ಜಾಗತಿಕ ಸಂಸ್ಥೆಗಳು (PS)

ಜಾಗತಿಕ ಸಂಸ್ಥೆಗಳು (PS)

ಮುಖ್ಯಾಂಶಗಳು:
• ವಿಶ್ವಸಂಸ್ಥೆಯು ಪ್ರಾರಂಭವಾದ ªಂμಂಜ ಅಕ್ಟೋಬರ್ 24, 1945.
• ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.
• ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.
• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಅವಧಿ ಒಂಬತ್ತು ವರ್ಷಗಳು.
• ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.
• ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು ಬಾನಕಿ ಮೂನ್.
• ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.
• ಸಾರ್ಕ ಸ್ಥಾಪನೆಯಾದ ವರ್ಷ 1985.
• ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).
• ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.
• ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.
• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.
• ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಮಸ್ಥೆ : 1948
• ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.
• ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.
• ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.
• ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರ ಹೆಸರುಗಳನ್ನು ತಿಳಿಸಿ.
   ಇಂಗ್ಲಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.

2. ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾವವು?
1. ಸಾಮಾನ್ಯ ಸಭೆ
2. ಭದ್ರತಾ ಸಮಿತಿ
3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ
4. ಧರ್ಮದರ್ಶಿ ಸಮಿತಿ
5. ಸಚಿವಾಲಯ
6. ಅಂತರಾಷ್ಟ್ರೀಯ ನ್ಯಾಯಾಲಯ

3. ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವವು?
   ಇಂಗ್ಲೆಂಡ, ಅಮೆರಿಕಾ, ರಷ್ಯಾ, ಪ್ರಾನ್ಸ್, ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು

4. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ಸೂಚಿಯಲ್ಲಿರುವ ವಿಷಯಗಳಾವವು?
   ಜನಸಂಖ್ಯಾ ಸ್ಪೋಟ ತಡೆಗಟ್ಟುವದು, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕಾಂಶದ ಕೊರತೆ ಮುಂತಾದ ವಿಷಯಗಳು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿμಯಳಾಗಿವೆ.

5. ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳನ್ನು ಪಟ್ಟಿ ಮಾಡಿ.
• ಎಲ್ಲಾ ಉದ್ಯೋಗಗಳಲ್ಲಿಯೂ ಕಾರ್ಮಿಕರ ಜೀವನ ಮಟ್ಟವನ್ನು ಉತ್ತಮಗೊಳಿಸುವದು.
• ಬಾಲ ಕಾರ್ಮಿಕರ ನೇಮಕ ತಡೆಯುವದು.
• ಸ್ತ್ರೀ ಕಾರ್ಮಿಕರಿಗೆ ಹೆರಿಗೆ, ಪೌಷ್ಟಿಕ ಆಹಾರ, ವಸತಿ, ಮನರಂಜನೆ ಮುಂತಾದ ಸೌಲಭ್ಯಗಳನ್ನು ಒದಗಿಸುವದು.
• ಉದ್ದಿಮೆಗಳ ಆಡಳಿತದಲ್ಲಿ ಕಾರ್ಮಿಕರಿಗೂ ಪಾಲುಗೊಳ್ಳುವ ಅವಕಾಶಗಳನ್ನು ಕಲ್ಪಿಸುವದು.

6. ವಿಶ್ವಸಂಸ್ಥೆಯ ಉದ್ದೇಶಗಳನ್ನು ಪಟ್ಟಿ ಮಾಡಿರಿ.
• ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವದು.
• ವಿವಿಧ ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು ಬೆಳೆಸುವದು.
• ಮಾನವನ ಮೂಲಭೂತ ಹಕ್ಕುಗಳನ್ನು ರಕ್ಷಿಸುವದು.
• ಆಂತರಾಷ್ಟ್ರೀಯ ಸಮಸ್ಯೆಗಳನ್ನು ಅಂತರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು.
• ಅಂತರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವದು.
• ಪ್ರಪಂಚದ ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವದು.

7. Sಂಂಖಅ ನ್ನು ವಿಸ್ತರಿಸಿ.
   Sಂಂಖಅ – Souಣh ಂsiಚಿಟಿ ಂssoಛಿiಚಿಣioಟಿ oಜಿ ಖegioಟಿಚಿಟ ಛಿo-oಠಿeಡಿಚಿಣioಟಿ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ ) ಎಂದರ್ಥ.

