಿನಿಧಿಗಳಾಗಿದ್ದು, ರಾಜ್ಯದ ಶಾಸನಸಭೆಯ ಚುನಾಯಿಸಲ್ಪಟ್ಟ ಸದಸ್ಯರಿಂದ ಅವರು ಚುನಾಯಿಸಲ್ಪಡುತ್ತಾರೆ; ವರ್ಗಾಯಿಸಬಹುದಾದ ಏಕೈಕ ಮತದ ಮೂಲಕ, ದಾಮಾಷಾ ಪ್ರಾತಿನಿಧ್ಯ ಪದ್ಧತಿಯ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಸಾರವಾಗಿ ಈ ಚುನಾಯಿಸುವಿಕೆ ನಡೆಯುತ್ತದೆ. ಪ್ರತಿ ಎರಡು ವರ್ಷಗಳಿಗೊಮ್ಮೆ, ಸರಿಸುಮಾರಾಗಿ ಪರಿಷತ್ತಿನ ಮೂರನೇ ಒಂದು ಭಾಗವು ಒಮ್ಮೆಗೆ ಚುನಾಯಿಸಲ್ಪಡುತ್ತದೆ.
ಸದನಗಳು
ಲೋಕಸಭೆ
ಲೋಕಸಭಾ (ಹಿಂದಿಯಲ್ಲಿ) ಅಥವಾ ಲೋಕಸಭೆಯು "ಪ್ರಜಾಪ್ರತಿನಿಧಿಗಳ ಸದನ" ಅಥವಾ ಕೆಳಮನೆ ಎಂದೂ ಕರೆಯಲ್ಪಡುತ್ತದೆ. ಬಹುಮಟ್ಟಿಗೆ ಇದರ ಎಲ್ಲಾ ಸದಸ್ಯರೂ ಭಾರತದ ನಾಗರಿಕರಿಂದ ನೇರವಾಗಿ ಚುನಾಯಿಸಲ್ಪಟ್ಟವರಾಗಿರುತ್ತಾರೆ. ಲಿಂಗ, ಜಾತಿ, ಧರ್ಮ ಅಥವಾ ವರ್ಣಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ, 18 ವರ್ಷಗಳಷ್ಟು ವಯಸ್ಸನ್ನು ದಾಟಿದ, ಅನ್ಯಥಾ ಅನರ್ಹಗೊಂಡಿರದ ಪ್ರತಿಯೊಬ್ಬ ನಾಗರಿಕನೂ ಮತ ಚಲಾಯಿಸಲು ಅರ್ಹನಾಗಿರುತ್ತಾನೆ.
ಭಾರತದ ಸಂವಿಧಾನದಲ್ಲಿ ರೂಪಿಸಲ್ಪಟ್ಟಿರುವಂತೆ ಲೋಕಸಭೆಯು 552 ಸಂಖ್ಯೆಯವರೆಗೆ ಸದಸ್ಯರನ್ನು ಹೊಂದಲು ಸಾಧ್ಯವಿದೆ. ಇದು ಐದು ವರ್ಷಗಳ ಒಂದು ಅವಧಿಯನ್ನು ಹೊಂದಿರುತ್ತದೆ.ಲೋಕಸಭೆಯಲ್ಲಿನ ಸದಸ್ಯತ್ವ ಪಡೆಯುವುದಕ್ಕೆ ಸಂಬಂಧಿಸಿದಂತೆ ಅರ್ಹತೆಯನ್ನು ಪಡೆಯಲು ವ್ಯಕ್ತಿಯೋರ್ವನು ಭಾರತದ ಓರ್ವ ನಾಗರಿಕನಾಗಿರಬೇಕು ಮತ್ತು 25 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದವನಾಗಿರಬೇಕು. ಅವನು ಮಾನಸಿಕವಾಗಿ ಸದೃಢನಾಗಿರಬೇಕು, ದಿವಾಳಿಯಾಗಿರಬಾರದು ಮತ್ತು ಅವನ/ಅವಳ ವಿರುದ್ಧ ಅಪರಾಧ ಸಂಬಂಧದ ಯಾವುದೇ ಕಾಯಿದೆ-ಕ್ರಮಗಳು ಜರುಗಿರಬಾರದು. ರಾಜ್ಯಗಳಲ್ಲಿನ ಏಕ ಸದಸ್ಯ ಜಿಲ್ಲೆಗಳಿಂದ 530 ಸಂಖ್ಯೆಯವರೆಗಿನ ಸದಸ್ಯರು, ಕೇಂದ್ರಾಡಳಿತ ಪ್ರದೇಶಗಳಿಂದ 20 ಸಂಖ್ಯೆಯವರೆಗಿನ ಸದಸ್ಯರು ಚುನಾಯಿಸಲ್ಪಡಬಹುದು; ಆಂಗ್ಲ-ಭಾರತೀಯ ಸಮುದಾಯವು ಸಮರ್ಥವಾಗಿ ಪ್ರತಿನಿಧಿಸಲ್ಪಟ್ಟಿಲ್ಲ ಎಂಬ ಭಾವನೆಯು ಒಂದು ವೇಳೆ ಭಾರತದ ರಾಷ್ಟ್ರಪತಿಗೆ ಬಂದಲ್ಲಿ, ಸದರಿ ಸಮುದಾಯಕ್ಕೆ ಸೇರಿದ ಎರಡಕ್ಕಿಂತ ಹೆಚ್ಚಿಲ್ಲದ ಸದಸ್ಯರನ್ನು ರಾಷ್ಟ್ರಪತಿಯವರು ನಾಮಕರಣ ಮಾಡುತ್ತಾರೆ. ಲೋಕಸಭೆಯು 545 ಸದಸ್ಯರನ್ನು ಹೊಂದಿದ್ದು, ಕೆಲವೊಂದು ಸ್ಥಾನಗಳನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳ ಪ್ರತಿನಿಧಿಗಳಿಗಾಗಿ ಮೀಸಲಿಡಲಾಗಿರುತ್ತದೆ.