8. ಸಾಮಾನ್ಯ ಸಭೆಯ ರಚನೆಯನ್ನು ವಿವರಿಸಿ.
• ಸಾಮಾನ್ಯ ಸಭೆಯು ಎಲ್ಲಾ ಸದಸ್ಯ ರಷ್ಯಾಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗಸಂಸ್ಥೆಯಾಗಿದೆ.
• ಪ್ರತಿಯೊಂದು ಸದಸ್ಯ ರಷ್ಯಾವು 5 ಸದಸ್ಯರನ್ನು ಇದಕ್ಕೆ ಕಳುಹಿಸಿಕೊಡುತ್ತದೆ. ಆದರೆ ಪ್ರತಿ ದೇಶP್ಕÉ ಒಂದೇ ªುÀತz À ಹPುÀ ್ಕ ಮಾತ್ರ ಇರುತ್ತದೆ.
• ಸಾಮಾನ್ಯ ಸಭೆಯು ತನ್ನ ಪ್ರಥಮ ಅಧಿವೇಶನದಲ್ಲಿಯೇ ಓರ್ವ ಅಧ್ಯಕ್ಷನನ್ನು ಆರಿಸುತ್ತದೆ.
• ಅದೇ ರೀತಿ 17 ಉಪಾಧ್ಯಕ್ಷರನ್ನು ಹಾಗೂ 7 ಸ್ಥಾಯಿ ಸಮಿತಿಗಳಿಗೆ ಏಳು ಮಂದಿ ಅಧ್ಯಕ್ಷರನ್ನೂ ಇಲ್ಲಿ ಆರಿಸಲಾಗುತ್ತದೆ.
9. ಸಾರ್ಕ ಸಂಸ್ಥೆಯಲ್ಲಿ ಇರುವ ಸದಸ್ಯ gಂμಂಔಛಿUಂಳು ಯಾವುವು?
   ಸಾರ್ಕ ಸಂಸ್ಥೆಯು 1985ರಲ್ಲಿ ಸ್ಥಾಪನೆಯಾಗಿದ್ದು, ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಾಲ್ಡೀವ್ಸ್, ಭೂತಾನ್ & ಅಪಘಾನಿಸ್ತಾನ ಪ್ರಮುಖ ಸದಸ್ಯ ರಾಷ್ಟ್ರಗಳಾಗಿವೆ.

10. ‘ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ’ ಈ ಹೇಳಿಕೆಯನ್ನು ಸಮರ್ಥಿಸಿ.
• ವಿಶ್ವದ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ.
• ಸೂಯೇಜ್ ಕಾಲುವೆ ಬಿಕ್ಕಟ್ಟು, ಇರಾನ್ ಸಂಘರ್ಷ, ಇಂಡೋನೇಷಿಯಾ, ಕಾಶ್ಮೀರ, ಪ್ಯಾಲೆಸ್ಟೈನ್, ಕೋರಿಯಾ, ಹಂಗೇರಿ, ಕಾಂಗೋ, ಅರಬ್-ಇಸ್ರೇಲ್, ಅಫಘಾನಿಸ್ತಾನ ಇತ್ಯಾದಿ ವಿವಾದಗಳ ಪರಿಹಾರಕ್ಕಾಗಿ ವಿಶ್ವಸಂಸ್ಥೆ ಶ್ರಮಿಸಿದೆ.
• ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣ ನಿಟ್ಟಿನಲ್ಲಿಯೂ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.

11. ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳಾವವು?
• ಜನರ ಜೀವನ ಮಟ್ಟ ಸುಧಾರಿಸುವದು, & ಉದ್ಯೋಗಾವಕಾಶ ಒದಗಿಸುವದು.
• ನೀರಾಶ್ರಿತರು, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆಗಳನ್ನು ನಿವಾರಿಸಲು ಕ್ರಮವಹಿಸುವದು.
• ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸುವದು.
• ಶೈಕ್ಷಣಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಏರ್ಪಡಿಸುವದು.
• ಜನಾಂಗ, ಲಿಂಗ, ಭಾಷೆ, ಧರ್ಮಗಳ ಭೇದ ಭಾವನೆಗಳಿಗೆ ಆಸ್ಪದ ನೀಡದೇ ಎಲ್ಲಾ ಮಾನವರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವದು.
• ಮಾನವ ಸಂಪನ್ಮೂಲ, ಸಂಸ್ಕøತಿ, ಶಿಕ್ಷಣ ಮುಂತಾದ ವಿμಯಗಳ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವದು.

12. ಯುನೆಸ್ಕೋದ ಕಾರ್ಯಗಳಾವವು?
• ಶಾಂತಿ ಸ್ಥಾಪನೆ.
• ಮಾನವನ ಹಕ್ಕುಗಳನ್ನು ರಕ್ಷಿಸುವದು
• ಶೈಕ್ಷಣಿಕ ಅಭಿವೃದ್ಧಿ ಸಾಧನೆ
• ಮಾನವರ ವಿಕಾಸಕ್ಕೆಂದೇ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆ.
• ಪರಿಸರ ಹಾಗೂ ಮಾನವರ ನಡುವೆ ಸಮತೋಲನ
• ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವದು.

13. ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಐ.ಎಂ.ಎಫ್‍ನ ಪಾತ್ರವನ್ನು ವಿಶ್ಷೇಷಿಸಿ.
   ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುತ್ತದೆ. ವಿಶ್ವ ವಾಣಿಜ್ಯ ವ್ಯವಹಾರದ ಬೆಳವಣಿಗೆಗೆ, ಆರ್ಥಿಕ ಸ್ಥಿರತೆ ಹಾಗೂ ಉತ್ತಮ ವಿದೇಶಿ ಪಾವತಿ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕರಿಸುತ್ತದೆ.

14. ಕಾಮನ್‍ವೆಲ್ತ್ ರಾಷ್ಟ್ರ ಸಂಘದ ಉದ್ದೇಶಗಳನ್ನು ಪಟ್ಟಿಮಾಡಿರಿ.
• ಪ್ರಜಾತಂತ್ರವನ್ನು ಎತ್ತಿಹಿಡಿಯುವದು.
• ಸ್ವಾತಂತ್ರ್ಯದ ಸಂರಕ್ಷಣೆ & ಬಡತನ ನಿರ್ಮೂಲನೆಗೆ ಕ್ರಮ ಕೈಗೊಳ್ಳುವದು.
• ವಿಶ್ವಶಾಂತಿಯನ್ನು ನೆಲೆಗೊಳಿಸುವದು.
• ಕ್ರೀಡೆ, ವಿಜ್ಞಾನ ಹಾಗೂ ಕಲೆಯ ಬೆಳವಣಿಗೆಗೆ ಪ್ರೋತ್ಸಾಹಿಸುವದು.

15. ಯುರೋಪಿಯನ್ ಯುನಿಯನ್ ಸಂಸ್ಥೆಯನ್ನು ವಿವರಿಸಿ.
    ಯುರೋಪಿಯನ್ ಯುನಿಯನ್ ಸಂಸ್ಥೆಯು 27 ಯುರೋಪಿನ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಇದು ಸದಸ್ಯ ರಾಷ್ಟ್ರಗಳ ಮಧ್ಯೆ ಸಮಾನ ಏಕ ಮಾರುಕಟ್ಟೆ, ಒಂದೇ ಚಲಾವಣೆಯ ಕರೆನ್ಸಿ, ಸಮಾನ ಕೃಷಿ ಹಾಗೂ ವ್ಯಾಪಾರ ಧೋರಣೆ ಇತ್ಯಾದಿಗಳಿಗೆ ಅವಕಾಶ ಮಾಡಿಕೊಡುತ್ತದೆ.

16. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಾರ್ಯಗಳು ಯಾವುವು?
• ಪ್ರತಿ ವರ್ಷದ ಸಪ್ಟಂಬರ್ ತಿಂಗಳಲ್ಲಿ ಸಾಮಾನ್ಯ ಸಭೆಯ ಅಧಿವೇಶನವನ್ನು ಕರೆಯುವದು.
• ಪ್ರಮುಖ ವಿμಯಗಳನ್ನು ಬಹುಮತದ ಸಿದ್ದಾಂತದಂತೆ ಅಥವಾ 2/3 ಮತಗಳ ಬೆಂಬಲದಿಂದ ನಿರ್ಧರಿಸುವದು.
• ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.
• ಪ್ರತಿಯೊಂದು ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು ನಿಗದಿ ಮಾಡುತ್ತದೆ.

17. ಸಾರ್ಕ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶವೇನು?
    ಆರ್ಥಿಕ ಸಂಬಂಧಗಳ ವೃದ್ಧಿ, ಸಾಮಾಜಿಕ ಪ್ರಗತಿ ಹಾಗೂ ಸಾಂಸ್ಕøತಿಕ ಬೆಳವಣಿಗೆಯನ್ನು ಪರಸ್ಪರ ಸಹಕಾರದೊಂದಿಗೆ ಸಾಧಿಸುವಿಕೆ ಸಾರ್ಕ ಸಂಸ್ಥೆಯ ಮೂಲ ಉದ್ದೇಶವಾಗಿದೆ.

18. ಆಹಾರ & ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶಗಳಾವುವು?
• ಪೌಷ್ಟಿಕ ಆಹಾರ ಒದಗಿಸುವದು.
• ಹಸಿವೆಯಿಂದ ಜಾಗತಿಕ ಜನಸಮುದಾಯವನ್ನು ವಿಮುಕ್ತಿಗೊಳಿಸುವುದು.
• ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದು.
• ಗ್ರಾಮಾಂತರ ಪ್ರದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವುದು.

19. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಗಳು ಯಾವುವು?
• ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುತ್ತದೆ.
• ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ನೂತನ ಸದಸ್ಯರ ಆಯ್ಕೆಯನ್ನು ಶಿಫಾರಸ್ಸು ಮಾಡುವ ಅಥವಾ ತಿರಸ್ಕರಿಸುವ ಆಧಿಕಾರವನ್ನು ಹೊಂದಿದೆ.
• ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯನ್ನು ಸೂಚಿಸುವ ಅಧಿಕಾರವನ್ನು ಹೊಂದಿದೆ.
• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ ಭಾಗವಹಿಸುತ್ತದೆ.
20. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ರಚನೆಯನ್ನು ವಿವರಿಸಿ.
• ಈ ಸಮಿತಿಯು 15 ಪ್ರತಿನಿಧಿಗಳಿಂದ ಕೂಡಿದ್ದು, ಅದರಲ್ಲಿ 5 ಖಾಯಂ ಸದಸ್ಯರು ಹಾಗೂ 10 ಹಂಗಾಮಿ ಸದಸ್ಯರನ್ನು ಹೊಂದಿದೆ.
• ಇಂಗ್ಲಂಡ, ಅಮೇರಿಕಾ, ರಷ್ಯಾ, ಪ್ರಾನ್ಸ್, ಚೀನಾ ಖಾಯಂ ಸದಸ್ಯ ರಾಷ್ಟ್ರಗಳು
• ಖಾಯಂ ಸದಸ್ಯರಿಗೆ ‘ವಿಟೋ’ ಅಂದರೆ ನಿಷೇದಾತ್ಮಕ ಮತ ಚಲಾಯಿಸುವ ವಿಶೇಷ ಅಧಿಕಾರ ಇದೆ.

21. ವಿಶ್ವಸಂಸ್ಥೆಯ ಸಾಧನೆಗಳಾವುವು?
• ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ.
• ವಿಶ್ವದ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ. ಉದಾ : ಸೂಯೇಜ್‍ಕಾಲುವೆ ಬಿಕ್ಕಟ್ಟು ನಿವಾರಣೆ, ಇರಾನ್ ¸ಂಘರ್ಷ, ಇಂಡೋನೆಷ್ಯಾ ಸ್ವಾತಂತ್ರ್ಯ ಘೋಷಣೆ.
• ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣ ನಿಟ್ಟಿನಲ್ಲಿಂiುÀ ೂ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.
• ವಿಶ್ವದ ಸಾಮಾಜಿಕ & ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮಾಡುತ್ತದೆ.
• ವರ್ಣಭೇದ ನೀತಿಯನ್ನು ಅಳಿಸಿ ಹಾಕುವಲ್ಲಿ, ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವ ಇತ್ಯಾದಿಗಳನ್ನು ಇಲ್ಲವಾಗಿಸುವಲ್ಲಿಯೂ ವಿಶ್ವಸಂಸ್ಥೆಯ ಪಾತ್ರ ಗಮನಾರ್ಹವಾದದು.

22. ಯುನಿಸೆಫ್ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶವೇನು?
    ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.

23. ಸಾರ್ಕ ಸಂಸ್ಥೆಯ ಪ್ರಗತಿಗೆ ತೊಡಕಾಗಿರುವ ಅದರ ಸೂತ್ರವೇನು?
    ‘ಎಲ್ಲಾ ನಿರ್ಣಯಗಳು ಸದಸ್ಯ ರಾÀಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು’ ಎಂಬ ಸಾರ್ಕನ ಸೂತ್ರವು ಅದರ ಪ್ರಗತಿಗೆ ಒಂದು ತೊಡಕಾಗಿ ಪರಿಣಮಿಸಿದೆ.

24. ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಗಳಾವುವು?
• ಕಾಲರಾ, ಪ್ಲೇಗ್, ಮಲೇರಿಯಾ, ಸಿಡುಬು ಮುಂತಾದ ರೋಗಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಯತ್ನಿಸುತ್ತದೆ.
• ಏಡ್ಸ್, ಕ್ಯಾನ್ಸರ್‍ನಂತಹ ಭೀಕರ ರೋಗಗಳಿಂದ ಪ್ರಪಂಚವನ್ನು ಮುಕ್ತಿಗೊಳಿಸಲು ಪ್ರಯತ್ನಿಸುತ್ತದೆ.
• ಸಿಡುಬು ರೋಗ ನಿವಾರಣೆ

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey

Post a Comment

0 Comments