ರಾಜ್ಯ ಸಭಾ ಅಥವಾ ರಾಜ್ಯಸಭೆಯನ್ನು "ರಾಜ್ಯಗಳ ಪರಿಷತ್ತು" ಅಥವಾ ಮೇಲ್ಮನೆ ಎಂಬುದಾಗಿಯೂ ಕರೆಯಲಾಗುತ್ತದೆ. ಇದರ ಸದಸ್ಯರು ರಾಜ್ಯಗಳ ವಿಧಾಯಕ ಘಟಕಗಳ ಸದಸ್ಯರಿಂದ ಪರೋಕ್ಷವಾಗಿ ಚುನಾಯಿಸಲ್ಪಡುತ್ತಾರೆ.
ರಾಜ್ಯಸಭೆಯು ಒಟ್ಟಾರೆಯಾಗಿ 250 ಸದಸ್ಯರನ್ನು ಹೊಂದಿದೆ. ಇದರ ಚುನಾವಣೆಗಳು ನಿಗದಿಪಡಿಸಲ್ಪಟ್ಟಿರುತ್ತವೆ ಮತ್ತು ಈ ಶಾಸನಸಭೆಯನ್ನು ವಿಸರ್ಜಿಸಲಾಗುವುದಿಲ್ಲ. ಇದರ ಪ್ರತಿಯೊಬ್ಬ ಸದಸ್ಯನೂ 6 ವರ್ಷಗಳವರೆಗಿನ ಒಂದು ಕಾರ್ಯಾವಧಿಯನ್ನು ಹೊಂದಿರುತ್ತಾನೆ ಮತ್ತು ಪ್ರತಿ 2 ವರ್ಷಗಳ ನಂತರ, ಒಟ್ಟು ಸ್ಥಾನಗಳ ಮೂರನೇ ಒಂದು ಭಾಗಕ್ಕಾಗಿ ಚುನಾವಣೆಗಳನ್ನು ನಡೆಸಲಾಗುತ್ತದೆ.
ರಾಜ್ಯದ ಶಾಸನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಗಳ ಪ್ರತಿನಿಧಿಗಳು ಚುನಾಯಿಸಲ್ಪಡುತ್ತಾರೆ; ವರ್ಗಾಯಿಸಬಹುದಾದ ಏಕ ಮತದ ಮೂಲಕ, ದಾಮಾಷಾ ಪ್ರಾತಿನಿಧ್ಯ ಪದ್ಧತಿಯ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಸಾರವಾಗಿ ಈ ಪ್ರಕ್ರಿಯೆ ನಡೆಯುತ್ತದೆ.
ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಆ ಪ್ರದೇಶಕ್ಕೆ ಸಂಬಂಧಿಸಿದಂತಿರುವ ಚುನಾಯಕ ಸಮುದಾಯವೊಂದರ ಸದಸ್ಯರಿಂದ ಪರೋಕ್ಷವಾಗಿ ಚುನಾಯಿಸಲ್ಪಡುತ್ತಾರೆ; ದಾಮಾಷಾ ಪ್ರಾತಿನಿಧ್ಯ ಪದ್ಧತಿಯ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಸಾರವಾಗಿ ಈ ಪ್ರಕ್ರಿಯೆಯು ನಡೆಯುತ್ತದೆ.
ದೇಶದ ಒಕ್ಕೂಟ ಸ್ವರೂಪವನ್ನು ಕಾಯ್ದುಕೊಂಡು ಹೋಗಲು ಅನುವಾಗುವಂತೆ ರಾಜ್ಯಗಳ ಪರಿಷತ್ತನ್ನು ವಿನ್ಯಾಸಗೊಳಿಸಲಾಗಿರುತ್ತದೆ. ರಾಜ್ಯವೊಂದರಿಂದ ಬರುವ ಸದಸ್ಯರ ಸಂಖ್ಯೆಯು ಆ ರಾಜ್ಯದ ಜನಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ (ಉದಾಹರಣೆಗೆ ಉತ್ತರ ಪ್ರದೇಶದಿಂದ 31 ಸದಸ್ಯರು ಮತ್ತು ನಾಗಾಲ್ಯಾಂಡ್‌ನಿಂದ ಓರ್ವ ಸದಸ್ಯ).
ವ್ಯಕ್ತಿಯೋರ್ವನು ರಾಜ್ಯಸಭೆಯ ಓರ್ವ ಸದಸ್ಯನಾಗಬೇಕೆಂದರೆ ಅವನಿಗೆ ಕನಿಷ್ಟ ಪಕ್ಷ 30 ವರ್ಷ ವಯಸ್ಸಾಗಿರಬೇಕಾಗುತ್ತದೆ.
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments